ತಾನು ಸಾಯುವ ವಿಷಯ ಮೊದಲೇ ತಿಳಿದು ಬಡ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೆ ಆಸ್ತಿ ದಾನ ಮಾಡಿದ ಸ್ಟಾರ್‌ ನಟಿ ಈಕೆ!!

South Actress: ದಕ್ಷಿಣ ಭಾರತದ ಸ್ಟಾರ್ ನಟಿಯೊಬ್ಬರು ಕ್ಯಾನ್ಸರ್ ನಿಂದ ಬಳಲಿ ತಮಗೆ ಹೆಚ್ಚು ದಿನ ಬದುಕಲು ಅವಕಾಶವಿಲ್ಲ ಎಂದು ಮನಗಂಡು ಮಹತ್ವದ ನಿರ್ಧಾರ ಕೈಗೊಂಡಿದ್ದರು.. 

Written by - Savita M B | Last Updated : Jun 3, 2024, 04:59 PM IST
  • ಬೆಳ್ಳಿತೆರೆಯಲ್ಲಿ ಅವಕಾಶ ಸಿಕ್ಕರೆ ಜೀವನದಲ್ಲಿ ಧನ್ಯತೆ ಎನ್ನುವ ಮಾತಿದೆ.
  • ಬಾಲ ಕಲಾವಿದರಾಗಿ ನಟಿಸಿದ ಅನೇಕ ನಟರು ಸ್ಟಾರ್ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗುತ್ತಿರುವುದು ಗೊತ್ತೇ ಇದೆ
ತಾನು ಸಾಯುವ ವಿಷಯ ಮೊದಲೇ ತಿಳಿದು ಬಡ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೆ ಆಸ್ತಿ ದಾನ ಮಾಡಿದ ಸ್ಟಾರ್‌ ನಟಿ ಈಕೆ!! title=

 sri vidya: ಬೆಳ್ಳಿತೆರೆಯಲ್ಲಿ ಅವಕಾಶ ಸಿಕ್ಕರೆ ಜೀವನದಲ್ಲಿ ಧನ್ಯತೆ ಎನ್ನುವ ಮಾತಿದೆ. ಬಾಲ ಕಲಾವಿದರಾಗಿ ನಟಿಸಿದ ಅನೇಕ ನಟರು ಸ್ಟಾರ್ ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್ ಆಗುತ್ತಿರುವುದು ಗೊತ್ತೇ ಇದೆ. ಹೊಸಬರಿಗೆ ಇಂಡಸ್ಟ್ರಿಯಲ್ಲಿ ಅವಕಾಶಗಳು ಬರಲು ಪ್ರತಿಭೆಯೊಂದೇ ಕಾರಣವಲ್ಲ ಎನ್ನಲಾಗುತ್ತಿದೆ.

ಚಿತ್ರರಂಗದಲ್ಲಿ ಒಂದೇ ಒಂದು ಅವಕಾಶ ಸಿಕ್ಕರೆ ಸಾಕು. ಸೆಲೆಬ್ರಿಟಿ ಸ್ಟೇಟಸ್ ಬರುತ್ತದೆ ಎಂದು ಹಲವರು ಭಾವಿಸುತ್ತಾರೆ. ಚಿತ್ರರಂಗ ಎಂದರೆ ಎಲ್ಲರೂ ಅಂದುಕೊಂಡಂತೆ ಗ್ಲಾಮರ್ ಜಗತ್ತಲ್ಲ. ಕೆಲವು ನಟರ ಜೀವನವನ್ನು ಅವಲೋಕಿಸಿದರೆ ಅಂತ್ಯವಿಲ್ಲದ ಕಣ್ಣೀರಿನ ಕಥೆಗಳಿವೆ ಎಂದು ಸ್ಪಷ್ಟವಾಗುತ್ತದೆ. ನಾವು ಹೇಳುತ್ತಿರುವ ನಟಿ ಕೂಡ ತನ್ನ ಸೌಂದರ್ಯದಿಂದ ಎಲ್ಲರಿಗೂ ಅಚ್ಚುಮೆಚ್ಚು. ಸ್ಟಾರ್ ಹೀರೋಗಳು ಅವರ ಎದುರು ನಟಿಸಲು ಬಯಸಿದ್ದರು. ಆದರೆ ವಿಧಿ ಅವರನ್ನೇ ಎಲ್ಲರಿಂದ ದೂರ ಮಾಡಿತು. 

ಇದನ್ನೂ ಓದಿ-15 ವರ್ಷಕ್ಕೆ ಕನ್ಯತ್ವ ಕಳೆದುಕೊಂಡ ಈಕೆ ಇಂದು ಸ್ಟಾರ್ ಹೀರೋಯಿನ್!!   

ಆ ನಟಿ ಬೇರೆ ಯಾರೂ ಅಲ್ಲ.. ನಟಿ ಶ್ರೀವಿದ್ಯಾ.. ಜನಪ್ರಿಯ ಹಾಸ್ಯನಟ ಕೃಷ್ಣಮೂರ್ತಿ ಮತ್ತು ಕರ್ನಾಟಕ ಶಾಸ್ತ್ರೀಯ ಗಾಯಕಿ ಎಂಎಲ್ ವಸಂತ ಕುಮಾರಿ ಅವರ ಪುತ್ರಿ. ಶ್ರೀವಿದ್ಯಾ ಹುಟ್ಟಿದ ಒಂದು ವರ್ಷದ ನಂತರ, ಆಕೆಯ ತಂದೆ ಕೃಷ್ಣಮೂರ್ತಿ ಅಪಘಾತದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.. ವಸಂತಕುಮಾರಿ ಕುಟುಂಬದ ಜವಾಬ್ದಾರಿಯನ್ನು ತಾವೇ ನಿಭಾಯಿಸಬೇಕಾಯಿತು. ನಂತರ ಶ್ರೀ ವಿದ್ಯಾ ತಮ್ಮ 14 ನೇ ವಯಸ್ಸಿನಲ್ಲಿ ಆರ್ಥಿಕ ಸಂಕಷ್ಟದಿಂದ ಚಿತ್ರರಂಗಕ್ಕೆ ಕಾಲಿಟ್ಟರು. 

