Prabhas Marriage: ಪ್ರಭಾಸ್ ಮದುವೆ ಬಗ್ಗೆ ಶಾಕಿಂಗ್‌ ಭವಿಷ್ಯ ನುಡಿದ ಖ್ಯಾತ ಜೋತಿಷಿ!

Prabhas Marriage: ಟಾಲಿವುಡ್‌ನಲ್ಲಿ ಪ್ರಭಾಸ್ ಮದುವೆಯ ವಿಷಯ ಯಾವಾಗಲೂ ಹಾಟ್ ಟಾಪಿಕ್ ಆಗಿದೆ. ಇತ್ತೀಚೆಗಷ್ಟೇ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರು ಪ್ರಭಾಸ್ ಮದುವೆ ಕುರಿತು ಮಹತ್ವದ ಮಾತುಗಳನ್ನಾಡಿದ್ದರು. ಪ್ರಭಾಸ್ ಮದುವೆಯಾದರೆ ಅವರ ಪರಿಸ್ಥಿತಿ ಉದಯ್ ಕಿರಣ್ ಅವರಂತೆ ಆಗುತ್ತದೆ ಎಂದು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಇದೀಗ ಈ ಸುದ್ದಿ ಪ್ರಭಾಸ್ ಅಭಿಮಾನಿಗಳ ಟೆನ್ಷನ್‌ಗೆ ಕಾರಣವಾಗಿದೆ.

Written by - Chetana Devarmani | Last Updated : Aug 17, 2022, 10:15 AM IST
  • ಟಾಲಿವುಡ್‌ನಲ್ಲಿ ಪ್ರಭಾಸ್ ಮದುವೆಯ ವಿಷಯ ಯಾವಾಗಲೂ ಹಾಟ್ ಟಾಪಿಕ್ ಆಗಿದೆ
  • ಪ್ರಭಾಸ್ ಮದುವೆ ಬಗ್ಗೆ ನ್ಸೇಷನಲ್ ಕಾಮೆಂಟ್ ಮಾಡಿದ ಖ್ಯಾತ ಜ್ಯೋತಿಷಿ ವೇಣುಸ್ವಾಮಿ
  • ಪ್ರಭಾಸ್ ಮದುವೆ ಬಗ್ಗೆ ಶಾಕಿಂಗ್‌ ಭವಿಷ್ಯ ನುಡಿದ ಖ್ಯಾತ ಜೋತಿಷಿ!
Prabhas Marriage: ಪ್ರಭಾಸ್ ಮದುವೆ ಬಗ್ಗೆ ಶಾಕಿಂಗ್‌ ಭವಿಷ್ಯ ನುಡಿದ ಖ್ಯಾತ ಜೋತಿಷಿ! title=
ಪ್ರಭಾಸ್ ಮದುವೆ

Prabhas Marriage: ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿದ್ದ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಧೇಶ್ಯಾಮ್ ನಂತರ ಅವರು ಅನೇಕ ಚಿತ್ರಗಳನ್ನು ಮಾಡುತ್ತಿದ್ದಾರೆ. ಕಡಿಮೆ ಸಮಯದಲ್ಲಿ ವಿಶೇಷ ಫಾಲೋವರ್ಸ್ ಕ್ರಿಯೇಟ್ ಮಾಡಿಕೊಂಡಿರುವ ಪ್ರಭಾಸ್ ಯಂಗ್ ರೆಬೆಲ್ ಸ್ಟಾರ್ ಎಂಬ ಬಿರುದನ್ನು ಕೂಡ ಪಡೆದಿದ್ದಾರೆ. ಕೇವಲ ಸಿನಿಮಾಗಳ ಮೂಲಕ ಮಾತ್ರವಲ್ಲ, ತಮ್ಮ ವ್ಯಕ್ತಿತ್ವದ ಕಾರಣದಿಂದ ಅವರು ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದಾರೆ. ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮದುವೆ ಸದಾ ಹಾಟ್ ಟಾಪಿಕ್. ಇತ್ತೀಚೆಗೆ ಮತ್ತೊಮ್ಮೆ ಪ್ರಭಾಸ್‌ ಮದುವೆಯ ಸುದ್ದಿ ವೈರಲ್ ಆಗಿದೆ. ಈಗಾಗಲೇ ಇವರ ಮದುವೆ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಮತ್ತೊಮ್ಮೆ ಇವರ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದೆ. ಅವರ ಮದುವೆ ಇದೇ ವರ್ಷ ಎಂದು ಹೇಳಲಾಗುತ್ತಿದೆ. ಅಲ್ಲದೇ ಖ್ಯಾತ ಜ್ಯೋತಿಷಿಯೊಬ್ಬರು ಪ್ರಭಾಸ್‌ ವೈವಾಹಿಕ ಜೀವನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. 

ಇದನ್ನೂ ಓದಿ : Sidharth-Kiara Affair: ಮದುವೆಗೂ ಮುನ್ನ ಕಿಯಾರಾ ಜೊತೆಗೆ ಈ ಕೆಲಸ ಮಾಡಲಿದ್ದಾರಂತೆ ಸಿದ್ಧಾರ್ಥ್!

