ನವದೆಹಲಿ: ಎಸ್.ಎಸ್.ರಾಜಮೌಳಿ(SS Rajamouli) ನಿರ್ದೇಶನದ ‘ಆರ್ಆರ್ಆರ್’ ಚಿತ್ರ ಪ್ರತಿದಿನ ಬಾಕ್ಸ್ ಆಫೀಸ್ ನಲ್ಲಿಇತಿಹಾಸ ಸೃಷ್ಟಿಸುತ್ತಿದೆ. ಚಿತ್ರದ ಸ್ಟ್ರಾಂಗ್ ಸ್ಟಾರ್ಕ್ಯಾಸ್ಟ್ ಆಗಿರುವ ರಾಮ್ ಚರಣ್, ಜೂ.ಎನ್ಟಿಆರ್(Jr NTR), ಆಲಿಯಾ ಭಟ್, ಅಜಯ್ ದೇವಗನ್, ಒಲಿವಿಯಾ ಮೋರಿಸ್, ರೇ ಸ್ಟೀವನ್ಸನ್ ಮತ್ತು ಅಲಿಸನ್ ತೆರೆಮೇಲೆ ಅದ್ಭುತ ಮ್ಯಾಜಿಕ್ ಮಾಡಿದ್ದಾರೆ. ಎಲ್ಲ ವರ್ಗದ ಸಿನಿ ಪ್ರೇಕ್ಷಕರು ಹುಚ್ಚೆದ್ದು ಸಿನಿಮಾ ನೋಡುತ್ತಿದ್ದಾರೆ. ಹೀಗಾಗಿಯೇ ಚಿತ್ರ ಕೇವಲ 5 ದಿನದಲ್ಲಿ ವಿಶ್ವಾದ್ಯಂತ 600 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ.
600 ಕೋಟಿ ರೂ. ಕ್ಲಬ್ ಸೇರಿದ ಚಿತ್ರ
#RRRMovie WW Box Office
ENTERS ₹600 cr club in just 5 days.
Day 1 - ₹ 257.15 cr
Day 2 - ₹ 114.38 cr
Day 3 - ₹ 118.63 cr
Day 4 - ₹ 72.80 cr
Day 5 - ₹ 58.46 cr
Total - ₹ 621.42 cr#RamCharan #JrNTR #SSRajamouli— Manobala Vijayabalan (@ManobalaV) March 30, 2022
ಬುಧವಾರ ಖ್ಯಾತ ಸಿನಿಮಾ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಟ್ವೀಟ್ ಮಾಡಿದ್ದು, ‘ಆರ್ಆರ್ಆರ್’ ಸಿನಿಮಾ(RRR Box Office Collection) ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಧೂಳಿಪಟ ಮಾಡುವ ಮೂಲಕ ಕೇವಲ 5 ದಿನಗಳಲ್ಲಿ 600 ಕೋಟಿ ಕ್ಲಬ್ ಪ್ರವೇಶಿಸಿದೆ. ದಿನ 1 ಶುಕ್ರವಾರ - ₹257.15 ಕೋಟಿ, ದಿನ 2 ಶನಿವಾರ - ₹114.38 ಕೋಟಿ, ದಿನ 3 ಭಾನುವಾರ - ₹118.63 ಕೋಟಿ, ದಿನ 4 ಸೋಮವಾರ - ₹72.80 ಕೋಟಿ, ದಿನ 5 ಮಂಗಳವಾರ - ₹58.46 ಕೋಟಿ, ಒಟ್ಟು - ₹621.42 ಕೋಟಿ ರೂ. ಗಳಿಸಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: KGF verse:ಕೆಜಿಎಫ್ ತಂಡದಿಂದ ಮತ್ತೊಂದು ಸರ್ಪ್ರೈಸ್! ನೀವು ಹೋಗಬಹುದು ನರಾಚಿ ಲೋಕಕ್ಕೆ..
ಹಿಂದಿ ಆವೃತ್ತಿಯಲ್ಲಿ ‘ಬಾಹುಬಲಿ-1’ ದಾಖಲೆ ಉಡಿಸ್!
