Sneha: "ನನಗೆ ಒಂದು ಲವ್ ಬ್ರೇಕಪ್ ಆಗಿತ್ತು..": ವಿವಾಹವಾದ 12 ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ನಟಿ!

Sneha Love Breakup: ಬಹುಭಾಷಾ ನಟಿ ಸ್ನೇಹಾಗೆ ಮದುವೆಗೂ ಮುಂಚೆ ಒಂದು ಲವ್‌ ಬ್ರೇಕಪ್‌ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ವಿವಾಹವಾದ 12 ವರ್ಷಗಳ ನಂತರ ಈ ನಟಿ ಸತ್ಯ ಹೊರಹಾಕಿದ್ದೇಕೆ? ಇಲ್ಲಿದೆ ಇದರ ಸಂಪೂರ್ಣ ವಿವರ.  

Written by - Zee Kannada News Desk | Last Updated : Apr 17, 2024, 05:49 PM IST
  • ಬಹುಭಾಷಾ ನಟಿ ಸ್ನೇಹಾ ಹಾಗೂ ಪ್ರಸನ್ನ ದಂಪತಿ ಡಿವೋರ್ಸ್ ಪಡೆಯುತ್ತಾರೆ ಎಂಬ ಸುದ್ದಿ ಹರಿದಾಡಿತ್ತು.
  • ಪೊಸೆಸಿವ್‌ನೆಸ್ ಬೇರೆ. ನಂಬಿಕೆ ಬೇರೆ. ಹೆಚ್ಚು ಪೊಸೆಸಿವ್‌ ಆಗಿಬಿಟ್ಟರೆ ನಂಬಿಕೆ ಬ್ಯಾಲೆನ್ಸ್ ಮಾಡುವುದು ಕಷ್ಟ.
  • ಪ್ರಸನ್ನ ಕೈ ಹಿಡಿಯುವ ಮುನ್ನ ನನಗೆ ಒಂದು ಲವ್ ಬ್ರೇಕಪ್ ಆಗಿತ್ತು. ಆ ಸಮಯದಲ್ಲಿ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದೆ.
Sneha: "ನನಗೆ ಒಂದು ಲವ್ ಬ್ರೇಕಪ್ ಆಗಿತ್ತು..": ವಿವಾಹವಾದ 12 ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ನಟಿ! title=

South Actress Snehaʼs Love Breakup Story: ಕೆಲವು ದಿನಗಳ ಹಿಂದೆ ಬಹುಭಾಷಾ ನಟಿ ಸ್ನೇಹಾ ಹಾಗೂ ಪ್ರಸನ್ನ ದಂಪತಿ ಡಿವೋರ್ಸ್ ಪಡೆಯುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ, ಇಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದಾರೆ, ಡಿವೋರ್ಸ್‌ಗೆ ಮುಂದಾಗುತ್ತಿದ್ದಾರೆ ಎನ್ನುವ ವದಂತಿಗಳು ಕೇಳಿ ಬಂದಿದ್ದವು. ಈ ಜೋಡಿ ಇದಕ್ಕೆಲ್ಲಾ ಪರೋಕ್ಷವಾಗಿ ಸ್ಪಷ್ಟನೆ ನೀಡಿ, ಎಲ್ಲಾ ಸುಳ್ಳು ಎಂದು ಹೇಳಿದ್ದರು. ಇದೀಗ ನಟಿ ಸ್ನೇಹ ಸಂದರ್ಶನವೊಂದರಲ್ಲಿ  ತಮ್ಮ ಲವ್ ಬ್ರೇಕಪ್, ಮದುವೆ, ಮಕ್ಕಳು ಹೀಗೆ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

ತಮಿಳು ನಟಿ ಸ್ನೇಹಾ "ಪೊಸೆಸಿವ್‌ನೆಸ್ ಬೇರೆ. ನಂಬಿಕೆ ಬೇರೆ. ಹೆಚ್ಚು ಪೊಸೆಸಿವ್‌ ಆಗಿಬಿಟ್ಟರೆ ನಂಬಿಕೆ ಬ್ಯಾಲೆನ್ಸ್ ಮಾಡುವುದು ಕಷ್ಟ. ಮತ್ತೊಬ್ಬರಿಗೆ ಅದು ಅರ್ಥವಾಗುವುದಿಲ್ಲ. ಎಲ್ಲಿ ಹೋಗುತ್ತಿದ್ದೀರಾ? ಏನು ಮಾಡುತ್ತಿದ್ದೀರಾ? ಎಂದು ಅದು ಪೊಸೆಸಿವ್‌ನೆಸ್ ಇರುಬಹುದು, ನಂಬಿಕೆಯೂ ಆಗಿರಬಹುದು. ಒಬ್ಬರನ್ನು ಇನ್ನೊಬ್ಬರು ಅರ್ಥಮಾಡಿಕೊಂಡರೆ ಸಮಸ್ಯೆ ಆಗಲ್ಲ. ಇಲ್ಲದಿದ್ದರೆ ತಪ್ಪಾಗುತ್ತದೆ. ದಂಪತಿ ಡಿವೋರ್ಸ್ ಪಡೆಯುತ್ತಾರೆ" ಎಂದು ಹೇಳಿದ್ದಾರೆ. 