ಪ್ರಭಾಸ್ ಅಭಿಮಾನಿಗಳು ಮದುವೆ ಯಾವಾಗ? ಯಾರ ಜೊತೆ ಪ್ರಭಾಸ್‌ ಸಪ್ತಪದಿ ತುಳಿಯಬಹುದು ಎಂಬುದನ್ನು ತಿಳಿಯಲು ಕಾದು ಕುಳಿತಿದ್ದಾರೆ. ಪ್ರಭಾಸ್ ಮದುವೆಗೆ ಸಂಬಂಧಿಸಿದಂತೆ ಯಾವುದೇ ಅಪ್‌ಡೇಟ್‌ ಬಂದರೂ ಫ್ಯಾನ್ಸ್‌ ಕುತೂಹಲ ಹೆಚ್ಚಾಗುತ್ತದೆ. ಸದ್ಯ ಪ್ರಭಾಸ್ ಗೆ 42 ವರ್ಷ. ಅವರ ಅಭಿಮಾನಿಗಳು ಶೀಘ್ರದಲ್ಲೇ ಮದುವೆಯಾಗಬೇಕೆಂದು ಬಯಸುತ್ತಾರೆ. ಕಳೆದ ಹತ್ತು ವರ್ಷಗಳಿಂದ ಪ್ರಭಾಸ್ ಮದುವೆ ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸರಣಿಯಲ್ಲಿ ಅನೇಕ ವದಂತಿಗಳು ಹುಟ್ಟಿಕೊಂಡಿವೆ, ಆದರೆ ಒಂದೇ ಒಂದು ವದಂತಿಯು ನಿಜವಾಗಲಿಲ್ಲ. ಆದರೆ ಇತ್ತೀಚೆಗಷ್ಟೇ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಪ್ರಭಾಸ್ ಮದುವೆ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದರು. ಇದುವರೆಗೆ ಅನೇಕ ಸೆಲೆಬ್ರಿಟಿಗಳ ಬಗ್ಗೆ ಅವರ ಭವಿಷ್ಯ ನಿಜವಾಗಿದೆ. ಇತ್ತೀಚೆಗಷ್ಟೇ ಪ್ರಭಾಸ್ ಮದುವೆ ಬಗ್ಗೆ ಮಾತನಾಡಿರುವ ವೇಣು ಸ್ವಾಮಿ, ಪ್ರಭಾಸ್ ಮದುವೆಯಾದರೆ ಅವರ ಪರಿಸ್ಥಿತಿ ಉದಯ್ ಕಿರಣ್ ಅವರಂತಾಗುತ್ತದೆ ಎಂದು ಹೇಳಿದ್ದು, ಈ ಹೇಳಿಕೆ ಭಾರೀ ವೈರಲ್‌ ಆಗುತ್ತಿದೆ.

ಉದಯ್ ಕಿರಣ್ ಟಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದಾರೆ. ಕೇವಲ ಎರಡ್ಮೂರು ಚಿತ್ರಗಳಿಂದ ಸ್ಟಾರ್ ಹೀರೋ ಆಗಿ ಖ್ಯಾತಿ ಪಡೆದವರು. ಆದರೆ ಅದರ ನಂತರ ಉದಯ್ ಅವರ ವೃತ್ತಿಜೀವನವು ಅನೇಕ ಏರಿಳಿತಗಳನ್ನು ಎದುರಿಸಿತು. ಉದಯ್ ಕಿರಣ್ ಕೂಡ ಒಳ್ಳೆಯ ಫೇಮ್‌ನಲ್ಲಿದ್ದಾಗಲೇ ಮದುವೆಯಾಗಿದ್ದು, ನಂತರ ಕಾರಣಾಂತರಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಈಗ ಪ್ರಭಾಸ್ ಗೆ ಉದಯ್ ಕಿರಣ್ ತರಹದ ಪರಿಸ್ಥಿತಿ ಬರುತ್ತೆ ಅಂತ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದರಿಂದಾಗಿ ಪ್ರಭಾಸ್‌ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ವೇಣು ಸ್ವಾಮಿ ಹಲವು ಸೆಲೆಬ್ರಿಟಿಗಳ ಬಗ್ಗೆ ಹೇಳಿದ್ದೆಲ್ಲ ನಿಜವಾಗಿರುವುದರಿಂದ ಪ್ರಭಾಸ್ ಜೀವನದಲ್ಲೂ ಅದೇ ಆಗುತ್ತೋ ಏನೋ ಎಂಬ ಭಯ ಅಭಿಮಾನಿಗಳಲ್ಲಿದ್ದು, ಇದೇ ಕಾರಣಕ್ಕೆ ಪ್ರಭಾಸ್ ಮದುವೆ ಆಗುತ್ತಿಲ್ಲ ಎಂದು ಸಹ ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ :  ಪವನ್ ಒಡೆಯರ್ ನಿರ್ಮಾಣದ ‘ಡೊಳ್ಳು’ ಸಿನಿಮಾದ ಮೊದಲ ಹಾಡು ಅನಾವರಣ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News