ಚಿತ್ರರಂಗವನ್ನೇ ಆಳಿದ ಸೂಪರ್‌ ಸ್ಟಾರ್... ಒಂದೇ ಒಂದು ನಿರ್ಧಾರದಿಂದ ಕರಿಯರ್‌ ನಾಶಮಾಡಕೊಂಡ ಖ್ಯಾತ ನಟಿ ಈಕೆ!!

South Actress Life Story: ಮೂರನೇ ವಯಸ್ಸಿನಲ್ಲಿ ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ಇವರು 90ರ ದಶಕದಲ್ಲಿ ಸ್ಟಾರ್ ಹೀರೋಯಿನ್ ಆಗಿ ಮೆರೆದರು. ಆದರೆ ಒಂದೇ ಒಂದು ನಿರ್ಧಾರದಿಂದ ಕರಿಯರ್‌ ನಾಶಮಾಡಕೊಂಡರು.. ಹಾಗಾದ್ರೆ ಯಾರು ಆ ನಟಿ?.

Written by - Savita M B | Last Updated : Mar 20, 2024, 09:20 AM IST
  • ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ಸ್ಟಾರ್ ಸ್ಥಾನಮಾನ ಪಡೆದ ನಟಿಯರ ಸಂಖ್ಯೆ ತೀರಾ ಕಡಿಮೆ.
  • ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಕೂಡ ಇದೇ ವರ್ಗಕ್ಕೆ ಸೇರಿದವರು.
  • ನಟಿ ಊರ್ಮಿಳಾ ಕೆಲ ವರ್ಷಗಳ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟರು
ಚಿತ್ರರಂಗವನ್ನೇ ಆಳಿದ ಸೂಪರ್‌ ಸ್ಟಾರ್... ಒಂದೇ ಒಂದು ನಿರ್ಧಾರದಿಂದ ಕರಿಯರ್‌ ನಾಶಮಾಡಕೊಂಡ ಖ್ಯಾತ ನಟಿ ಈಕೆ!! title=

Bollywood Actress Urmila Matondkar Life Story: ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ಸ್ಟಾರ್ ಸ್ಥಾನಮಾನ ಪಡೆದ ನಟಿಯರ ಸಂಖ್ಯೆ ತೀರಾ ಕಡಿಮೆ. ಬಾಲಿವುಡ್ ನಲ್ಲಿ ರಿಷಿ ಕಪೂರ್, ನೀತೂ ಸಿಂಗ್, ಕಾಲಿವುಡ್ ನಲ್ಲಿ ಕಮಲ್ ಹಾಸನ್, ಅಂದಿನ ಕಾಲದ ನಾಯಕಿ ಶ್ರೀದೇವಿ ಬಾಲನಟಿ-ನಟಯರಾಗಿ ಮಿಂಚಿ.. ದೊಡ್ಡವರಾದ ಮೇಲೆ ಸ್ಟಾರ್ ಹೀರೋ, ಹೀರೋಯಿನ್ ಗಳಾದರು.

ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಕೂಡ ಇದೇ ವರ್ಗಕ್ಕೆ ಸೇರಿದವರು. ಮೂರನೇ ವಯಸ್ಸಿನಲ್ಲಿ ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ಇವರು 90ರ ದಶಕದಲ್ಲಿ ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದರು. ಆದರೆ ನಂತರ ಅವಕಾಶಗಳು ಕೈಕೊಟ್ಟವು.  

ಇದನ್ನೂ ಓದಿ-Rakul Preet Singh : ಕಪ್ಪು ಉಡುಗೆಯಲ್ಲಿ ಮಿರರ್ ಮುಂದೆ ನವ ವಧುವಿನ ಫೋಟೋಸ್ : ಇಲ್ಲಿದೆ ನೋಡಿ

