ಪತ್ನಿಯ ರಹಸ್ಯ ಬಯಲು ಮಾಡಿದ Ranveer Singh, ಈ ಕೆಲಸ ಮಾಡುತ್ತಾರಂತೆ Deepika Padukone

ರಣವೀರ್‌ ಸಿಂಗ್‌ ಅತ್ಯುತ್ತಮ ಹೋಸ್ಟ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಕಾರ್ಯಕ್ರಮಗಳಲ್ಲಿ ಸಾಬೀತಾಗಿದೆ. ಆದರೆ ರಣವೀರ್‌ ಇದರ ಸಂಪೂರ್ಣ ಶ್ರೇಯಸ್ಸನ್ನು ಅವರು ತಮ್ಮ ಪತ್ನಿ ದೀಪಿಕಾಗೆ ಸಲ್ಲಿಸುತ್ತಾರೆ. 

Written by - Ranjitha R K | Last Updated : Oct 8, 2021, 04:33 PM IST
  • ರಣವೀರ್‌ ಸಿಂಗ್‌ ಅತ್ಯುತ್ತಮ ಹೋಸ್ಟ್‌
  • ರಣವೀರ್‌ ಇದರ ಸಂಪೂರ್ಣ ಶ್ರೇಯಸ್ಸನ್ನು ದೀಪಿಕಾಗೆ ಸಲ್ಲಿಸುತ್ತಾರೆ.
  • ಅಕ್ಟೋಬರ್ 16 ರಿಂದ 'ದಿ ಬಿಗ್ ಪಿಕ್ಚರ್'
ಪತ್ನಿಯ ರಹಸ್ಯ ಬಯಲು ಮಾಡಿದ Ranveer Singh, ಈ ಕೆಲಸ ಮಾಡುತ್ತಾರಂತೆ Deepika Padukone

ನವದೆಹಲಿ : ಬಾಲಿವುಡ್ ತಾರೆ ರಣವೀರ್ ಸಿಂಗ್  (Ranveer Singh) ಪತ್ನಿ ದೀಪಿಕಾ ಪಡುಕೋಣೆ (Deepika Padukone) ಅವರ ವಿಶೇಷ ಅಭಿಮಾನಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ವಿಷಯವನ್ನು ರಣವೀರ್‌ ಬಹಳಷ್ಟು ಸಲ ಹೇಳಿಕೊಂಡಿದ್ದಾರೆ. ಇದೀಗ ಒತ್ನಿ ದೀಪಿಕಾ ಬಗ್ಗೆ ರಣವೀರ್‌ ಹೇಳಿರುವ ಈ ವಿಚಾರ ಅವರ ಅಭಿಮಾನಿಗಳಿಗೆ ಅತೀವ ಸಂತೋಷವನ್ನು ಉಂಟು ಮಾಡಿದೆ.

ದೀಪಿಕಾ ಸಹಾಯ : 
ರಣವೀರ್‌ ಸಿಂಗ್‌ (Ranveer singh) ಅತ್ಯುತ್ತಮ ಹೋಸ್ಟ್‌ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಕಾರ್ಯಕ್ರಮಗಳಲ್ಲಿ ಸಾಬೀತಾಗಿದೆ. ಆದರೆ ರಣವೀರ್‌ ಇದರ ಸಂಪೂರ್ಣ ಶ್ರೇಯಸ್ಸನ್ನು ಅವರು ತಮ್ಮ ಪತ್ನಿ ದೀಪಿಕಾಗೆ ಸಲ್ಲಿಸುತ್ತಾರೆ. ದೀಪಿಕಾ ತನ್ನ ಪಾಲಿನ ಅತ್ಯುತ್ತಮ ಕ್ರಿಟಿಕ್‌ ಎಂದು ಹೇಳಿದ್ದಾರೆ. 'ದಿ ಬಿಗ್ ಪಿಕ್ಚರ್' ಬಿಡುಗಡೆ ಸಮಾರಂಭದಲ್ಲಿ, ರಣವೀರ್ ದೀಪಿಕಾ ಅವರಿಗೆ ನೀಡುವ ಸಹಾಯದ ಬಗ್ಗೆ ಹೇಳಿದ್ಧಾರೆ. 

