ಏಳನೇ ವಯಸ್ಸಿನಲ್ಲಿ ಹತ್ತಿರದ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಖ್ಯಾತ ನಟಿ ಈಕೆ!!

Famous actress: ವರದಿಗಳ ಪ್ರಕಾರ ಇತ್ತೀಚೆನ ದಿನಗಳಲ್ಲಿ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ.. ಆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದಿಲ್ಲೊಂದು ಸುದ್ದಿಗಳು ಜನರಲ್ಲಿ ಅಸಹನೆ ಹೆಚ್ಚಿಸುತ್ತಿವೆ..

Written by - Savita M B | Last Updated : May 3, 2024, 12:47 PM IST
  • ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ
  • ಆದರೆ ಹಲವು ವರ್ಷಗಳಿಂದ ಈ ಕಿರುಕುಳ ನಡೆಯುತ್ತಿದೆ
ಏಳನೇ ವಯಸ್ಸಿನಲ್ಲಿ ಹತ್ತಿರದ ಸಂಬಂಧಿಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾದ ಖ್ಯಾತ ನಟಿ ಈಕೆ!! title=

Maninee De: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿಗಳು ಹೇಳುತ್ತವೆ. ಆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರತಿದಿನ ಒಂದಿಲ್ಲೊಂದು ಸುದ್ದಿಗಳು ಜನರಲ್ಲಿ ಅಸಹನೆ ಹೆಚ್ಚಿಸುತ್ತಿದೆ. ಆದರೆ ಹಲವು ವರ್ಷಗಳಿಂದ ಈ ಕಿರುಕುಳ ನಡೆಯುತ್ತಿದೆ ಎಂದು ಸಂತ್ರಸ್ತರು ಬಂದು ಹೇಳಿದಾಗ ಇನ್ನು ಹೆಚ್ಚು ಬೇಸರವಾಗುತ್ತದೆ.. ವಿಶೇಷವಾಗಿ ಏಳು ಮತ್ತು ಎಂಟು ವರ್ಷದ ಮಕ್ಕಳ ಮೇಲಿನ ಅತ್ಯಾಚಾರ ಘಟನೆಗಳ ವಿರುದ್ಧ ನಾವೆಲ್ಲರೂ ಪ್ರತಿಭಟಿಸಬೇಕಾಗಿದೆ. ಇತ್ತೀಚೆಗಷ್ಟೇ ಸಿನಿಮಾ ಮತ್ತು ಕಿರುತೆರೆ ಕಲಾವಿದೆಯೊಬ್ಬರು ತಾವು ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಹೇಳುವ ಮೂಲಕ ಶಾಕ್ ನೀಡಿದ್ದಾರೆ.

ಮಾನಿನಿ ಡಿ ಅವರು ಫ್ಯಾಷನ್, ಸ್ಟೂಡೆಂಟ್ ಆಫ್ ದಿ ಇಯರ್ ಮತ್ತು ಹಲವಾರು ಜನಪ್ರಿಯ ದೂರದರ್ಶನ ಕಾರ್ಯಕ್ರಮಗಳ ಭಾಗವಾಗಿರುವ ನಟಿ. ತನ್ನ ಏಳನೇ ವಯಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ವಿಷಯವನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಚಿಕ್ಕ ವಯಸ್ಸಿಗೆ ತುಂಬಾ ನೋವಿನ ಅನುಭವವಾಗಿದೆ ಎಂದು ನಟಿ ವಿವರಿಸಿದ್ದಾರೆ.. 

ಇದನ್ನೂ ಓದಿ-Actress Bhavana: ಈ ಖ್ಯಾತ ನಟನ ಜತೆ ಮದುವೆ.. ನಾಲ್ಕು ಬಾರಿ ಗರ್ಭಪಾತ, ಸತ್ತೇ ಹೋಗಿದ್ದೇ.. ನಟಿ ಭಾವನಾ ಅನುಭವಿಸಿದ ಕಷ್ಟ ಒಂದೆರಡಲ್ಲ.!

 ಸಂದರ್ಶನದಲ್ಲಿ ಮಾನಿನಿ, "ನಾನು ಚಿಕ್ಕವಳಿದ್ದಾಗ ನನಗೆ ಗೊತ್ತಿಲ್ಲದೆ ಕೆಲವು ಮನುಷ್ಯ ರೂಪದ ಭೂತಗಳು ನನ್ನೊಂದಿಗೆ ಬಹಳ ಕೆಟ್ಟದಾಗಿ ನಡೆದುಕೊಂಡಿವೆ.. ಅವುಗಳಿಗೆಲ್ಲ ಸಮಯವೇ ಉತ್ತರ ನೀಡುತ್ತೆ" ಎಂದು ಖಾರವಾಗಿ ಮಾತನಾಡಿದ್ದಾರೆ..

ಇದನ್ನೂ ಓದಿ-ಎಷ್ಟು ಸಖತ್ತಾಗಿದ್ದಾಳೆ ಗುರು ಶಿವರುದ್ರೇಗೌಡರ ಮಗಳು..! ಫೋಟೋಸ್‌ ಇಲ್ಲಿವೆ ನೋಡಿ...

ಇದಲ್ಲದೇ ಹಲವು ವರ್ಷಗಳ ನಂತರ ತನ್ನ ಪೋಷಕರೊಂದಿಗೆ ಲೈಂಗಿಕ ಕಿರುಕುಳದ ಬಗ್ಗೆ ಹಂಚಿಕೊಂಡಿದ್ದೇನೆ.. ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ ಬೇರಾರೂ ಅಲ್ಲ, ತನ್ನ ಹತ್ತಿರದ ಸಂಬಂಧಿ ಎಂದು ನಟಿ ಹೇಳಿದ್ದಾಳೆ. ಆದರೆ ಇಲ್ಲಿ ಬೇಸರದ ಸಂಗತಿಯೆಂದರೆ... ಈ ವಿಷಯವನ್ನು ನನ್ನ ಚಿಕ್ಕಪ್ಪಂದಿರಿಗೆ ತಿಳಿಸಿದರೂ ಅವರು ಆ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲವಂತೆ.. 

"ಆ ಚಿಕ್ಕ ವಯಸ್ಸಿನಲ್ಲಿ ನಾನು ಹಿಂತಿರುಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆದರೆ ವಿಚಿತ್ರವೆಂದರೆ ಅವರೇ ಐದಾರು ವರ್ಷಗಳ ಹಿಂದೆ ನನಗೆ ಕರೆ ಮಾಡಿ ಕ್ಷಮೆ ಕೇಳಿದ್ದರು.. ಆ ಕೆಟ್ಟ ಸಮಯದಲ್ಲಿ ನಾನು ದೇವರ ಹತ್ತಿರ ಪ್ರಾರ್ಥಿಸಿದೆ.. ಇದರ ಪರಿಣಾಮವಾಗಿ ನನಗೆ ಕಿರುಕುಳ ನೀಡಿದವರಿಗೆ ಅನಾರೋಗ್ಯ ಶುರುವಾಯಿತು.. ಕರ್ಮಾ ಎನ್ನುವುದು ನಿಜವಾಗಲೂ ಕಾಡುತ್ತೆ" ಎಂದು ನಟಿ ಹೇಳಿಕೊಂಡಿದ್ದರು..  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 
 

Trending News