Salaar Craze: ನೇಪಾಳದಲ್ಲಿಯೂ ‘ಸಲಾರ್’ ಆರ್ಭಟ, ಟಿಕೆಟ್ ಖರೀದಿಗೆ ಮುಗಿಬಿದ್ದ ಜನ!

Salaar Craze in Nepal: ನೇಪಾಳದ ಥಿಯೇಟರ್‍ಗಳಲ್ಲಿ ಸಲಾರ್ ನೋಡಲು ಅನೇಕರಿಗೆ ಟಿಕೆಟ್ ಸಿಗುತ್ತಿಲ್ಲ. ಹೀಗಾಗಿ ಟಿಕೆಟ್ ಖರೀದಿಸಲು ಜನರು ಚಿತ್ರಮಂದಿರದ ಗೇಟ್‍ ಹತ್ತಿ ಹರಸಾಹಸಪಡುತ್ತಿದ್ದಾರೆ. ಪ್ರಭಾಸ್ ನಟನೆಗೆ ನೇಪಾಳದ ಜನತೆ ಜೈ ಎಂದಿದ್ದಾರೆ. ​

Written by - Puttaraj K Alur | Last Updated : Dec 26, 2023, 02:52 PM IST
  • ನೇಪಾಳದಲ್ಲಿಯೂ ಸೂಪರ್ ಸ್ಟಾರ್ ಪ್ರಭಾಸ್ ನಟನೆಯ ಕಮಾಲ್ ಮಾಡಿದೆ
  • ಟಿಕೆಟ್ ಸಿಗದೆ ಥಿಯೇಟರ್‍ಗಳ ಮುಂದೆ ಜಮಾಯಿಸುತ್ತಿರುವ ಸಿನಿ ಪ್ರೇಮಿಗಳು
  • 5ನೇ ದಿನಕ್ಕೆ 500 ಕೋಟಿ ರೂ. ಕ್ಲಬ್ ಸೇರಿ ದಾಖಲೆ ನಿರ್ಮಿಸಲಿರುವ ಸಲಾರ್
Salaar Craze: ನೇಪಾಳದಲ್ಲಿಯೂ ‘ಸಲಾರ್’ ಆರ್ಭಟ, ಟಿಕೆಟ್ ಖರೀದಿಗೆ ಮುಗಿಬಿದ್ದ ಜನ!   title=
ದಾಖಲೆ ನಿರ್ಮಿಸಲಿರುವ ಸಲಾರ್

ಬೆಂಗಳೂರು: ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶಿಸಿರುವ ‘ಸಲಾರ್’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಡಿಸೆಂಬರ್ 22ರಂದು ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ‘ಸಲಾರ್’ ದೇಶ-ವಿದೇಶದಲ್ಲಿಯೂ ಸಖತ್ ಸೌಂಡ್ ಮಾಡುತ್ತಿದೆ.

ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡಿ ಧೂಳೆಬ್ಬಿಸಿದ್ದ ‘ಸಲಾರ್’ 5ನೇ ದಿನವಾದ ಮಂಗಳವಾರ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿದೆ. 500 ಕೋಟಿ ರೂ. ಕ್ಲಬ್ ಸೇರುವ ಮೂಲಕ ‘ಸಲಾರ್’ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಈ ಆಕ್ಷನ್ ಪ್ಯಾಕ್ಡ್ ಸಿನಿಮಾ ಸಖತ್ ಕ್ರೇಜ್ ಸೃಷ್ಟಿಸಿದೆ. ‘ಉಗ್ರಂ’ ರಿಮೇಕ್ ಮಾಡಿ ಈ ಸಿನಿಮಾ ಮಾಡಲಾಗಿದೆ ಎಂದು ಅನೇಕರು ಹೇಳಿದರೂ ಸಹ ಗಲ್ಲಾಪೆಟ್ಟಿಗೆಯಲ್ಲಿ ಓಟ ಮುಂದುವರೆಸಿದೆ.

