Sonu Sood : ವ್ಯಕ್ತಿಗೆ ಸಿಪಿಆರ್ ಕೊಟ್ಟು ಜೀವ ಉಳಿಸಿದ ಸೋನು ಸೂದ್

Sonu Sood saved life : ಕೆಲವು ಜನರು ಸಂಕಷ್ಟದಲ್ಲಿರುವವರ ಪಾಲಿಗೆ ದೇವರಾಗುತ್ತಾರೆ. ತಮ್ಮ ಹಮ್ಮು, ಬಿಮ್ಮು ಬಿಟ್ಟು ಸಹಾಯಕ್ಕೆ ನಿಲ್ಲುತ್ತಾರೆ. ಎಷ್ಟೇ ದೊಡ್ಡಮಟ್ಟದಲ್ಲಿದ್ದರು, ಅವರ ಸರಳತೆ ಎಲ್ಲರಿಗೂ ಮಾದರಿಯಾಗಿರುತ್ತದೆ. ಅಂತಹ ವ್ಯಕ್ತಿಗಳಲ್ಲಿ ಬಾಲಿವುಡ್‌ ನಟ ಸೋನು ಸೂದ್ ಸಹ ಒಬ್ಬರು. ತಮ್ಮ ವ್ಯಕ್ತಿತ್ವದಿಂದಲೇ ಸೋನು ಸೂದ್ ಶ್ರೀಮಂತರಾಗಿದ್ದಾರೆ. ಅವರು ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ್ದಾರೆ. 

Written by - Chetana Devarmani | Last Updated : Jan 19, 2023, 07:40 AM IST
  • ನಟ ಸೋನು ಸೂದ್ ಅವರ ಔದಾರ್ಯವನ್ನು ಎಲ್ಲರೂ ಹೊಗಳುತ್ತಾರೆ
  • ಈ ರಿಯಲ್ ಲೈಫ್ ಹೀರೋ ಮತ್ತೊಮ್ಮೆ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ್ದಾರೆ
  • ವಿಮಾನ ನಿಲ್ದಾಣದಲ್ಲಿ ಸಿಪಿಆರ್ ಕೊಟ್ಟು ಜೀವ ಉಳಿಸಿದ ಸೋನು ಸೂದ್
Sonu Sood : ವ್ಯಕ್ತಿಗೆ ಸಿಪಿಆರ್ ಕೊಟ್ಟು ಜೀವ ಉಳಿಸಿದ ಸೋನು ಸೂದ್  title=
ಸೋನು ಸೂದ್

Sonu Sood Video : ನಟ ಸೋನು ಸೂದ್ ಅವರ ಔದಾರ್ಯವನ್ನು ಎಲ್ಲರೂ ಹೊಗಳುತ್ತಾರೆ. ಈ ರಿಯಲ್ ಲೈಫ್ ಹೀರೋ ಮತ್ತೊಮ್ಮೆ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ್ದಾರೆ. ಕೊರೊನಾ ಕರಾಳ ಸಮಯದಲ್ಲಿ ಸೋನು ಸೂದ್ ಅನೇಕ ಜನರಿಗೆ ಸಹಾಯ ಮಾಡಿದರು. ಆ ಟ್ರೆಂಡ್ ಈಗಲೂ ಮುಂದುವರಿದಿದೆ. ಇದೀಗ ಸೋನು ಸೂದ್ ಒಬ್ಬ ವ್ಯಕ್ತಿಯ ಜೀವ ಉಳಿಸಿದ್ದು, ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಆಗಿದ್ದಾರೆ.

ಮಾಧ್ಯಮಗಳ ವರದಿ ಪ್ರಕಾರ, ಸೋನು ಸೂದ್ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ವಾಸ್ತವವಾಗಿ ಸೋನು ಸೂದ್ ದುಬೈನಿಂದ ಹಿಂದಿರುಗುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಮೂರ್ಛೆ ಹೋದನು. ಆ ವ್ಯಕ್ತಿ ಪ್ರಜ್ಞಾಹೀನನಾಗಿ ಬಿದ್ದ ತಕ್ಷಣ, ಸುತ್ತಲೂ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೇ ಸೋನು ಸೂದ್ ಹತ್ತಿರದ ಇಮಿಗ್ರೇಷನ್ ಕೌಂಟರ್‌ನಲ್ಲಿ ನಿಂತಿದ್ದರು.

ಇದನ್ನೂ ಓದಿ : Rashmika Mandanna : ನನಗೆ ಸಿನಿಮಾ ಇಂಡಸ್ಟ್ರಿಗೆ ದಾರಿ ತೋರಿಸಿದ್ದೇ ರಕ್ಷಿತ್, ರಿಷಬ್..!

ಶಬ್ದ ಕೇಳಿದ ತಕ್ಷಣ ಸೋನು ಸೂದ್ ಅಲ್ಲಿಗೆ ಬಂದಿದ್ದಾರೆ. ಮೊದಲು ಆ ವ್ಯಕ್ತಿಗೆ ಸಿಪಿಆರ್ ಕೊಡಲು ಆರಂಭಿಸಿದ್ದಾರೆ. ಸ್ವಲ್ಪ ಸಮಯದವರೆಗೆ ಸಿಪಿಆರ್ ನೀಡಿದ ನಂತರ, ವ್ಯಕ್ತಿಗೆ ಪ್ರಜ್ಞೆ ಮರಳಿದೆ. ಸೋನು ಸೂದ್ ಅವರ ಈ ಸಾಹಸ ನೋಡಿ ಎಲ್ಲರ ಮುಖದಲ್ಲೂ ನಗು ಮೂಡಿತ್ತು. ವ್ಯಕ್ತಿ ಸೋನು ಸೂದ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ಸೋನು ಸೂದ್ ನಿಜ ಜೀವನದ ಹೀರೋ ಎಂದು ಅನೇಕರು ಬಣ್ಣಿಸುತ್ತಾರೆ. ಕೆಲವು ಬಾರಿ ಅನೇಕರಿಗೆ ಚಿಕಿತ್ಸೆಗಾಗಿ ವಿಮಾನ ಟಿಕೆಟ್‌ಗಳನ್ನು ಕಳುಹಿಸುತ್ತಾರೆ. ಕೆಲವೊಮ್ಮೆ ಅಧ್ಯಯನದ ವೆಚ್ಚವನ್ನು ಭರಿಸುತ್ತಾರೆ. ಜನರಿಗೆ ಉದ್ಯೋಗಾವಕಾಶಗಳನ್ನೂ ಒದಗಿಸಿ, ಜೀವನದ ದಾರಿ ತೋರಿಸುತ್ತಾರೆ. ಅವರ ಸೋನು ಸೂದ್ ಚಾರಿಟಿ ಫೌಂಡೇಶನ್ ಇದುವರೆಗೆ ಲಕ್ಷಾಂತರ ಜನರಿಗೆ ಸಹಾಯ ಮಾಡಿದೆ. 

ಇದನ್ನೂ ಓದಿ : ಸಿದ್ಧಾರ್ಥ್‌ ʼಮಿಷನ್ ಮಜ್ನುʼ ನೋಡಿ ʼಸೂಪರ್ಬ್... ಸೂಪರ್ಬ್ʼ ಎಂದ ಕಿರಾಯಾ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News