Divya Shridhar - Arnaav: "ನನ್ನ ಮಗುವಿನ ಮುಖ ತೋರಿಸು" - ಬಿಕ್ಕಿ ಬಿಕ್ಕಿ ಅತ್ತ ನಟಿ ದಿವ್ಯಾ ಪತಿ

Divya Shridhar -Arnaav: ಕಿರುತೆರೆ ನಟಿ ದಿವ್ಯಾ ಸುರೇಶ್ ಇತ್ತೀಚಿಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ತಮ್ಮ ಹೆಣ್ಣು ಮಗುವಿನ ಪೋಟೊ ಒಂದನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಮಗುವಿನ ಫೋಟೊ ಕಂಡ ದಿವ್ಯಾ ಪತಿ ಆರ್ನವ್ ನನ್ನ ಮಗುವನ್ನು ವಿಡಿಯೋದಲ್ಲಾದರೂ ತೋರಿಸು ಎಂದು ಕಣ್ಣೀರು ಹಾಕಿದ್ದಾರೆ.

Written by - Zee Kannada News Desk | Last Updated : Apr 19, 2023, 06:28 PM IST
  • ಮಗುವಿನ ಮುಖ ತೋರಿಸು ಎಂದು ನಟಿ ದಿವ್ಯಾ ಪತಿ ಕಣ್ಣೀರು
  • ಪ್ರೀತಿಸಿ ಮದುವೆ ಆಗಿದ್ದ ದಿವ್ಯಾ ಶ್ರೀಧರ್‌ ಹಾಗೂ ಆರ್ನವ್
  • ಇಬ್ಬರು ಕಿರುತೆರೆ ನಟ ನಟಿ
Divya Shridhar - Arnaav: "ನನ್ನ ಮಗುವಿನ ಮುಖ ತೋರಿಸು" - ಬಿಕ್ಕಿ ಬಿಕ್ಕಿ ಅತ್ತ ನಟಿ ದಿವ್ಯಾ ಪತಿ title=

ಬೆಂಗಳೂರು: ಕಿರುತೆರೆ ನಟಿ ದಿವ್ಯಾ ಸುರೇಶ್ ಇತ್ತೀಚಿಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಿವ್ಯಾ ಅವರು ತಮ್ಮ  ಹೆಣ್ಣು ಮಗುವಿನ  ಪೋಟೊ ಒಂದನ್ನು  ಇನ್ಸ್ಟಾಗ್ರಾಮ್​ನಲ್ಲಿ   ಹಂಚಿಕೊಂಡಿದ್ದರು. ಮಗುವಿನ ಫೋಟೊ ಕಂಡ ದಿವ್ಯಾ ಪತಿ ಆರ್ನವ್ ನನ್ನ ಮಗುವನ್ನು ವಿಡಿಯೋದಲ್ಲಾದರೂ ತೋರಿಸು ಎಂದು ಕಣ್ಣೀರು ಹಾಕಿದ್ದಾರೆ.

ತಮಿಳು ಸೀರಿಯಲ್‌ನಲ್ಲಿ ನಟಿಸುವಾಗ  ದಿವ್ಯಾ ಶ್ರೀಧರ್‌ಗೆ ಆರ್ನವ್ ಪರಿಚಯ ಆಗಿ ಪ್ರೀತಿಸಿ ಮದುವೆ ಆಗಿದ್ದರು. ಮದುವೆ ಆದ ಬಳಿಕ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತಿಯಿಂದ ದೂರವಾಗಿ ಜೀವನ ಸಾಗಿಸುತ್ತಿರುವ ದಿವ್ಯಾ, ಮಕ್ಕಳ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.  ಕಿರುತೆರೆ ನಟಿ ದಿವ್ಯಾ ಸುರೇಶ್ ಇತ್ತೀಚಿಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ  ತಮ್ಮ  ಹೆಣ್ಣು ಮಗುವಿನ  ಪೋಟೊ ಒಂದನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಅನೇಕ ಹೋರಾಟಗಳ ನಡುವೆ ತನ್ನ ಜೀವನದಲ್ಲಿ ಸಂತೋಷ ತುಂಬಿದ ದೇವತೆ ಎಂದು ನಟಿ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: Weekend with Ramesh 5: ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿ ಯಾರು ಗೊತ್ತಾ..?