‘RRR’ ಶೀಘ್ರವೇ ‘ಬಾಹುಬಲಿ: ದಿ ಬಿಗಿನಿಂಗ್’(Baahubali: The Beginning)ನ ಆಲ್ಟೈಮ್ ಬಾಕ್ಸ್ ಆಫೀಸ್ ಕಲೆಕ್ಷನ್ ಮೀರಿಸಲಿದೆಯಂತೆ. ರಾಜಮೌಳಿ ಅವರ ಆಕ್ಷನ್ ಮೂವಿ ಸರಣಿ 'ಬಾಹುಬಲಿ' ಮೊದಲ ಭಾಗದ ಹಿಂದಿ ಆವೃತ್ತಿಯು ಸುಮಾರು 118 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದೀಗ ‘RRR’ ಹಿಂದಿ ಆವೃತ್ತಿ ಈಗಾಗಲೇ 5 ದಿನಗಳಲ್ಲಿ ಬರೋಬ್ಬರಿ 107.59 ಕೋಟಿ ರೂ. ಗಳಿಸಿದೆ.
ಹಲವು ದಾಖಲೆ ಮಾಡಿದ RRR
#RRR *HINDI* benchmarks...
⭐ #SSRajamouli's third film to cross ₹ 💯 cr, #JrNTR - #RamCharan's first century
⭐ Will cross *lifetime biz* of #Baahubali [2015] in *Week 1*
⭐ Sixth 💯 cr film [post pandemic], after #Sooryavanshi, #83TheFilm, #Pushpa, #GangubaiKathiawadi and #TKF pic.twitter.com/bJ63EYEcg8— taran adarsh (@taran_adarsh) March 30, 2022
ಈ ಚಿತ್ರ ಇದುವರೆಗೆ ಹಲವು ದಾಖಲೆಗಳನ್ನು ಮಾಡಿದ್ದು, ಶೀಘ್ರವೇ ಮತ್ತಷ್ಟು ದಾಖಲೆ(RRR Box Office First Week)ಗಳನ್ನು ಸೃಷ್ಟಿಸಲಿದೆ. ಈ ಬಗ್ಗೆ ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ‘RRR ಸಿನಿಮಾ ಹೊಸ ಬೆಂಚ್ಮಾರ್ಕ್ ಸೃಷ್ಟಿಸಿದೆ. ಜೂ.ಎನ್ಟಿಆರ್, ರಾಮಚರಣ್ ಅಭಿನಯದ ಎಸ್.ಎಸ್.ರಾಜಮೌಳಿ ನಿರ್ದೇಶನದ ಈ ಸಿನಿಮಾ ಹಿಂದಿಯಲ್ಲಿ ಮೊದಲ ಬಾರಿಗೆ 100 ಕೋಟಿ ರೂ. ಗಳಿಸಿದೆ. ಕೊರೊನಾ ಸಾಂಕ್ರಾಮಿಕದ ನಂತರ 100 ಕೋಟಿ ರೂ. ಕ್ಲಬ್ ಸೇರಿದ 6ನೇ ಸಿನಿಮಾ ಆಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Deepika Padakone: ರಣವೀರ್ ಸಿಂಗ್ ಪ್ರೀತಿಯಿಂದ ದೀಪಿಕಾಗೆ ಇಟ್ಟ ನಿಕ್ ನೇಮ್ ಏನು ಗೊತ್ತೇ..?
‘ಬಾಹುಬಲಿ: ದಿ ಬಿಗಿನಿಂಗ್’ ದಾಖಲೆ ಮುರಿಯಲಿರುವ RRR
ಎಲ್ಲಾ ಭಾಷೆಗಳಲ್ಲಿ ‘ಬಾಹುಬಲಿ: ದಿ ಬಿಗಿನಿಂಗ್’(Baahubali: The Beginning) ಭಾರತದಲ್ಲಿ 516 ಕೋಟಿ ರೂ. ಗಳಿಸಿದೆ ಮತ್ತು ‘RRR’ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಸೋಮವಾರದವರೆಗೆ 406 ಕೋಟಿ ರೂ. ಗಳಿಸಿದೆ. ಹೀಗಾಗಿ ಎಲ್ಲಾ ಭಾಷೆಗಳ ಕಲೆಕ್ಷನ್ ಪರಿಗಣಿಸಿದರೂ ಮಾರ್ಚ್ 25ರಂದು ಬಿಡುಗಡೆಯಾದ ಚಿತ್ರ ಮೊದಲ ವಾರದಲ್ಲೇ ‘ಬಾಹುಬಲಿ’ ಕಲೆಕ್ಷನ್ಅನ್ನು ಹಿಂದಿಕ್ಕಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.