ಯೂಟ್ಯೂಬ್'ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ 'ಸೀತಾರಾಮ ಕಲ್ಯಾಣ' ಟ್ರೇಲರ್

ಚನ್ನಾಂಭಿಕಾ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರವನ್ನು ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ನಿರ್ಮಿಸಿದ್ದು, ಚಿತ್ರದ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸಿದ್ದಾರೆ. 

Last Updated : Jan 22, 2019, 07:22 PM IST
ಯೂಟ್ಯೂಬ್'ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ 'ಸೀತಾರಾಮ ಕಲ್ಯಾಣ' ಟ್ರೇಲರ್ title=

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರದ ಟ್ರೇಲರ್ ಯೂಟ್ಯೂಬ್'ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. 

ಎ. ಹರ್ಷಾ ನಿರ್ದೇಶನದಲ್ಲಿ ಮೂಡಿಬಂದಿರುವ 'ಸೀತಾರಾಮ ಕಲ್ಯಾಣ' ಟ್ರೈಲರ್‌ ಕಳೆದ ಶನಿವಾರವಷ್ಟೇ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಈ ಚಿತ್ರದ 'ನಿನ್ನ ರಾಜ ನಾನು, ನನ್ನ ರಾಣಿ ನೀನು ಪ್ರೇಮ ಕಲ್ಯಾಣವೇ ಇನ್ನು' ಎಂಬ ಹಾಡು ರಾಜ್ಯದ ಮೂಲೆ ಮೂಲೆಯಲ್ಲಿ ಗುನುಗುಡುತ್ತಿದ್ದು, ಲಹರಿ ಮ್ಯೂಸಿಕ್‌ ಯೂಟ್ಯೂಬ್‌ ಸೈಟ್‌ನಲ್ಲಿ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದೇ ಸ್ಪೀಡ್'ನಲ್ಲಿ ಚಿತ್ರದ ಟ್ರೇಲರ್ ಕೂಡಾ ಸಾಗಿದ್ದು, ಈಗಾಗಲೇ 5 ಮಿಲಿಯನ್'ಗೂ ಹೆಚ್ಚು ವೀಕ್ಷಣೆ ಪಡೆದಿದೆ. 

ಚನ್ನಾಂಭಿಕಾ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರವನ್ನು ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ನಿರ್ಮಿಸಿದ್ದು, ಚಿತ್ರದ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸಿದ್ದಾರೆ. ಉಳಿದಂತೆ ರವಿಶಂಕರ್, ಶರತ್ ಕುಮಾರ್, ಮಧುಬಾಲಾ, ಆದಿತ್ಯ ಮೆನನ್, ಚಿಕ್ಕಣ್ಣ, ಸಾಧು ಕೋಕಿಲ, ನಯನಾ, ಗಿರಿಜಾ ಲೋಕೇಶ್, ಚೇತನ್ ಸೇರಿದಂತೆ ಹಲವರ ತಾರಾಗಣವಿದೆ. 

ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ರಂದು ಈ ಸುಮಾರು 400 ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Trending News