ಇದೀಗ ಮಗುವಿನ ಫೋಟೊ ಕಂಡ ದಿವ್ಯಾ ಪತಿ ಆರ್ನವ್ ನನ್ನ ಮಗುವನ್ನು ವಿಡಿಯೋದಲ್ಲಾದರೂ ತೋರಿಸು ಎಂದು ಕಣ್ಣೀರು ಹಾಕಿದ್ದಾರೆ.  ಊರಿನಲ್ಲಿ ಅನೇಕ ಮಕ್ಕಳನ್ನು ಎತ್ತಿಕೊಂಡು ಆಟವಾಡುತ್ತಿದ್ದೆ. ಆದರೆ ಈಗ ನನ್ನ ಮಗುವನ್ನು ನಾನೇ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ..

ಆರ್ನವ್ ಎಂದು ಹೇಳಿಕೊಂಡಿದ್ದ ಅಮ್ಜದ್ ಖಾನ್  ಹಾಗೂ ದಿವ್ಯಾ ಶ್ರೀಧರ್‌ 2017ರಿಂದ ಇತ್ತಚೀನವೆರೆಗೂ ಇಬ್ಬರೂ ಲಿವಿಂಗ್ ಟು ಗೆದರ್‌ ಇದ್ದರು. 5 ವರ್ಷದ ಬಳಿಕ ಮದುವೆಯು ಆಗಿದ್ದರು. ಕೆಲ ತಿಂಗಳ ಹಿಂದೆ ನಟಿ ದಿವ್ಯಾ ಮಾಧ್ಯಮ ಮುಂದೆ ಬಂದು ಅರ್ನವ್ ವಿರುದ್ಧ ಕಿರುಕುಳ ನೀಡುತ್ತಾನೆಂದು ಹೇಳಿಕೊಂಡಿದ್ದರು. ಅಂದಿನಿಂದ ಇಬ್ಬರೂ ಬೇರ್ಪಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: Samantha - Varun Dhawan: ಸಮಂತಾ - ವರುಣ್ ಧವನ್ ಲಂಡನ್ ಟ್ರಿಪ್ ಬಲು ಜೋರು!

ಮದುವೆ ಬಳಿಕ ದಿವ್ಯಾ ಕೂಡ ತಾನು ಗರ್ಭಿಣಿ ಎಂಬ ವಿಷಯವನ್ನು ಹಂಚಿಕೊಂಡಿದ್ದರು. ಇದೀಗ ವೆಬ್ ಸೈಟ್​ ಸಂದರ್ಶನವೊಂದರಲ್ಲಿ ಅರ್ನವ್, ನಾನು ಊರಿನಲ್ಲಿ ಅನೇಕ ಮಕ್ಕಳನ್ನು ಎತ್ತಿಕೊಂಡು ಆಟವಾಡುತ್ತಿದ್ದೆ. ಆದರೆ ಈಗ ನನ್ನ ಮಗುವನ್ನು ಎತ್ತಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ ಅಳಲು ತೋರಿಕೊಂಡಿದ್ದಾರೆ.

ವೈಯಕ್ತಿಕವಾಗಿ ಮುಂದೆ ಬರಲು  ಸಾಕಷ್ಟು ಕಾನೂನು ಸಮಸ್ಯೆಗಳಿವೆ. ಅದಲ್ಲದೆ ದಿವ್ಯಾ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಗೊತ್ತಿಲ್ಲ. ಹೀಗಾಗಿ ಮಗುವನ್ನು ವಿಡಿಯೋದಲ್ಲಿ ತೋರಿಸು  ಎಂದು ಅರ್ನವ್​ ಕಣ್ಣೀರು ಹಾಕಿದರು.

ಧಾರಾವಾಹಿಯಲ್ಲಿ ಅರ್ನವ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಜಯ್ ಟಿವಿಯಲ್ಲಿ ಪ್ರಸಾರವಾಗುವ ಚೆಲ್ಲಮ್ಮ ಧಾರವಾಹಿಯಲ್ಲಿ ನಟಿಸುತ್ತಿದ್ದು, ಇಬ್ಬರು ಕಿರುತೆರೆ ನಟರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News