ಇದನ್ನೂ ಓದಿ: Bollywood Actress: ಮೊದಲ ನೋಟದಲ್ಲೇ ಖ್ಯಾತ ಕ್ರಿಕೆಟಿಗನ ಹೃದಯ ಗೆದ್ದ ಬಾಲಿವುಡ್‌ ನಟಿ ಈಕೆ! ಮದುವೆಯಾಗಿದ್ದು ಅವರನ್ನೇ!!

ನಟಿ ಸ್ನೇಹಾ, "ನಾವು ಏನು ಮಾಡುತ್ತಿದ್ದೇನೆ, ಎಲ್ಲಿ ಹೋಗುತ್ತಿದ್ದೇನೆ, ಎಷ್ಟು ಹೊತ್ತಿಗೆ ಬರುತ್ತೇನೆ ಎನ್ನುವುದನ್ನು ಒಬ್ಬರು ಕೇಳುವುದಕ್ಕೆ ಮುನ್ನ ಇನ್ನೊಬ್ಬರು ಹೇಳಬೇಕು. ಅಲ್ಲಿಗೆ ಹೋದ ಮೇಲೂ ಸಮಯ ಇದ್ದರೆ ಒಮ್ಮೆ ಫೋನ್ ಮಾಡಿ ಮಾತನಾಡಿ. ಊಟ ಆಯ್ತಾ? ಏನು ಮಾಡುತ್ತಿದ್ದೀಯಾ ಅಂತ ಕೇಳಬೇಕು. ಇಂತಹ ವಿಷಯಗಳೇ ಇಬ್ಬರಲ್ಲಿ ನಂಬಿಕೆ ಹೆಚ್ಚಿಸುತ್ತದೆ. ಆರಂಭದಲ್ಲಿ ನಾನು ಸ್ವಲ್ಪ ಪೊಸೆಸಿವ್ ಆಗಿದ್ದೆ. ಹಾಗಂತ ನಂಬಿಕೆ ಇರಲಿಲ್ಲ ಅಂತ ಅಲ್ಲ. ಮದುವೆ ಆದಮೇಲೆ ಜೀವನ ನಮಗೂ ಬೋರ್ ಎನಿಸಿತ್ತು. ನಾನು ಸಾಕಷ್ಟು ಜಗಳ ಆಡಿದ್ದೇವೆ. ಜಗಳದ ಬಳಿಕ ಇಬ್ಬರೂ ಡೇಟ್ ನೈಟ್ ಹೋಗುತ್ತೇವೆ. ಆ ಸಮಯದಲ್ಲಿ ಮಾತನಾಡಿ ಎಲ್ಲಾ ಬಗೆಹರಿಸಿಕೊಳ್ಳುತ್ತೇವೆ. ಬಳಿಕ ಮತ್ತೆ ಜೀವನ ಹೀಗೆ ಮುಂದುವರೆಯುತ್ತದೆ. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಬೇಕು. ಆಗ ಸಮಸ್ಯೆ ಇರುವುದಿಲ್ಲ. " ಎಂದಿದ್ದಾರೆ.

ಸ್ನೇಹಾ ತಮ್‌ ಲವ್‌ ಬ್ರೇಕಪ್‌ ಬಗ್ಗೆ ಮಾತನಾಡುತ್ತಾ, "ಪ್ರಸನ್ನ ಕೈ ಹಿಡಿಯುವ ಮುನ್ನ ನನಗೆ ಒಂದು ಲವ್ ಬ್ರೇಕಪ್ ಆಗಿತ್ತು. ಆ ಸಮಯದಲ್ಲಿ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದೆ. ಒಂದರ್ಥದಲ್ಲಿ ಖಿನ್ನತೆಗೆ ಒಳಗಾಗಿದ್ದೆ. ಆ ಇಡೀ ವರ್ಷ ನನಗೆ ಬಹಳ ಕೆಟ್ಟದಾಗಿತ್ತು. ಹೊರಗೆ ಸಾಕಷ್ಟು ಜನ ಏನೇನೋ ಮಾತನಾಡುತ್ತಿದ್ದರು. ಈ ಬಗ್ಗೆ ಪೋಷಕರು ನನ್ನ ಜೊತೆ ಚರ್ಚಿಸುತ್ತಿದ್ದರು. ಅದರ ನಡುವೆ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಅಚ್ಚರಿ ಅಂದ್ರೆ ಅದೇ ವರ್ಷ ನನ್ನ ನಟನೆಗೆ ರಾಜ್ಯಪ್ರಶಸ್ತಿ ಸಿಕ್ಕಿತ್ತು. ಆ ವರ್ಷವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ" ಎಂದು ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News