ಒಟಿಟಿಯಲ್ಲೂ 'Animal' ರಾಕ್, 3 ದಿನದಲ್ಲೇ ಹೊಸ ದಾಖಲೆ ಬರೆದ ರಣಬೀರ್ ಕಪೂರ್ ಚಿತ್ರ !

Animal OTT Record: ಗಲ್ಲಾಪೆಟ್ಟಿಗೆಯಲ್ಲಿ ಸಂಚಲನ ಮೂಡಿಸಿದ ನಂತರ ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರ ಒಟಿಟಿಯಲ್ಲಿ ಸದ್ದು ಮಾಡುತ್ತಿದೆ. ಇದೀಗ ಈ ಚಿತ್ರದ ಹೆಸರಿನಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ.  

Written by - Chetana Devarmani | Last Updated : Feb 1, 2024, 06:21 PM IST
  • ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದ್ದ ಅನಿಮಲ್‌
  • ಒಟಿಟಿಯಲ್ಲಿ ಸದ್ದು ಮಾಡುತ್ತಿರುವ ರಣಬೀರ್‌ ಕಪೂರ್‌ ಸಿನಿಮಾ
  • ಚಿತ್ರದ ಹೆಸರಿನಲ್ಲಿ ಮತ್ತೊಂದು ದಾಖಲೆ ನಿರ್ಮಾಣ
ಒಟಿಟಿಯಲ್ಲೂ 'Animal' ರಾಕ್, 3 ದಿನದಲ್ಲೇ ಹೊಸ ದಾಖಲೆ ಬರೆದ ರಣಬೀರ್ ಕಪೂರ್ ಚಿತ್ರ ! title=

Animal Movie Records: ರಣಬೀರ್‌ ಕಪೂರ್‌ ಅಭಿನಯದ ಅನಿಮಲ್‌ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಖತ್‌ ಸದ್ದು ಮಾಡಿತ್ತು. ಇದೀಗ ಅನಿಮಲ್ ಚಿತ್ರ OTT ನಲ್ಲಿಯೂ ದಾಖಲೆಗಳನ್ನು ಮುರಿಯುತ್ತಿದೆ. ಒಟಿಟಿಯಲ್ಲಿ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಮತ್ತೊಂದು ದಾಖಲೆ ಸೃಷ್ಟಿಯಾಗಿದೆ. ಕೇವಲ ಮೂರೇ ದಿನಗಳಲ್ಲಿ ಈ ಚಿತ್ರವನ್ನು 2 ಕೋಟಿ 80 ಲಕ್ಷ ಗಂಟೆ ವೀಕ್ಷಿಸಲಾಗಿದೆ. ಅಂದರೆ 20.8 ಮಿಲಿಯನ್ ವೀಕ್ಷಣೆಗಳು ಬಂದಿವೆ.

ಇದನ್ನೂ ಓದಿ: ಪ್ರಭಾಸ್‌ 2.20 ನಿಮಿಷ ಡೈಲಾಗ್‌ಗೆ ಪಡೆದದ್ದು ಎಷ್ಟು ಕೋಟಿ ಗೊತ್ತೇ.. ಪ್ರತಿ ಸೆಕೆಂಡ್‌ಗೆ ಸಿಕ್ಕ ಹಣ ಎಷ್ಟು? 

ಅನಿಮಲ್‌ ಚಿತ್ರ ಜನವರಿ 26 ರಂದು OTT ನಲ್ಲಿ ಬಿಡುಗಡೆಯಾಯಿತು. ಮೂರೇ ದಿನಗಳಲ್ಲಿ ಚಿತ್ರಕ್ಕೆ ಒಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 3 ದಿನಗಳಲ್ಲಿ ಹೊಸ ದಾಖಲೆಯನ್ನು ಅನಿಮಲ್‌ ಸಿನಿಮಾ ಮಾಡಿದೆ. 

ಅನಿಮಲ್‌ ಚಿತ್ರದಲ್ಲಿ ರಣಬೀರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು ಭಾರೀ ಪ್ರಶಂಸೆ ಗಳಿಸಿದೆ. ವರದಿಯ ಪ್ರಕಾರ, ಚಿತ್ರವು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 643 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ವಿಶ್ವದಾದ್ಯಂತ 890 ಕೋಟಿ ಕಲೆಕ್ಷನ್ ಆಗಿದೆ. 

ಇದನ್ನೂ ಓದಿ: ಮೆಟ್ರೋದಲ್ಲಿ ರವೀನಾ ಟಂಡನ್ ಕಂಡು ಅಭಿಮಾನಿಗಳು ಶಾಕ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News