Jio Cinema : ಐಪಿಎಲ್‌ ನಂತರ ಮತ್ತೊಮ್ಮೆ Hotstarಗೆ ಟಕ್ಕರ್‌ ಕೊಟ್ಟ Jio...! ಹೇಗೆ ಗೊತ್ತಾ?

Jio and warner bros agreement : ಇತ್ತೀಚೆಗೆ, HBO ಹಾಟ್‌ಸ್ಟಾರ್‌ನೊಂದಿಗಿನ ಮಾಡಿಕೊಂಡಿದ್ದ ಒಪ್ಪಂದದಿಂದ ಹೊರಬಂದಿದೆ, ದೀರ್ಘಾವಧಿಯ ಒಪ್ಪಂದದ ಮೂಲಕ, ಎಲ್ಲಾ HBO ಸರಣಿಗಳು ಮತ್ತು ಸಿನಿಮಾಗಳನ್ನು ರಿಲಯನ್ಸ್‌ ಸಂಸ್ಥೆಯ ಜಿಯೋ ಸಿನಿಮಾದಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ವರದಿಯಾಗಿದೆ.

Written by - Krishna N K | Last Updated : Apr 29, 2023, 12:48 AM IST
  • ಹಾಟ್‌ಸ್ಟಾರ್‌ಗೆ ಟಕ್ಕರ್‌ ಕೊಟ್ಟ ರಿಲಯನ್ಸ್‌ ಜಿಯೋ ಓಟಿಟಿ.
  • ವಾರ್ನರ್‌ ಬ್ರೋಸ್ ಜೊತೆ ಪ್ರಸಾರದ ಒಪ್ಪಂದ ಮಾಡಿಕೊಂಡ ಜಿಯೋ.
  • ಈ ಮೊದಲು ಹೆಚ್‌ಬಿಓ ಮತ್ತು ವಾರ್ನರ್‌ ಬ್ರೋಸ್‌ ಹಾಟ್‌ ಸ್ಟಾರ್‌ಜೊತೆ ಒಪ್ಪಂದ ಮಾಡಿಕೊಂಡಿದ್ದವು.
Jio Cinema : ಐಪಿಎಲ್‌ ನಂತರ ಮತ್ತೊಮ್ಮೆ Hotstarಗೆ ಟಕ್ಕರ್‌ ಕೊಟ್ಟ Jio...! ಹೇಗೆ ಗೊತ್ತಾ? title=

Jio Cinema : ರಿಲಯನ್ಸ್ ಇಂಡಿಯಾದ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋ ಸಿನಿಮಾ ವಾರ್ನರ್ ಬ್ರದರ್ಸ್, ಡಿಸ್ಕವರಿ+ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ, ಹಾಲಿವುಡ್ ಚಲನಚಿತ್ರಗಳು, ವೆಬ್-ಸರಣಿಗಳನ್ನು ತನ್ನ ಪ್ರಸಾರ ಮಾಡಲು ಮುಂದಾಗಿದ್ದು, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ವಿರುದ್ಧ ಸ್ಪರ್ಧಿಸಲು ಬಿಗ್‌ ಪ್ಲಾನ್‌ ರೂಪಿಸಿದೆ.

ರಿಲಯನ್ಸ್‌ನ ವಯಾಕಾಮ್ 18 ನಡುವಿನ ಒಪ್ಪಂದವಾಗಿದ್ದು, ವಾರ್ನರ್ ಬ್ರದರ್ಸ್ ಮತ್ತು ಅದರ ಎಚ್‌ಬಿಒ ಎಲ್ಲಾ ಸೀರಿಸ್‌ ಮತ್ತು ಸಿನಿಮಾಗಳು ಇನ್ನು ಮುಂದೆ, ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ. ಇವುಗಳಲ್ಲಿ ಜನಪ್ರಿಯ ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳಾದ, ಗೇಮ್ ಆಫ್ ಥ್ರೋನ್ಸ್, ಲಾರ್ಡ್ ಆಫ್ ದಿ ರಿಂಗ್ಸ್ ಮತ್ತು ಹ್ಯಾರಿ ಪಾಟರ್ ಸರಣಿಗಳು ಸೇರಿವೆ ಎಂದು ಕಂಪನಿಗಳು ನೀಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. 

ಇದನ್ನೂ ಓದಿ: KKBKKJ : 7ನೇ ದಿನಕ್ಕೆ 150 ಕೋಟಿ ಗಳಿಕೆ ಕಂಡ ಸಲ್ಲು ʼಕೆಕೆಬಿಕೆಕೆಜೆʼ ಚಿತ್ರ..!

ರಾಯಿಟರ್ಸ್ ಸುದ್ದಿ ಸಂಸ್ಥೆ ಈ ಕುರಿತು ಸುದ್ದಿ ಬಿತ್ತರಿಸಿದೆ ಆದ್ರೆ, ಎಷ್ಟು ಮೊತ್ತಕ್ಕೆ ಒಪ್ಪಂದವಾಗಿದೆ ಎಂದು ತಿಳಿದು ಬಂದಿಲ್ಲ. ಒಪ್ಪಂದವು ಮುಂದಿನ ತಿಂಗಳಿನಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ಇತ್ತ ವಾರ್ನರ್ ಬ್ರದರ್ಸ್‌ನ ಭಾರತ, ಆಗ್ನೇಯ ಏಷ್ಯಾ ಮತ್ತು ಕೊರಿಯಾದ ಮುಖ್ಯಸ್ಥ ಕ್ಲೆಮೆಂಟ್ ಶ್ವೆಬಿಗ್, ಈ ಒಪ್ಪಂದವು ದಕ್ಷಿಣ ಏಷ್ಯಾದ ಮಾರುಕಟ್ಟೆಯಲ್ಲಿ ಕಂಪನಿಯನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದ್ದಾರೆ. 

ಪ್ರಸ್ತುತ ಐಪಿಎಲ್ ಸರಣಿಯನ್ನು ಉಚಿತವಾಗಿ ಪ್ರಸಾರ ಮಾಡುವುದರಿಂದ ಜನಪ್ರಿಯವಾಗಿರುವ ಜಿಯೋ ಸಿನಿಮಾ ಈ ಒಪ್ಪಂದದಿಂದ ಹೆಚ್ಚು ಜನಪ್ರಿಯತೆ ಗಳಿಸಲಿದೆ. ಈ ಹಿಂದೆ HBO ನ ಹಲವು ಅತ್ಯುತ್ತಮ ಚಲನಚಿತ್ರಗಳು ಮತ್ತು ವೆಬ್‌ ಸರಣಿಗಳನ್ನು Hotstar ನಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಆದ್ರೆ, ಮಾರ್ಚ್ 31 ರಂದು, Hotstar ಮತ್ತು HBO ನಡುವಿನ ಒಪ್ಪಂದದ ಅವಧಿ ಮುಗಿದಿದ್ದು, ಇನ್ನುಮುಂದೆ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿವೆ.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News