ನವದೆಹಲಿ: ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ಮೂಡಿ ಬರಲಿರುವ 'ಬ್ರಹ್ಮಾಸ್ತ್ರ' ಚಿತ್ರದ ಬಿಡುಗಡೆಯ ಬಳಿಕ ಬಾಲಿವುಡ್ ನಲ್ಲಿ ಕ್ಯೂಟ್ ಕಪಲ್ ಎಂದೇ ಖ್ಯಾತರಾದ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಬಾಲಿವುಡ್ ನ ಸ್ಟೈಲಿಶ್ ಕಪಲ್ ಗಳಲ್ಲಿ ಒಂದಾಗಿರುವ ಅಲಿಯಾ ಹಾಗೂ ರಣಬೀರ್ ಹಲವು ದಿನಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದು, ಇಬ್ಬರು ಒಂದಾಗುವ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ಹಾವು ದಿನಗಳಿಂದ ಈ ಇಬ್ಬರ ಸಂಬಂಧಗಳ ಕುರಿತು ಊಹಾಪೋಹಗಳು ಕೇಳಿ ಬರಲಾರಂಭಿಸಿವೆ. ಮಾಧ್ಯಮಗಳ ವರದಿ ಪ್ರಕಾರ ಇದೇ ವರ್ಷದ ಡಿಸೆಂಬರ್ ನಲ್ಲಿ ಈ ಉಭಯರ ವಿವಾಹ ನಡೆಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಕಪೂರ್ ಕುಟುಂಬ ಸದಸ್ಯರು ತಮ್ಮ ಸಿದ್ಧತೆ ಆರಂಭಿಸಿದ್ದಾರೆ ಎನ್ನಲಾಗಿದೆ.
'ಓಪನ್' ಮ್ಯಾಗಜೀನ್ ನಲ್ಲಿ ಈ ಕುರಿತು ಕಾಲಮ್ ಬರೆದಿರುವ ಖ್ಯಾತ ಚಿತ್ರ ವಿಮರ್ಶಕ ರಾಜೀವ್ ಮಸಂದ್ ಇವರ ಮದುವೆಯ ಕುರಿತು ಉಲ್ಲೇಖಿಸಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, 'ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ತಮ್ಮ ಎರಡು ವರ್ಷಗಳ ಸುದೀರ್ಘ ಸಂಬಂಧದ ಬಳಿಕ ಈ ವರ್ಷದ ಡಿಸೆಂಬರ್ ನಲ್ಲಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ' ಎಂದಿದ್ದಾರೆ. ಈ ಇಬ್ಬರು ಚಿತ್ರ 'ಬ್ರಹ್ಮಾಸ್ತ್ರ'ದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಈ ಚಿತ್ರ ಡಿಸೆಂಬರ್ 4ರಂದು ಬಿಡುಗಡೆಯಾಗಲಿದೆ. ಈ ಚಿತ್ರ ಬಿಡುಗಡೆಯಾದ ಬಳಿಕ ಈ ಇಬ್ಬರು ಹಸೆಮಣೆ ತುಳಿಯಲಿದ್ದಾರೆ ಎಂದೇ ಅಂದಾಜಿಸಲಾಗುತ್ತಿದೆ.
ಆದರೆ, ಈ ಇಬ್ಬರ ಮದುವೆಯ ಕುರಿತು ಅಲಿಯಾ ಆಗಲಿ ಅಥವಾ ರಣಬೀರ್ ಆಗಲಿ ಅಥವಾ ಅವರ ಯಾವುದೇ ಕುಟುಂಬ ಸದಸ್ಯರಾಗಲಿ ಯಾವುದೇ ರೀತಿಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.