ನವದೆಹಲಿ : ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ಇಂದು 40 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರು ಸಿನಿರಂಗದ ಜೊತೆ ಜೊತೆಗೆ ಸಾಮಾಜಿಕ ಕಾಳಜಿಯನ್ನು ಹೊತ್ತಿದ್ದಾರೆ. ಕೋವಿಡ್-19 ಸಂಕಷ್ಟ ದೇಶವನ್ನೇ ನಲುಗಿಸುತ್ತಿರುವಾಗ ನಟಿ ಸನ್ನಿ ಹತ್ತು ಸಾವಿರ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.
'ಪೀಪಲ್ ಪಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್'(People for the Ethical Treatment of Animals) ಸಂಸ್ಥೆಯ ಜೊತೆಗೂಡಿ ಸನ್ನಿ ಲಿಯೋನ್(Sunny Leone) ಹತ್ತು ಸಾವಿರ ವಲಸೆ ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಮೂಲಕ ತಮ್ಮ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : Urvarshi Rautela ಡಾನ್ಸ್ ಗೆ ಫಿದಾ ಆದ ನೆಟ್ಟಿಗರು, 17 ಲಕ್ಷಕ್ಕೂ ಹೆಚ್ಚು ಬಾರಿ ವಿಡಿಯೋ ವೀಕ್ಷಣೆ
“ಸದ್ಯ ನಾವು ಕೋವಿಡ್ ಕಾಲದಲ್ಲಿದ್ದೇವೆ. ಈ ಸಂಕಷ್ಟವನ್ನು ಸಹಾನುಭೂತಿ ಮತ್ತು ಒಗ್ಗಟ್ಟಿನಿಂದ ದೂರ ಮಾಡಬೇಕು. ಈ ಹಿನ್ನೆಲೆಯಲ್ಲಿ ನಾನು ಪೆಟಾ ಜೊತೆ ಕೈ ಜೋಡಿಸುತ್ತಿದ್ದೇನೆ. ಈ ಸಂಸ್ಥೆಯ ಮೂಲಕ ವಲಸೆ ಕಾರ್ಮಿಕರಿಗೆ ಕಿಚಡಿ ಮತ್ತು ಹಣ್ಣುಗಳನ್ನು ನೀಡಲಿದ್ದೇವೆ ಎಂದು ಸೋಷಿಯಲ್ ಮೀಡಿಯಾ(Social Media)ದಲ್ಲಿ ಬರೆದುಕೊಂಡಿದ್ದಾರೆ.
Requesting everyone who has recovered from Covid-19 to donate plasma and help save more LIVES! https://t.co/1wZ38EKJhX
— sunnyleone (@SunnyLeone) May 5, 2021
ಇದನ್ನೂ ಓದಿ : 'ಉತ್ತಮ ಚಿಕಿತ್ಸೆ ಸಿಕ್ಕಿದಿದ್ದರೆ ನನ್ನನ್ನೂ ಬದುಕಿಸಬಹುದಿತ್ತು' ಸಾವಿಗೂ ಮುನ್ನ ಪೋಸ್ಟ್ ಹಾಕಿದ ನಟ
ಅಷ್ಟೇ ಅಲ್ಲದೆ, ಇತ್ತೀಚಿಗೆ ದೇಶದ ಜನತೆ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. “ಕೋವಿಡ್(Covid) ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ. ಇದೀಗ ವ್ಯಾಕ್ಸಿನ್ ಹಾಕಿಸಿಕೊಳ್ಳುವ ಸಮಯ. ಎಲ್ಲರೂ ಸುರಕ್ಷಿತವಾಗಿರಿ. ಸಾಂಕ್ರಾಮಿಕದ ವಿರುದ್ಧ ಹೋರಾಡಲು ಸಹಾಯ ಮಾಡೋಣ. ಜೊತೆಗೆ ಪ್ಲಾಸ್ಮಾ ದಾನಾ ಮಾಡೋಣ, ಅನೇಕ ಪ್ರಾಣಗಳನ್ನು ಉಳಿಸೋಣ ಎಂದು ಹೇಳಿದ್ದರು.
ಇದನ್ನೂ ಓದಿ : Kiccha Sudeep : ಮತ್ತೊಮ್ಮೆ ಕಲಾವಿದರ ಕುಟುಂಬಕ್ಕೆ ಸಹಾಯಾಸ್ತ ನೀಡಿದ ಕಿಚ್ಚ ಸುದೀಪ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.