ʼಆʼ ನಟನೊಂದಿಗೆ ನಟಿಸಲು ಇಷ್ಟವಿಲ್ಲ ಎಂದು ಸಿನಿಮಾ ಕೈ ಬಿಟ್ಟ ರಶ್ಮಿಕಾ ಮಂದಣ್ಣ! ಅಷ್ಟಕ್ಕೂ ಹಿರೋ ಯಾರು?

Rashmika Mandanna: ಮಾಸ್ ರಾಜ ರವಿತೇಜ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಸಹಾಯಕ ನಿರ್ದೇಶಕನಾಗಿ ವೃತ್ತಿ ಜೀವನ ಆರಂಭಿಸಿದ ರವಿತೇಜ ನಂತರ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಚಿತ್ರಗಳಲ್ಲಿ ನಟಿಸಿದ್ದರು.  

Written by - Savita M B | Last Updated : Aug 6, 2024, 05:30 PM IST
  • ನಟ ರವಿತೇಜ ಪೂರಿ ಜಗನ್ನಾಥ್ ನಿರ್ದೇಶನದ ಇಟ್ಲು ಶ್ರಾವಣಿ ಸುಬ್ರಹ್ಮಣ್ಯ ಚಿತ್ರದ ಮೂಲಕ ಯಶಸ್ವಿ ನಾಯಕ ಎನಿಸಿಕೊಂಡರು.
  • ರವಿತೇಜ ನಾಯಕನಾಗಿ ತ್ರಿನಾಥ ರಾವ್ ನಿರ್ದೇಶನದಲ್ಲಿ ‘ಧಮಾಕಾ’ ಸಿನಿಮಾ ತೆರೆಕಂಡಿದ್ದು ಗೊತ್ತೇ ಇದೆ.
ʼಆʼ ನಟನೊಂದಿಗೆ ನಟಿಸಲು ಇಷ್ಟವಿಲ್ಲ ಎಂದು ಸಿನಿಮಾ ಕೈ ಬಿಟ್ಟ ರಶ್ಮಿಕಾ ಮಂದಣ್ಣ! ಅಷ್ಟಕ್ಕೂ ಹಿರೋ ಯಾರು? title=

Rashmika Mandanna Refuse To Act With Actor Ravi teja: ನಟ ರವಿತೇಜ ಪೂರಿ ಜಗನ್ನಾಥ್ ನಿರ್ದೇಶನದ ಇಟ್ಲು ಶ್ರಾವಣಿ ಸುಬ್ರಹ್ಮಣ್ಯ ಚಿತ್ರದ ಮೂಲಕ ಯಶಸ್ವಿ ನಾಯಕ ಎನಿಸಿಕೊಂಡರು. ಆ ನಂತರ ಅವರು ಸಾಲು ಸಾಲು ಚಿತ್ರಗಳನ್ನು ಮಾಡುವ ಮೂಲಕ ಸ್ಟಾರ್ ಹೀರೋ ಮಟ್ಟಕ್ಕೆ ಏರಿದರು. ಈ ಹಿಂದೆ ಹಲವು ನಾಯಕರ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದ ರವಿತೇಜ, ನಂತರ ಅದೇ ಹೀರೋಗಳು ರವಿತೇಜ ಸಿನಿಮಾದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದರು.

ಎಲ್ಲಾ ಹೀರೋಗಳ ಅಭಿಮಾನಿಗಳು ರವಿತೇಜಾ ಅವರನ್ನು ಪ್ರೀತಿಸುತ್ತಾರೆ. ಈಗಂತೂ ರವಿತೇಜ ಯಂಗ್ ಹೀರೋಗಳಿಗೆ ಸಖತ್ ಪೈಪೋಟಿ ನೀಡುತ್ತಿದ್ದಾರೆ. ಈ ನಡುವೆ ರವಿತೇಜಾ ಅವರೊಂದಿಗೆ ನಟಿಸಲು ಆಫರ್ ಬಂದರೂ ನಾಯಕಿಯೊಬ್ಬರು ಅವರ ಜೊತೆ ಕೆಲಸ ಮಾಡಲು ಇಚ್ಛಿಸದೇ ಚಿತ್ರದಿಂದ ಹಿಂದೆ ಸರಿದಿರುವ ವಿಚಾರ ಬೆಳಕಿಗೆ ಬಂದಿದೆ. 

ಇದನ್ನೂ ಓದಿ-68 ವರ್ಷ... ಒಂದೇ ವರ್ಷದಲ್ಲಿ 14 ಸೂಪರ್‌ ಹಿಟ್‌ ಸಿನಿಮಾ! ಅಮಿತಾಬ್‌ ಬಚ್ಚನ್‌ʼಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ಸ್ಟಾರ್‌!!

ರವಿತೇಜ ನಾಯಕನಾಗಿ ತ್ರಿನಾಥ ರಾವ್ ನಿರ್ದೇಶನದಲ್ಲಿ ‘ಧಮಾಕಾ’ ಸಿನಿಮಾ ತೆರೆಕಂಡಿದ್ದು ಗೊತ್ತೇ ಇದೆ. ಈ ಚಿತ್ರಕ್ಕೆ ಮೂಲತಃ ರಶ್ಮಿಕಾ ನಾಯಕಿ ಎಂದು ಭಾವಿಸಲಾಗಿತ್ತು. ತ್ರಿನಾಥ ರಾವ್ ಕೂಡ ರಶ್ಮಿಕಾ ಅವರನ್ನು ಸಂಪರ್ಕಿಸಿದ್ದಾರೆ. ಏನಾಯಿತೋ ಗೊತ್ತಿಲ್ಲ ಈ ಸಿನಿಮಾದಲ್ಲಿ ರಶ್ಮಿಕಾ ಬದಲಿಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದರು.. ಆದರೆ ಇವರಬ್ಬರ ನಡುವಿನ ವಯಸ್ಸಿನ ಅಂತರವೂ ಟೀಕೆಗೆ ಗುರಿಯಾಗಿತ್ತು. ಆದರೆ ಪ್ರೇಕ್ಷಕರು ತೆರೆಯ ಮೇಲೆ ಅವರ ಜೋಡಿಯನ್ನು ಇಷ್ಟಪಟ್ಟಿದ್ದರು.. 

ರವಿತೇಜಾ ಜೊತೆ ನಟಿಸಲು ಇಷ್ಟವಿಲ್ಲದ ಕಾರಣ ರಶ್ಮಿಕಾ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಬಾಲಿವುಡ್‌ನಲ್ಲಿ ಕೆಲವು ಹೊಸ ಪ್ರಾಜೆಕ್ಟ್‌ಗಳಿಗೆ ಕಮಿಟ್ ಆಗಿರುವ ಕಾರಣ ರಶ್ಮಿಕಾ ರವಿತೇಜ ಅವರ ಚಿತ್ರಕ್ಕೆ ನೋ ಹೇಳಿದ್ದಾರೆ ಎಂದು ನಂತರ ತಿಳಿದುಬಂದಿದೆ. 

ಇದನ್ನೂ ಓದಿ-10 ವರ್ಷಗಳ ಕಾಲ ಸಿನಿರಂಗವನ್ನೇ ಆಳಿದ ಸ್ಟಾರ್‌ ನಟಿ.. ಈಗ ಈಕೆಯನ್ನು ಗುರುತಿಸುವುದೇ ಕಷ್ಟ! ಯಾರಿರಬಹುದು ಹೇಳಿ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News