ಮುಂಬೈ ಮೂಲದ ಊರ್ಮಿಳಾ 1977ರಲ್ಲಿ ತೆರೆಕಂಡ ‘ಕರ್ಮ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಆಗ ಆಕೆಗೆ ಮೂರು ವರ್ಷ. ಆ ನಂತರ 1983ರಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾ ‘ಮಾಸೂಂ’ನಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡರು. ಈ ಚಿತ್ರದಲ್ಲಿ ನಾಸಿರುದ್ದೀನ್ ಶಾ ಮತ್ತು ಶಬಾನಾ ಅಜ್ಮಿ ನಟಿಸಿದ್ದಾರೆ. 1991ರಲ್ಲಿ ತೆರೆಕಂಡ ‘ನರಸಿಂಹ’ ಚಿತ್ರದಲ್ಲಿ ಊರ್ಮಿಳಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆ ನಂತರ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡರು.

1995 ರ ಬಾಲಿವುಡ್ ಚಲನಚಿತ್ರ 'ರಂಗೀಲಾ'ದಲ್ಲಿ 20 ನೇ ವಯಸ್ಸಿಗೆ ಊರ್ಮಿಳಾ ನಾಯಕಿಯಾಗಿ ಉತ್ತಮ ಮನ್ನಣೆ ಪಡೆದರು. ಈ ಚಿತ್ರದಲ್ಲಿ ತನ್ನ ನಟನೆ, ಸ್ಕ್ರೀನ್ ಪ್ರೆಸೆನ್ಸ್ ಮತ್ತು ಡ್ಯಾನ್ಸ್‌ನಿಂದ ರಾತ್ರೋರಾತ್ರಿ ಸೆಕ್ಸಿಯೆಸ್ಟ್ ಹೀರೋಯಿನ್ ಆಗಿ ಜನಪ್ರಿಯತೆ ಗಳಿಸಿದಳು.  

ನಂತರ ಅವರು ಬಾಲಿವುಡ್ ಇಂಡಸ್ಟ್ರಿಯ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ರಂಗೀಲಾ ನಂತರ ಜುದಾಯಿ, ಸತ್ಯ ಮತ್ತು ಖೂಬ್‌ಸೂರತ್‌ನಂತಹ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದರು. ಇದರ ಫಲವಾಗಿ ಊರ್ಮಿಳಾ ಹಲವಾರು ವರ್ಷಗಳ ಕಾಲ ಬಾಲಿವುಡ್ ಸ್ಟಾರ್ ಹೀರೋಯಿನ್ ಆಗಿ ಮುಂದುವರೆದರು.

ಇದನ್ನೂ ಓದಿ-Martin: ಚಿತ್ರೀಕರಣದಲ್ಲೂ ಹೊಸ ದಾಖಲೆ ಬರೆದ ಕನ್ನಡದ 'ಮಾರ್ಟಿನ್' ಸಿನಿಮಾ

ಆ ನಂತರ ಇವರಿಗೆ ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಅವಕಾಶಗಳು ಬಂದವು. ಅಲ್ಲಿಯೂ ಉತ್ತಮ ಮನ್ನಣೆ ಗಳಿಸಿದ ಊರ್ಮಿಳಾ ಅವರ ಚಿತ್ರಗಳು ಕೆಲ ಸಮಯದ ಗಲ್ಲಾಪೆಟ್ಟಿಗೆಯಲ್ಲಿ ಸೋಲಲಾರಂಭಿಸಿದವು.. ಇದಾದ ನಂತರ ಟಿವಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ಆಗಿ ಕಾರ್ಯ ನಿರ್ವಹಿಸಿದರು.. ಇನ್ನು ನಟಿ ಊರ್ಮಿಳಾ ಕಾಶ್ಮೀರಿ ಉದ್ಯಮಿ ಮತ್ತು ಮಾಡೆಲ್ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು 2016 ರಲ್ಲಿ ವಿವಾಹವಾದರು.

ನಟಿ ಊರ್ಮಿಳಾ ಕೆಲ ವರ್ಷಗಳ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. ಆರಂಭದಲ್ಲಿ ಕಾಂಗ್ರೆಸ್ ಸೇರಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋಲುಂಡು... ನಂತರ ಅವರು ಕಾಂಗ್ರೆಸ್ ತೊರೆದು ಶಿವಸೇನೆ ಸೇರಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News