Jawan trailer : ನ್ಯೂ ಅವತಾರದಲ್ಲಿ ಕಿಂಗ್‌ ಖಾನ್, ವಿಜಯ್ ಸೇತುಪತಿ ಸೆಂಟರ್‌ ಅಟ್ರ್ಯಾಕ್ಷನ್‌..! ಮಿಸ್‌ ಮಾಡದೇ ನೋಡಿ

Jawan trailer out : ಇಷ್ಟು ದಿನ ಪೋಸ್ಟರ್‌ ಮತ್ತು ಟೀಸರ್‌ ಮೂಲಕ ಹೈಪ್‌ ಕ್ರಿಯೆಟ್‌ ಮಾಡುತ್ತಿದ್ದ ʼಜವಾನ್‌ʼ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ. ಹಿಂದೆಂದೂ ನೋಡಿದ ರೀತಿಯಲ್ಲಿ ಶಾರುಖ್ ಖಾನ್ ಅವರನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಜವಾನ್‌ ಇಂಡಿಯನ್‌ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದು ಬೀಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ.

Written by - Krishna N K | Last Updated : Aug 31, 2023, 01:22 PM IST
  • ʼಜವಾನ್‌ʼ ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ.
  • ನ್ಯೂ ಲುಕ್‌ನಲ್ಲಿ ಶಾರುಖ್‌ ಖಾನ್‌ ಮಿಂಚಿದ್ದಾರೆ.
  • ವಿಜಯ್ ಸೇತುಪತಿ ಸೆಂಟರ್‌ ಅಟ್ರ್ಯಾಕ್ಷನ್‌
Jawan trailer : ನ್ಯೂ ಅವತಾರದಲ್ಲಿ ಕಿಂಗ್‌ ಖಾನ್, ವಿಜಯ್ ಸೇತುಪತಿ ಸೆಂಟರ್‌ ಅಟ್ರ್ಯಾಕ್ಷನ್‌..! ಮಿಸ್‌ ಮಾಡದೇ ನೋಡಿ title=

Shah rukh khan : ಬ್ಲಾಕ್ ಬಸ್ಟರ್ 'ಪಠಾಣ್' ನಂತರ ಬಾಲಿವುಡ್‌ ನಟ ಶಾರುಖ್ ಖಾನ್ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಈ ಬಾರಿ ʼಜವಾನ್‌ʼ ರೂಪದಲ್ಲಿ ಕಿಂಗ್‌ ಖಾನ್‌ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ಇಷ್ಟು ದಿನ ಬರೀ ಟೈಟಲ್‌, ಫೋಸ್ಟರ್‌, ಟೀಸರ್‌ನಿಂದ ಹೈಪ್‌ ಕ್ರಿಯೇಟ್‌ ಮಾಡಿದ್ದ ಜವಾನ್‌ ಇದೀಗ ಟ್ರೈಲರ್‌ ಮೂಲಕ ಟ್ರೆಂಡ್‌ ಸೃಷ್ಟಿಸುತ್ತಿದೆ.

ಹೌದು.. ಬಹುನಿರೀಕ್ಷಿತ ಜವಾನ್‌ ಸಿನಿಮಾ ಟ್ರೈಲರ್‌ ರಿಲೀಸ್‌ ಆಗಿದೆ. ಮೊದಲ ದೃಶ್ಯದಲ್ಲಿ, ಶಾರುಖ್ ಖಾನ್ ಒತ್ತೆಯಾಳುಗಳ ಬಿಡುಗಡೆಗೆ ಆಲಿಯಾ ಭಟ್‌ ಕೇಳುವ ಡೈಲಾಗ್‌ ಇದೆ. ನಂತರ ಮಾಜಿ ಸೈನಿಕ ಪಾತ್ರ, ವಿಲನ್‌ ಸೇರಿದಂತೆ ಹಲವು ರೂಪಗಳಲ್ಲಿ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿದೆ. ಅಲ್ಲದೆ, ತಮಿಳು ನಟ ವಿಜಯ್ ಸೇತುಪತಿ ಈ ಸಿನಿಮಾದ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕವಾಗಿ ನಟಿಗೆ ಮುತ್ತಿಟ್ಟ ಖ್ಯಾತ ನಿರ್ದೇಶಕ..! ಅವಳಿಗೆ ಸಮಸ್ಯೆಯಿಲ್ಲ ನಿಮಗ್ಯಾಕೆ ತೊಂದ್ರೆ...?

ಶಾರುಖ್ ಖಾನ್ ಮತ್ತು ವಿಜಯ್ ಸೇತುಪತಿ ಇಬ್ಬರೂ ಹಲವಾರು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುವ ವ್ಯಾಪಾರಿ ಪಾತ್ರ ನಿರ್ವಹಿಸಿರುವುದು ಟ್ರೈಲರ್‌ ನೋಡಿದ್ರೆ ಅರ್ಥವಾಗುತ್ತದೆ. ಶಾರುಖ್ ಮತ್ತು ನಯನತಾರಾ ಕೆಲವು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

ಟ್ರೈಲರ್‌ನಲ್ಲಿ ದೀಪಿಕಾ ಪಡುಕೋಣೆ ಕುಸ್ತಿ ಪಂದ್ಯದಲ್ಲಿ ಶಾರುಖ್ ಅವರನ್ನು ಸೋಲಿಸುವ ದೃಶ್ಯವಿದೆ. ಅಂತಿಮ ಶಾಟ್‌ನಲ್ಲಿ ಶಾರುಖ್ ತಂದೆಯ ಪಾತ್ರವನ್ನು ಸಹ ಮಾಡಿದ್ದಾರೆ ಎಂದು ತಿಳಿಯುತ್ತದೆ. ಒಟ್ಟಾರೆಯಾಗಿ ಟ್ರೈಲರ್‌ ನೋಡಿದ್ರೆ ಹಿಂದೆಂದೂ ನೋಡಿದ ರೀತಿಯಲ್ಲಿ ಕಿಂಗ್‌ ಖಾನ್‌ ನಟಿಸಿದ್ದಾರೆ ಅಂತ ಸ್ಪಷ್ಟವಾಗುತ್ತದೆ. ಅಲ್ಲದೆ, ಸಿನಿಮಾ ಭಾರತೀಯ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಕ್ರಿಯೇಟ್‌ ಮಾಡುವುದಂತು ಖಚಿತ.

ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ಸ್ ಶೋ ಗೆ ಗುಡ್ ಬೈ ಹೇಳಿದ ನಟಿ ಚಂದನ..ಕಾರಣವೇನು ಗೊತ್ತಾ..?

'ಜವಾನ್' ಚಿತ್ರವು ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್ ಮತ್ತು ಯೋಗಿ ಬಾಬು ಸೇರಿದಂತೆ ಇತರ ಪ್ರಮುಖ ನಟರು ಇದ್ದಾರೆ. ದೀಪಿಕಾ ಪಡುಕೋಣೆ ಕಿರು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತಿಯಾಗಿದ್ದು, ಅಟ್ಲೀ ನಿರ್ದೇಶಿಸಿದ್ದಾರೆ, ಗೌರಿ ಖಾನ್ ನಿರ್ಮಿಸಿದ್ದಾರೆ ಮತ್ತು ಗೌರವ್ ವರ್ಮಾ ಸಹ-ನಿರ್ಮಾಣ ಮಾಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News