ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ !

Shah Rukh Khan security: ಈ ಘಟನೆಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ. 

Written by - Chetana Devarmani | Last Updated : Apr 22, 2024, 04:15 PM IST
  • ಸಲ್ಮಾನ್ ಖಾನ್ ಮನೆ ಮೇಲೆ ನಡೆದ ಗುಂಡಿನ ದಾಳಿ
  • ಶಾರುಖ್‌ ಖಾನ್ ಭದ್ರತೆಯಲ್ಲಿ ಹೆಚ್ಚಳ
  • ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಸಲ್ಮಾನ್ ಖಾನ್‌ ಮನೆ ಮೇಲೆ‌ ಗುಂಡಿನ ದಾಳಿ ಬಳಿಕ ಶಾರುಖ್‌ ಖಾನ್ ಭದ್ರತೆ ಹೆಚ್ಚಳ ! title=

Shah Rukh Khan security increased: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಮನೆ ಮೇಲೆ ನಡೆದ ಗುಂಡಿನ ದಾಳಿ ಘಟನೆ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಸಲ್ಮಾನ್‌ ಖಾನ್‌ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪೊಲೀಸರು ಈ ಬಗ್ಗೆ ನಿರಂತರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ. 

ಶಾರುಖ್ ಐಪಿಎಲ್ ಪಂದ್ಯಗಳ ಕಾರಣ ಶಾರುಖ್ ಖಾನ್ ಕೋಲ್ಕತ್ತಾದಿಂದ ಮುಂಬೈಗೆ ಹೆಚ್ಚು ಪ್ರಯಾಣಿಸುತ್ತಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: 50 ಸೆಕೆಂಡ್ʼಗೆ ಈ ನಟಿ ಪಡೆದಿದ್ದು 5 ಕೋಟಿ ಸಂಭಾವನೆ.. ಆಲಿಯಾ, ದೀಪಿಕಾ, ಕರೀನಾ ಎಲ್ಲರನ್ನೂ ಮೀರಿಸಿದ ಬ್ಯೂಟಿ ಯಾರು ಗೊತ್ತೇ! 

ಕಿಂಗ್ ಖಾನ್ ಗೆ ಭದ್ರತೆ ಹೆಚ್ಚಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಶಾರುಖ್ ಖಾನ್ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಾಡಿ ಗಾರ್ಡ್‌ಗಳು, ಪೊಲೀಸರು ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಅವರೊಂದಿಗೆ ಕಾಣಿಸಿಕೊಂಡರು. ಕಿಂಗ್ ಖಾನ್ ಕಾರಿನಿಂದ ಇಳಿದ ತಕ್ಷಣ ಬಾಡಿ ಗಾರ್ಡ್ ಗಳು, ಪೊಲೀಸರು ಹಾಗೂ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರಿದಿದ್ದರು. 

ಅಷ್ಟೇ ಅಲ್ಲ, ಶಾರುಖ್ ಖಾನ್ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಸಹ ಹೊಂದಿದ್ದಾರೆ. ವೀಡಿಯೊದಲ್ಲಿ, ಶಾರುಖ್ ಖಾನ್ ನೀಲಿ ಬಣ್ಣದ ಹೂಡಿ ಮತ್ತು ಕಾರ್ಗೋ ಪ್ಯಾಂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಕೂಡ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ ತಮ್ಮ ಕಾರನ್ನು ತಲುಪಿದರು. 

ಇದೇ ತಿಂಗಳ 14 ರಂದು ಮುಂಜಾನೆ 5 ಗಂಟೆಗೆ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ಮೇಲೆ ಗುಂಡಿನ ದಾಳಿ ನಡೆಯಿತು. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಮುಂದೆ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಇದನ್ನೂ ಓದಿ: ನಟಿ ರಮ್ಯಾ ತಂದೆ ಪ್ರಭಾವಿ ರಾಜಕಾರಣಿ.. ಅಮ್ಮ‌ ಕೂಡ ಫೇಮಸ್ ಲೀಡರ್‌ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News