ಮೊನ್ನೆಯಷ್ಟೇ ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅವರು ತಮ್ಮ ರಾಜಕೀಯ ಪ್ರವೇಶವನ್ನು ಖಚಿತಗೊಳಿಸಿದ್ದು, ಇದಕ್ಕೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತವು ದೊರೆತಿದೆ. ಅಲ್ಲದೆ, ರಜನಿಕಾಂತ್ ತಮ ಅಭಿಮಾನಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ನೂತನ ವೆಬ್ ಸೈಟ್ ಅನ್ನು ಕೂಡ ಸೋಮವಾರ ಬಿಡುಗಡೆ ಮಾಡಿದ್ದಾರೆ.
ಈ ಮೂಲಕ ರಜನಿಕಾಂತ್ ಸಂಪೂರ್ಣವಾಗಿ ತಮ್ಮನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಖಚಿತವಾಗಿದ್ದು, ತಮಿಳು ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ನಿಧನರಾದ ನಂತರ ರಾಜಕೀಯಕ್ಕೆ ಕಾಲಿಡುತ್ತಿರುವ ಪ್ರಸಿದ್ಧ ಚಿತ್ರನಟ ಇವರಾಗಿದ್ದಾರೆ.
ಈ ಕುರಿತು ಟ್ವಿಟ್ಟರ್ ಮೂಲಕ ಅಭಿಪ್ರಾಯ ತಿಳಿಸಿರುವ ನಿರ್ಮಾಪಕ ರಾಮ್ ಗೋಪಾಲ ವರ್ಮ ಅವರು, ರಜನಿಕಾಂತ್ ಅವರ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದ್ದಾರೆ. "ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಸಂದರ್ಭ ಎಲ್ಲರಲ್ಲೂ ಬಹಳ ಕುತೂಹಲವನ್ನು ಉಂಟುಮಾಡಿದಂತೆ ಹಿಂದೆಂದೂ ಈ ರೀತಿಯ ಸಂದರ್ಭವನ್ನು ಕಂಡಿರಲಿಲ್ಲ. ಇಡೀ ತಮಿಳುನಾದಿನ ಜನತೆ ರಾಜನಿಗೆ ಮತ ಹಾಕಲಿದೆ" ಎಂದು ಅವರು ಹೇಳಿದ್ದಾರೆ.
Never seen more thundering power than in @superstarrajini the way he announced his political entry ..My prediction is each and everyone in entire TN will vote only for him..it will be dumb of any political party to contest against him
— Ram Gopal Varma (@RGVzoomin) January 2, 2018