ಅಂತಾರಾಷ್ಟ್ರೀಯ ಭಾಷೆಯಲ್ಲಿ ಸಲಾರ್‌ ರಿಲೀಸ್:‌ ಅಮೇರಿಕಾದಲ್ಲಿ ಪ್ರಭಾಸ್‌ ಅಬ್ಬರ!

Salaar World Wide Release: ಪ್ರಭಾಸ್ ಹಾಗೂ ಡೈರೆಕ್ಟರ್‌ ಪ್ರಶಾಂತ್ ನೀಲ್ ಕಾಂಬೋದ ʻಸಲಾರ್ ಪಾರ್ಟ್‌ 1 ಸೀಜ್‌ ಫೈರ್ʼ ಚಿತ್ರ ಅಂತರಾಷ್ಟ್ರೀಯ ಭಾಷೆಯೊಂದರಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಹಾಗಾದ್ರೆ ಈ ಸಿನಿಮಾ ಯಾವ ಭಾಷೆಯಲ್ಲಿ ಬರಲಿದೆ? ಎಲ್ಲಿ ರಿಲೀಸ್‌ ಆಗಲಿದೆ? ಇಲ್ಲದೆ ಸಂಪೂರ್ಣ ವಿವರ.

Written by - Zee Kannada News Desk | Last Updated : Jan 6, 2024, 09:47 AM IST
  • ಸಲಾರ್ ಚಿತ್ರವು 2023 ರಲ್ಲಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿದ್ದು, ಬಿಡುಗಡೆಯಾಗಿ ಮೂರನೇ ವಾರಕ್ಕೆ ಚಿತ್ರ 700 ಕೋಟಿ ಕ್ಲಬ್ ಸೇರಿಕೊಂಡಿದೆ.
  • ಸಲಾರ್ ಸಿನಿಮಾದ ಮೊದಲ ಭಾಗಕ್ಕೆ ವಿಶ್ವದಾದ್ಯಂತ ಪ್ರೀತಿ ವ್ಯಕ್ತವಾಗುತ್ತಿದ್ದು, ಇದನ್ನು ಎನ್‌ಕ್ಯಾಚ್ ಮಾಡಿಕೊಳ್ಳುವ ತವಕದಲ್ಲಿರುವ ಚಿತ್ರತಂಡ ಮತ್ತೊಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ.
  • ಸಲಾರ್‌ನ ಸ್ಪ್ಯಾನಿಷ್ ಆವೃತ್ತಿಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.
ಅಂತಾರಾಷ್ಟ್ರೀಯ ಭಾಷೆಯಲ್ಲಿ ಸಲಾರ್‌ ರಿಲೀಸ್:‌ ಅಮೇರಿಕಾದಲ್ಲಿ ಪ್ರಭಾಸ್‌ ಅಬ್ಬರ! title=

Salaar Release In Spanish: ಟಾಲಿವುಡ್‌ ಸ್ಟಾರ್‌ ನಟ ಪ್ರಭಾಸ್ ಹಾಗೂ ಡೈರೆಕ್ಟರ್‌ ಪ್ರಶಾಂತ್ ನೀಲ್ ನಿರ್ದೇಶನದ ‌ʻಸಲಾರ್ ಪಾರ್ಟ್‌ 1 ಸೀಜ್‌ ಫೈರ್ʼ ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ತನ್ನ ಸಕ್ಸಸ್‌ ಸೆಲೆಬ್ರೇಟ್‌ ಮಾಡ್ತಿದೆ. ಈ ಚಿತ್ರವು 2023 ರಲ್ಲಿ ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿದ್ದು, ಬಿಡುಗಡೆಯಾಗಿ ಮೂರನೇ ವಾರಕ್ಕೆ ಚಿತ್ರ 700 ಕೋಟಿ ಕ್ಲಬ್ ಸೇರಿಕೊಂಡಿದೆ. ಪ್ರಭಾಸ್ ಜೊತೆ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್‌ನನ್ನು ನಿರ್ದೇಶಕ ಪ್ರಶಾಂತ್ ನೀಲ್ ಅಚ್ಚುಕಟ್ಟಾಗಿ ಬಳಸಿಕೊಂಡಿದ್ದು, ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. 