ಇದನ್ನೂ ಓದಿ : Aryan Khan ಬೆಂಬಲಕ್ಕೆ ನಿಂತ ಹೃತಿಕ್ ರೋಶನ್, ತಕ್ಷಣ ಪ್ರತಿಕ್ರಿಯಿಸಿದ ಕಂಗನಾ ರಣಾವತ್

ದೀಪಿಕಾ ಸಲಹೆ :  
ಹೊಸ್ಟ್‌ ಆಗಿ ಉತ್ತಮ ಕೆಲಸ ಮಾಡಲು ದೀಪಿಕಾ (Deepika Padokone) ನನಗೆ ಸಾಕಷ್ಟು ಸಲಹೆಗಳನ್ನು ನೀಡುತ್ತಾರೆ. ದೀಪಿಕಾ ತನ್ನ ವಿಶ್ವಾಸಾರ್ಹ ವಿಮರ್ಶೆ ಎಂದು ಹೇಳಿದ್ದಾರೆ. ಅಲ್ಲದೆ, ದೀಪಿಕಾ ರಚನಾತ್ಮಕವಾಗಿ ವಿಚಾರಗಳನ್ನು ತೆರೆದಿಡುತ್ತಾರೆ, ಎಂದಿದ್ದಾರೆ. ಅಲ್ಲದೆ, ಇಂಥಹ ಚುರುಕು ಬುದ್ದಿಯ ಯುವತಿ ನನ್ನ ಪತ್ನಿಯಾಗಿರುವುದಕ್ಕೆ ಅಬಾರಿಯಾಗಿರುವುದಾಗಿ ಹೇಳಿದ್ದಾರೆ. 

 ಅಕ್ಟೋಬರ್ 16 ರಿಂದ ಮೂಡಿ ಬರಲಿದೆ ಶೋ : 
ಶೀಘ್ರದಲ್ಲೇ ರಣವೀರ್ 'ದಿ ಬಿಗ್ ಪಿಕ್ಚರ್' (The big pictures) ಕಾರ್ಯಕ್ರಮದ ಮೂಲಕ ಒಟಿಟಿಗೆ ಪಾದಾರ್ಪಣೆ ಮಾಡಲಿದ್ದಾರೆ. ಇದು ಅಕ್ಟೋಬರ್ 16 ರಂದು ಕಲರ್ಸ್, ವೂಟ್ ಮತ್ತು ಜಿಯೋ ಟಿವಿಯಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ : Katrina Kaif: ಅಕ್ಷಯ್ ಕುಮಾರ್‌ಗೆ ರಾಖಿ ಕಟ್ಟಲು ಬಯಸಿದ್ದ ಕತ್ರಿನಾ ಕೈಫ್, ಕಾರಣ ಏನು ಗೊತ್ತಾ?

ರಣವೀರ್ ಮುಂಬರುವ ಚಿತ್ರಗಳು : 
ಕೆಲಸದ ಬಗ್ಗೆ ಹೇಳುವುದಾದರೆ, ರಣವೀರ್ ಶೀಘ್ರದಲ್ಲೇ ಕಬೀರ್ ಖಾನ್ ಅವರ '83'ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು 1983 ರಲ್ಲಿ ಭಾರತದ ಐತಿಹಾಸಿಕ ವಿಶ್ವಕಪ್ ಕ್ರಿಕೆಟ್ ಗೆಲುವನ್ನು ಆಧರಿಸಿದೆ. ಇದರ ಹೊರತಾಗಿ, ರೋಹಿತ್ ಶೆಟ್ಟಿಯವರ ಹಾಸ್ಯ ಚಿತ್ರ 'ಸರ್ಕಸ್' ಮತ್ತು ಆಕ್ಷನ್ ಡ್ರಾಮಾ 'ಸೂರ್ಯವಂಶಿ ಯಲ್ಲೂ ನಟಿಸುತ್ತಿದ್ದಾರೆ. ಇನ್ನು ಯಶ್ ರಾಜ್ ಫಿಲ್ಮ್ಸ್ ನ ದಿವ್ಯಾಂಗ್ ಠಕ್ಕರ್ ನಿರ್ದೇಶನದ 'ಜಯೇಶ್ಭಾಯ್ ಜೋರ್ದಾರ್' ನಲ್ಲಿಯೂ ಅವರ ಅಭಿನಯವನ್ನು ಕಾಣಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

More Stories

Trending News