ಇದನ್ನೂ ಓದಿ: ಮಾಲ್‌ನಲ್ಲಿ ಸಲಾರ್‌ ಸಿನಿಮಾ ನೋಡಲು ಮಕ್ಕಳನ್ನು ತಡೆದಿದಕ್ಕೆ ತಾಯಿ ಕಿರಿಕ್: ವಿಡಿಯೋ ವೈರಲ್!

ನೇಪಾಳದಲ್ಲಿಯೂ ಸಖತ್ ಕ್ರೇಜ್!

ನೆರೆಯ ನೇಪಾಳದಲ್ಲಿಯೂ ಸಹ ‘ಸಲಾರ್’ ಸಖತ್ ಕ್ರೇಜ್ ಸೃಷ್ಟಿಸಿದೆ. ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಮತ್ತು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಜೋಡಿ ತೆರೆಮೇಲೆ ಭರ್ಜರಿ ಕಮಾಲ್ ಮಾಡಿದೆ. ನೇಪಾಳದ ಪ್ರೇಕ್ಷಕರು ‘ಸಲಾರ್’ ನೋಡಿ ಸಖತ್ ಎಂಜಾಯ್ ಮಾಡಿದ್ದಾರೆ. ಬ್ಲಾಕ್‍ನಲ್ಲಿ ಟಿಕೆಟ್ ಮಾರಾಟವಾಗುತ್ತಿರುವ ಕಾರಣ ಜನರು ಥಿಯೇಟರ್ ಮುಂದೆ ಜಮಾಯಿಸಿದ್ದಾರೆ.

ನೇಪಾಳದ ಥಿಯೇಟರ್‍ಗಳಲ್ಲಿ ಸಲಾರ್ ನೋಡಲು ಅನೇಕರಿಗೆ ಟಿಕೆಟ್ ಸಿಗುತ್ತಿಲ್ಲ. ಹೀಗಾಗಿ ಟಿಕೆಟ್ ಖರೀದಿಸಲು ಜನರು ಚಿತ್ರಮಂದಿರದ ಗೇಟ್‍ ಹತ್ತಿ ಹರಸಾಹಸಪಡುತ್ತಿದ್ದಾರೆ. ಪ್ರಭಾಸ್ ನಟನೆಗೆ ನೇಪಾಳದ ಜನತೆ ಜೈ ಎಂದಿದ್ದಾರೆ. ಸಲಾರ್ ಸೂಪರ್ ಅಂತಾ ಅನೇಕ ಸಿನಿ ಅಭಿಮಾನಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಿಡುಗಡೆಯಾದ 4 ದಿನಕ್ಕೆ 400 ಕೋಟಿ ಗಳಿಸಿದ್ದ ಸಲಾರ್ 5ನೇ ದಿನವಾದ ಇಂದು 500 ಕೋಟಿ ರೂ. ಕ್ಲಬ್ ಸೇರಲಿದೆ ಎಂದು ತಮಿಳುನಾಡಿನ ಬಾಕ್ಸ್ ಆಫೀಸ್ ವಾಣಿಜ್ಯ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಹೇಳಿದ್ದಾರೆ. ಸಲಾರ್ ಚಿತ್ರದಲ್ಲಿ ಶ್ರುತಿ ಹಾಸನ್, ಈಶ್ವರಿ ರಾವ್, ಜಗಪತಿ ಬಾಬು ಮತ್ತು ಶ್ರೀಯಾ ರೆಡ್ಡಿ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: ‌ʼಸಲಾರ್ʼ ಕಥೆಗೆ ತಿರುವು ನೀಡುವ ಈ ಬಾಲಕಲಾವಿದೆ ಯಾರೆಂದು ಊಹಿಸಬಲ್ಲಿರಾ? ಗೊತ್ತಾದ್ರೆ ಶಾಕ್‌ ಆಗ್ತೀರಾ! ‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News