ಸಲ್ಮಾನ್ ಮದುವೆ ಫಿಕ್ಸ್ ಆಗಿದ್ಯಾ? ಮೇ 23ಕ್ಕೆ ಹೇಳ್ತಾರಂತೆ ಸಲ್ಲು...!

ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಅವರನ್ನು ಅವರ ಮದುವೆಯ ಯೋಜನೆಯನ್ನು ಕುರಿತು  ಕೇಳಿದಾಗ, ಮೇ 23 ರಂದು ನಾನು ಮದುವೆಯನ್ನು ಘೋಷಿಸಬೇಕೆಂದು ಯೋಚಿಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

Last Updated : May 22, 2019, 04:53 PM IST
ಸಲ್ಮಾನ್ ಮದುವೆ ಫಿಕ್ಸ್ ಆಗಿದ್ಯಾ? ಮೇ 23ಕ್ಕೆ ಹೇಳ್ತಾರಂತೆ ಸಲ್ಲು...! title=
File Image

ನವದೆಹಲಿ: ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತಿ ಪಡೆದಿರುವ ಸಲ್ಮಾನ್ ಖಾನ್ ಅವರ ಮದುವೆ ಬಗ್ಗೆ ಆಗಾಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ವಿಶೇಷವಾಗಿ ಅವರ ಅಭಿಮಾನಿಗಳು ಈ ಸುದ್ದಿ ಕೇಳಲು ಸಾಕಷ್ಟು ಉತ್ಸುಕರಾಗಿರುತ್ತಾರೆ.  

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅವರ ಮದುವೆ ಬಗ್ಗೆ ಮಾತನಾಡುತ್ತಿದ್ದಾಗ, ಸಲ್ಮಾನ್ ನೀಡಿದ ಉತ್ತರ ಆಶ್ಚರ್ಯಕರವಾಗಿತ್ತು. ಹೌದು, ಸಲ್ಲು, ಮೇ 23 ರಂದು ಮದುವೆಯ ಬಗ್ಗೆ ಘೋಷಿಸಬೇಕೆಂದು ಯೋಚಿಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ನಿಮಗೂ ಅಚ್ಚರಿಯಾಗುತ್ತಿದೆಯೇ! ಇದೂ ಕೂಡ ವದಂತಿಯೇ ಇರಬಹುದು ಎಂದು ನೀವೂ ಭಾವಿಸಿರಬಹುದು. ಒಂದೊಮ್ಮೆ ನೀವು ಹಾಗೇನಾದರೂ ಯೋಚಿಸುತ್ತಿದ್ದರೆ ಅದು ನಿಜವೇ. ಏಕೆಂದರೆ ಸಂದರ್ಶನದಲ್ಲಿ ಕೇವಲ ತಮಾಷೆಗಾಗಿ ಸಲ್ಮಾನ್ ಹೀಗೆ ಹೇಳಿದ್ದಾರೆ.

ಮುಂಬೈ ಮಿರರ್ ಗೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ತಾವು ಮೇ 23ಕ್ಕೆ ತಮ್ಮ ವಿವಾಹದ ದಿನಾಂಕ ಘೋಷಿಸುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು 'ಚಮಕ್' ನೀಡಿದ್ದಾರೆ. ಅದಕ್ಕೆ ಕಾರಣವನ್ನೂ ಬಿಚ್ಚಿಟ್ಟಿರುವ ಸಲ್ಮಾನ್ ಖಾನ್,  ಮೇ 23 ರಂದು 2019ರ ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಅಂದು ಮುಂದಿನ ಐದು ವರ್ಷಕ್ಕೆ ನಮ್ಮ ದೇಶದ ಪ್ರಧಾನಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ನಿರ್ಧಾರವಾಗುತ್ತದೆ. ಅದು ನನ್ನ ಮದುವೆ ಸುದ್ದಿಗಿಂತ ಹೆಚ್ಚು ಮಹತ್ವದ್ದಾಗಿದ್ದು, ಜನರ ಗಮನ ಲೋಕಸಭಾ ಚುನಾವಣೆಯ ಮತಎಣಿಕೆ ಮೇಲೆ ಕೇಂದ್ರೀಕೃತವಾಗಿರಲಿದೆ. ಹಾಗಾಗಿ ಅಂದೇ ನನ್ನ ಮದುವೆ ಬಗ್ಗೆ ಘೋಷಿಸಲು ಚಿಂತಿಸುತ್ತಿದ್ದೇನೆ ಎಂದು ತಮಾಷೆ ಮಾಡಿದ್ದಾರೆ.

Trending News