ಬಾಲಿವುಡ್‌ ಕಿಂಗ್ ಶಾರುಖ್ ಖಾನ್‌ಗೆ ಅಭಿಮಾನಿಯಿಂದ ಶಾಕಿಂಗ್ ಬೆದರಿಕೆ!

ಸೋಷಿಯಲ್ ಮೀಡಿಯಾದಲ್ಲಿ ಶಾರುಖ್ ಖಾನ್ ಅವರ ಅಭಿಮಾನಿಗಳು #WeWantAnnouncementSRK ಅನ್ನು ಹಲವು ಬಾರಿ ಟ್ರೆಂಡ್ ಮಾಡಿದ್ದಾರೆ. ಇದರಿಂದಾಗಿ ಅವರು ಶಾರುಖ್ ಖಾನ್ ಅವರ ಚಿತ್ರಕ್ಕಾಗಿ ಎಷ್ಟು ಕುತೂಹಲದಿಂದ ಕಾಯುತ್ತಿದ್ದಾರೆಂದು ಹೇಳುತ್ತಿದ್ದಾರೆ.

Last Updated : Dec 31, 2019, 09:49 AM IST
ಬಾಲಿವುಡ್‌ ಕಿಂಗ್ ಶಾರುಖ್ ಖಾನ್‌ಗೆ ಅಭಿಮಾನಿಯಿಂದ ಶಾಕಿಂಗ್ ಬೆದರಿಕೆ! title=
Photo Courtesy: Instagram

ನವದೆಹಲಿ: ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್(ShahRukh Khan) ಅವರ ಸೂಪರ್ಹಿಟ್ ಚಿತ್ರದ ಬರ ಕೊನೆಗೊಳ್ಳುತ್ತಿಲ್ಲ. 'ಝೀರೋ' ನಂತರ ಶಾರುಖ್ ಖಾನ್ ಇನ್ನೂ ಯಾವುದೇ ಹೊಸ ಚಿತ್ರ ಘೋಷಿಸಿಲ್ಲ. ಶಾರುಖ್ ಸ್ವಲ್ಪ ಸಮಯದವರೆಗೆ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. 2019 ರಲ್ಲಿ ಶಾರುಖ್ ಖಾನ್ ಅವರ ಒಂದು ಚಿತ್ರವೂ ಬಿಡುಗಡೆಯಾಗಿಲ್ಲ. ಈಗ ಅವರ ಅಭಿಮಾನಿಗಳ ತಾಳ್ಮೆ ಮಿತಿ ಮೀರಿದೆ. ಅವರು ಸೋಷಿಯಲ್ ಮೀಡಿಯಾದಲ್ಲಿ #WeWantAnnouncementSRK ಅನ್ನು ಹಲವು ಬಾರಿ ಟ್ರೆಂಡ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾ ಟ್ರೆಂಡ್ ವರೆಗೂ ಅದು ಚೆನ್ನಾಗಿತ್ತು, ಆದರೆ ಈಗ ಶಾರುಖ್ ಅವರ ಅಭಿಮಾನಿಗಳು ಅವರು ಚಿತ್ರರಂಗಕ್ಕೆ ಹಿಂದಿರುಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಜನವರಿ 1 ರೊಳಗೆ ನಿಮ್ಮ ಚಿತ್ರವನ್ನು ನೀವು ಘೋಷಿಸದಿದ್ದರೆ ನಾನು ಸಾಯುತ್ತೇನೆ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ ನನ್ನ ಜೀವವನ್ನು ಕಳೆದುಕೊಳ್ಳುತ್ತೇನೆ ಎಂದು ಬಳಕೆದಾರರು ಬರೆದಿದ್ದಾರೆ. 

#WeWantAnnouncementSRK@iamsrk

if you don't announce your next on 1st January I will sucide

I repeat I will sucide..#ShahRukhKhan

— AniketSRK⚡ (@____SRKFAN____) December 29, 2019

1 ವರ್ಷ ನಾವು ನಿಮ್ಮನ್ನು ಪರದೆಯ ಮೇಲೆ ನೋಡಲಿಲ್ಲ. ಈ ವರ್ಷವಾದರೂ ದಯವಿಟ್ಟು ನಿಮ್ಮ ಚಿತ್ರವನ್ನು ಘೋಷಿಸಿ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ಮನುಷ್ಯನು ಭರವಸೆಯಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ನಾನು ನಿಮ್ಮ ಚಲನಚಿತ್ರಗಳನ್ನು ಥಿಯೇಟರ್‌ನಲ್ಲಿ ಮಾತ್ರ ನೋಡುತ್ತೇನೆ. ನೀವು ಇಲ್ಲದ ಜೀವನವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಾನು 1 ವರ್ಷದಿಂದ ನಿಮ್ಮ ಯಾವುದೇ ಚಲನಚಿತ್ರಗಳನ್ನು ನೋಡಿಲ್ಲ. ನೀವು ಅಬ್ಬರದಿಂದ ಹಿಂತಿರುಗಬೇಕೆಂದು ನಾವು ಬಯಸುತ್ತೇವೆ. ನನ್ನ ಕೊನೆಯ ಉಸಿರಿರುವವರೆಗೂ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಬಳಕೆದಾರ ನಿಕುಂಜ್ ಶರ್ಮಾ ನೀವು ಕೇವಲ ನಮಗೆ ಸ್ಟಾರ್ ಮಾತ್ರವಲ್ಲ ಎಂದು ಬರೆದಿದ್ದಾರೆ. ನಮ್ಮ ಬಾಲ್ಯವನ್ನು ನೀವು ಸುಂದರಗೊಳಿಸಿದ್ದೀರಿ. ನೀವು ನಮಗೆ ಸ್ಫೂರ್ತಿ. ಅದೇ ಸಮಯದಲ್ಲಿ ಜುನೈದ್ ಖಾನ್ ಅವರು ಶಾರುಖ್ ನಿಮ್ಮ ಸಮಯವನ್ನು ತೆಗೆದುಕೊಳ್ಳುತ್ತಾರೆ ಎಂದು ಬರೆದಿದ್ದಾರೆ. ನೀವು ಬೆಸ್ಟ್ ಎಂದು ನಮಗೆ ತಿಳಿದಿದೆ ಎಂದಿದ್ದಾರೆ.

ಶಾರುಖ್ ಖಾನ್ ಅವರನ್ನು 2018 ರಲ್ಲಿ 'ಝೀರೋ' ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಅವರೊಂದಿಗೆ ಇದ್ದರು. ಚಿತ್ರದಲ್ಲಿ ಶಾರುಖ್, ಅನುಷ್ಕಾ ಮತ್ತು ಕತ್ರಿನಾ ಅವರ ನಟನೆ ಪ್ರಶಂಸೆಗೆ ಪಾತ್ರವಾಗಿದ್ದರೂ ಚಿತ್ರದ ಕಥೆಯ ಬಗ್ಗೆ ಸಾಕಷ್ಟು ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಶಾರುಖ್ ತಮ್ಮ ಮುಂದಿನ ಚಿತ್ರವನ್ನು ಯಾವಾಗ ಘೋಷಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಶಾರುಖ್ ಯಶ್ ರಾಜ್ ಬ್ಯಾನರ್‌ನೊಂದಿಗೆ 'ಧೂಮ್ -4' ಪುನರಾಗಮನ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಈ ಸುದ್ದಿ ಇನ್ನೂ ದೃಢಪಟ್ಟಿಲ್ಲ.

Trending News