ಈ ನಾಟ್ಯಮಯೂರಿ ಯಾರೆಂದು ಗುರುತಿಸಬಲ್ಲಿರಾ? ಸೌತ್ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್.. 53ರಲ್ಲೂ ಇನ್ನೂ ಗ್ಲಾಮರ್ ಕ್ವೀನ್!

South Actress Childhood Photo: ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸದ್ದು ಮಾಡುತ್ತಿವೆ.. ಅದರಂತೆ ಇತ್ತೀಚೆಗೆ ಹಿರಿಯ ನಟಿಯ ಬಾಲ್ಯದ ಫೋಟೋ ಸೋಷಯಲ್‌ ಮಿಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.. ಹಾಗಾದ್ರೆ ಈ ಪೋಟೋದಲ್ಲಿರುವ ನಾಟ್ಯಮಯೂರಿ ಯಾರೆಂದು ನೀವು ಗುರುತಿಸಬಲ್ಲಿರಾ?..

Written by - Savita M B | Last Updated : Aug 8, 2024, 07:36 PM IST
  • ಪ್ರಸ್ತುತ, ನಟ-ನಟಿಯರ ಥ್ರೋಬ್ಯಾಕ್ ಫೋಟೋಗಳು ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಟ್ರೆಂಡ್ ಆಗಿವೆ
  • ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಈ ನಾಟ್ಯಮಯೂರಿ ಯಾರೆಂದು ಗುರುತಿಸಬಲ್ಲಿರಾ? ಸೌತ್ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್.. 53ರಲ್ಲೂ ಇನ್ನೂ ಗ್ಲಾಮರ್ ಕ್ವೀನ್!  title=

South Actress Ramya Krishnan: ಪ್ರಸ್ತುತ, ನಟ-ನಟಿಯರ ಥ್ರೋಬ್ಯಾಕ್ ಫೋಟೋಗಳು ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಟ್ರೆಂಡ್ ಆಗಿವೆ. ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ. ಹಾಗಾದ್ರೆ ಮೇಲಿನ ಫೋಟೋದಲ್ಲಿರುವ ನಾಟ್ಯ ಮಯೂರಿ ನಿಮಗೆ ನೆನಪಿದ್ದಾರೆಯೇ? 

ಅವರು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ನಟ ರವಿಚಂದ್ರನ್‌, ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಬಾಲಕೃಷ್ಣ, ಮೋಹನ್ ಲಾಲ್ ಮುಂತಾದ ಸ್ಟಾರ್ ಹೀರೋಗಳ ಎದುರು ನಟಿಸಿದ್ದಾರೆ. ಪ್ರಭಾಸ್ ಮತ್ತು ಎನ್‌ಟಿಆರ್‌ನಂತಹ ಸ್ಟಾರ್‌ಗಳ ಸಿನಿಮಾಗಳಲ್ಲಿ ಸ್ಪೇಷಲ್‌ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.. ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 

ಇದನ್ನೂ ಓದಿ-ತಿನ್ನಲು ಅನ್ನವಿಲ್ಲದೆ ದಿನಕ್ಕೆ 1 ಮೊಟ್ಟೆ ತಿಂದು ಬದುಕುತ್ತಿದ್ದ ಈ ನಟಿ ಇಂದು 2 ನಿಮಿಷದ ಹಾಡಿಗೆ ಸೊಂಟ ಬಳುಕಿಸಿದ್ರೆ 3 ಕೋಟಿ ಸಂಭಾವನೆ ಪಡೀತಾರೆ!

ಹಿರಿಯ ನಾಯಕಿ ಬೇರಾರೂ ಅಲ್ಲ ರಮ್ಯಾ ಕೃಷ್ಣನ್..‌ ಬಾಹುಬಲಿ ಚಿತ್ರದಲ್ಲಿ ಶಿವಗಾಮಿಯಾಗಿ ಗಮನ ಸೆಳೆದ ದಕ್ಷಿಣ ಭಾರತದ ನಟಿ ತಮ್ಮ 13 ನೇ ವಯಸ್ಸಿನಲ್ಲಿ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ವೆಲ್ಲೈ ಮನಸು ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. 

ಇದನ್ನೂ ಓದಿ-ಕಾಮನ್‌ ಸೆನ್ಸ್‌ ಇಲ್ಲದಿರೋ ದರ್ಶನ್‌ಗೆ ದುಡ್ಡಿನ ಧಿಮಾಕಿನಿಂದ ಈ ಸ್ಥಿತಿ ಬಂದಿದೆ: ಮುಖ್ಯಮಂತ್ರಿ ಚಂದ್ರು

1990 ರಿಂದ 2000 ರವರೆಗೆ.. ಈ ಹತ್ತು ವರ್ಷಗಳ ಗ್ಯಾಪ್‌ನಲ್ಲಿ ಅವರು ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು ಅವರ ಅತ್ಯುತ್ತಮ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ರಾಜಮೌಳಿ ಅವರ ಬಾಹುಬಲಿ ಚಿತ್ರವು ಶಿವಗಾಮಿ ಪಾತ್ರದಿಂದ ಯಾರೂ ನಿರೀಕ್ಷಿಸದ ರೀತಿಯಲ್ಲಿ ರಮ್ಯಾ ಅವರು ಪ್ರಸಿದ್ಧಿ ಪಡೆದರು.. 

12 ಜೂನ್ 2003 ರಂದು ರಮ್ಯಾ ಕೃಷ್ಣ ತೆಲುಗು ನಿರ್ದೇಶಕ ಕೃಷ್ಣ ವಂಶಿ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗನಿದ್ದಾನೆ. ತಮಿಳುನಾಡಿನವರಾದ ರಮ್ಯಾ ಮದುವೆಯ ನಂತರ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ನಟಿ ಬಾಹುಬಲಿ ಸಿನಿಮಾದಿಂದ ಅತ್ಯುತ್ತಮ ನಟಿಯಾಗಿ ನಂದಿ ಪ್ರಶಸ್ತಿ, ಫಿಲ್ಮ್‌ಫೇರ್, ಸೈಮಾ, IIFA ಪ್ರಶಸ್ತಿಗಳನ್ನು ಪಡೆದರು. ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News