ಸ್ಟಾರ್ ನಟ ಶಿವಾಜಿ ಗಣೇಶನ್ ಅಭಿನಯದ 'ತಿರುವರುಚೆಲ್ವರ್' ಚಿತ್ರದ ಮೂಲಕ ಶ್ರೀ ವಿದ್ಯಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ‘ಪೆಡರಸಿ ಪೆದ್ದಮ್ಮ’ ಚಿತ್ರದ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದರು. ಸೌಂದರ್ಯ, ನಟನೆ, ನೃತ್ಯದ ಮೂಲಕ ಶ್ರೀ ವಿದ್ಯಾಗೆ ಒಳ್ಳೆಯ ಅವಕಾಶಗಳು ಬಂದವು. ಅಲ್ಲದೇ ಖ್ಯಾತ ನಿರ್ದೇಶಕ ದಾಸರಿ ನಾರಾಯಣ ರಾವ್ ಅವರ ಪ್ರೋತ್ಸಾಹದಿಂದ ಸಾಕಷ್ಟು ಅವಕಾಶಗಳು ಇವರನ್ನೇ ಹುಡುಕಿ ಬಂದವು.. 

ಆ ಸಮಯದಲ್ಲಿ ಶ್ರೀವಿದ್ಯಾ ಮತ್ತು ಕಮಲ್ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು. ಅವರ ಮದುವೆಗೆ ಹಿರಿಯರು ಒಪ್ಪದ ಕಾರಣ ಇಬ್ಬರೂ ಬೇರೆಯಾದರು. ಅದರ ನಂತರ ಶ್ರೀ ವಿದ್ಯಾ 1978 ರಲ್ಲಿ ಮಾಲಿವುಡ್ ನಿರ್ದೇಶಕ ಜಾರ್ಜ್ ಥಾಮಸ್ ಅವರನ್ನು ವಿವಾಹವಾದರು. ಮದುವೆಯ ನಂತರ ಪತಿಯ ಇಚ್ಛೆಯಂತೆ ಶ್ರೀ ವಿದ್ಯಾ ಚಿತ್ರರಂಗದಿಂದ ದೂರ ಉಳಿದಿದ್ದರು.

ಆದರೆ ಮದುವೆಯ ನಂತರ ಆರ್ಥಿಕ ಸಂಕಷ್ಟದಿಂದ ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿ ಉತ್ತಮ ಜೀವನ ನಡೆಸುವತ್ತ ಹೆಜ್ಜೆ ಹಾಕಿದರು. ಆದರೆ ಇದರ ಲಾಭವನ್ನು ಆಕೆಯ ಪತಿ ಪಡೆದುಕೊಂಡಿದ್ದರಿಂದಾಗಿ ಇಬ್ಬರ ದಾಂಪತ್ಯದಲ್ಲಿ ಕಲಹ ಉಂಟಾಗಿ 1980ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ಬೇರ್ಪಟ್ಟರು.

ಇದನ್ನೂ ಓದಿ-ನಟಿ ಪಾರ್ವತಿ ಮೆನನ್ ಮದುವೆ ಫೋಟೋಸ್‌ ವೈರಲ್.. ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೇ ಮಿಲನಾ ಚಿತ್ರದ ನಟಿ!?

ಸಿನಿಮಾದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ ನಂತರ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಆದರೆ 2003 ರಲ್ಲಿ ಅವರು ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಹೆಚ್ಚು ದಿನ ಬದುಕಲು ಅವಕಾಶವಿಲ್ಲ ಎಂದು ಮನಗಂಡು ಮಹತ್ವದ ನಿರ್ಧಾರ ಕೈಗೊಂಡರು. 

ಸಂಗೀತ, ನೃತ್ಯ ಕಾಲೇಜುಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿ ನಟ ಗಣೇಶ್ ಅವರ ಸಹಕಾರದಿಂದ ಟ್ರಸ್ಟ್ ಸ್ಥಾಪಿಸಿ ಅರ್ಹರಿಗೆ ನೆರವು ನೀಡುವ ವ್ಯವಸ್ಥೆ ಮಾಡಿದರು... ಆಗ ಸಿನಿಮಾಗಳಲ್ಲಿ ನಟಿಸಿ ಗಳಸಿದ ಕೋಟ್ಯಂತರ ರೂ. ಆಸ್ತಿ ಅನೇಕ ಜನರಿಗೆ ಸಹಾಯ ಮಾಡಿದೆ. ಮೂರು ವರ್ಷಗಳ ಕಾಲ ಕ್ಯಾನ್ಸರ್‌ನೊಂದಿಗೆ ಹೋರಾಡಿದ ನಂತರ, ಅವರು ಅಕ್ಟೋಬರ್ 19, 2006 ರಂದು 53 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News