ಸಲಾರ್‌ ಸಿನಿಮಾ ಡಿಸೆಂಬರ್ 22 ರಂದು ಬಿಡುಗಡೆಯಾಗಿದ್ದು, ಈಗಾಗಲೇ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ. ಇದರ ಜೊತೆಗೆ ಈ ಚಿತ್ರ ಅಂತರಾಷ್ಟ್ರೀಯ ಭಾಷೆಯೊಂದರಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಸಲಾರ್ ಸಿನಿಮಾದ ಮೊದಲ ಭಾಗಕ್ಕೆ ವಿಶ್ವದಾದ್ಯಂತ ಪ್ರೀತಿ ವ್ಯಕ್ತವಾಗುತ್ತಿದ್ದು, ಇದನ್ನು ಎನ್‌ಕ್ಯಾಚ್ ಮಾಡಿಕೊಳ್ಳುವ ತವಕದಲ್ಲಿರುವ ಚಿತ್ರತಂಡ ಮತ್ತೊಂದು ಹೆಜ್ಜೆ ಮುಂದೆ ಹೋಗುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ಅಂತಾರಾಷ್ಟ್ರೀಯ ಭಾಷೆಯಲ್ಲಿ ರಿಲೀಸ್‌ ಮಾಡಲು ಸಿದ್ಧವಾಗಿದ್ದು, ಸದ್ಯ ಅಂದರೆ ಸ್ಪ್ಯಾನಿಷ್ ಭಾಷೆಯಲ್ಲಿ ಬಿಡುಗಡೆ ಮಾಡಲಿದೆ. 

ಇದನ್ನೂ ಓದಿ: Ileana D'cruz : ಮೊದಲ ಬಾರಿಗೆ ತನ್ನ ಗಂಡನ ಬಗ್ಗೆ ಮಾತನಾಡಿದ ಇಲಿಯಾನಾ..! ಮದುವೆ ರಹಸ್ಯ ಮುಚ್ಚಿಟ್ಟ ನಟಿ

ಲ್ಯಾಟಿನ್ ಅಮೇರಿಕಾದಲ್ಲಿ ಸಲಾರ್ ಸ್ಪ್ಯಾನಿಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಘೋಷಿಸಿದ್ದು, ಇದೇ ವರ್ಷದ ಮಾರ್ಚ್ 7, 2024 ರಂದು ಸ್ಪ್ಯಾನಿಷ್ ಭಾಷೆಯಲ್ಲಿ 'ಸಲಾರ್: ಭಾಗ 1 - ಕದನ ವಿರಾಮ' ರಿಲೀಸ್‌ ಆಗಲಿದೆ. "'ಸಲಾರ್: ಭಾಗ 1 - ಕದನ ವಿರಾಮ' ಲ್ಯಾಟಿನ್ ಅಮೆರಿಕಾದಲ್ಲಿ ಮಾರ್ಚ್ 7, 2024 ರಂದು ಸ್ಪ್ಯಾನಿಷ್ ಭಾಷೆಯಲ್ಲಿ ಸಿನಿಪೋಲೀಸ್ ಬಿಡುಗಡೆ ಮಾಡಲಿದೆ. ಮಹಾಕಾವ್ಯ ನೋಡಲು ಸಿದ್ಧರಾಗಿ! ಸಲಾರ್: ಭಾಗ 1 - ಕದನ ವಿರಾಮ ಲ್ಯಾಟಿನ್ ಅಮೇರಿಕಾದಲ್ಲಿ 7ನೇ ಮಾರ್ಚ್ 2024 ರಂದು ಬಿಡುಗಡೆಯಾಗುತ್ತಿದೆ" ಎಂದು ಸ್ಪ್ಯಾನಿಷ್ ಭಾಷೆಯಲ್ಲಿ ಟ್ವೀಟ್ ಮಾಡಲಾಗಿದೆ. 

ಸಲಾರ್‌ನ ಸ್ಪ್ಯಾನಿಷ್ ಆವೃತ್ತಿಯನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಜೊತೆಗೆ, ಚಿತ್ರದಲ್ಲಿ ಶೃತಿ ಹಾಸನ್, ಶ್ರೀಯಾ ರೆಡ್ಡಿ, ಬಾಬಿ ಸಿಂಹ, ಜಗಪತಿ ಬಾಬು, ದೇವರಾಜ್, ಪ್ರಮೋದ್, ನವೀನ್ ಶಂಕರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇನ್ನು, ಫಿಲ್ಮ ಟ್ರೆಂಡ್ ಅನಲಿಸ್ಟ್ ಮನೋಬಾಲಾ ವಿಜಯಬಾಲನ್ ಶುಕ್ರವಾರ ಮಾಹಿತಿ ಹಂಚಿಕೊಂಡಂತೆ, ಸಲಾರ್ ಸಿನಿಮಾ, "ಸಲಾರ್ ವರ್ಲ್ಡ್‌ವೈಡ್ ಬಾಕ್ಸ್ ಆಫೀಸ್... ಪ್ರಭಾಸ್‌ ಅಭಿನಯದ ಸಲಾರ್ 675 ಕೋಟಿ ಗ್ರಾಸ್ ಮಾರ್ಕ್‌ನತ್ತ ಸಾಗುತ್ತಿದೆ. 

ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News