ಪ್ರೀತಿಗಾಗಿ 27ನೇ ವಯಸ್ಸಿನಲ್ಲಿ ಮತಾಂತರಗೊಂಡ ಸ್ಟಾರ್‌ ನಟಿ..! ನಂತರ ಆಗಿದ್ದೇನು..? ಕೇಳಿದ್ರೆ ಬೆಚ್ಚಿ ಬೀಳ್ತೀರಾ...

South Actress : ಅನೇಕ ಸೂಪರ್‌ ಸ್ಟಾರ್‌ ನಟಿಯರು ಪ್ರೀತಿಯಾಗಿ ಜಾತಿ ಎನ್ನುವ ಗಡಿಯನ್ನು ದಾಟಿ ಮದುವೆಯಾಗಿ ಸಂತೋಷ ದಿಂದ ಜೀವನ ಸಾಗಿಸುತ್ತಿದ್ದಾರೆ.. ಈ ಪೈಕಿ ಇಲ್ಲೊಬ್ಬ ಸ್ಟಾರ್‌ ನಟಿಯೊಬ್ಬರು ಲವ್‌ಗಾಗಿ ಧರ್ಮಾಂತರಗೊಂಡಿದ್ದರು.. ಯಾರು ಆ ನಟಿ..? ಆಮೇಲೆ ಏನಾಯ್ತು..? ಬನ್ನಿ ನೋಡೋಣ..

Written by - Krishna N K | Last Updated : Jul 19, 2024, 06:23 PM IST
    • ಸ್ಟಾರ್‌ ನಟಿಯರು ಪ್ರೀತಿಯಾಗಿ ಜಾತಿ ಎನ್ನುವ ಗಡಿಯನ್ನು ದಾಟಿ ಮದುವೆಯಾಗುತ್ತಿದ್ದಾರೆ.
    • ಈ ಪೈಕಿ ಇಲ್ಲೊಬ್ಬ ಸ್ಟಾರ್‌ ನಟಿಯೊಬ್ಬರು ಲವ್‌ಗಾಗಿ ಧರ್ಮಾಂತರಗೊಂಡಿದ್ದರು..
    • ನಾವು ಹೇಳ ಹೊರಟಿರುವ ನಟಿಯೂ ಸಹ ಇಂಡಿಯನ್‌ ಫಿಲ್ಮಂ ಇಂಡಸ್ಟ್ರೀಯ ಸ್ಟಾರ್‌ ನಟಿ.
ಪ್ರೀತಿಗಾಗಿ 27ನೇ ವಯಸ್ಸಿನಲ್ಲಿ ಮತಾಂತರಗೊಂಡ ಸ್ಟಾರ್‌ ನಟಿ..! ನಂತರ ಆಗಿದ್ದೇನು..? ಕೇಳಿದ್ರೆ ಬೆಚ್ಚಿ ಬೀಳ್ತೀರಾ... title=
actress Nayanthara

Nayanthara cast : ಇತ್ತೀಚಿನ ವರ್ಷಗಳಲ್ಲಿ ದಕ್ಷಿಣದ ಚಲನಚಿತ್ರಗಳು ಭಾರತದಲ್ಲಿ ಸಾಕಷ್ಟು ಮನ್ನಣೆಯನ್ನು ಗಳಿಸಿವೆ, ವಿಶೇಷವಾಗಿ 'ಬಾಹುಬಲಿ' ಫ್ರಾಂಚೈಸಿಯ ಬಿಡುಗಡೆ ಮತ್ತು ಆರ್‌ಆರ್‌ಆರ್‌ ನಂತರ ಸಿನಿಮಾಗಳ ಯಶಸ್ಸಿನ ನಂತರ ವಿಶ್ವ ಸಿನಿರಂಗ ಭಾರತ ಚಿತ್ರೋದ್ಯಮದತ್ತ ಗಮನ ಹರಿಸುತ್ತಿದೆ... ಈ ಪೈಕಿ ನಾವು ಹೇಳ ಹೊರಟಿರುವ ನಟಿಯೂ ಸಹ ಇಂಡಿಯನ್‌ ಫಿಲ್ಮಂ ಇಂಡಸ್ಟ್ರೀಯ ಸ್ಟಾರ್‌ ನಟಿ...

ಹೌದು.. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಹೆಚ್ಚು ಮನ್ನಣೆ ಗಳಿಸಿರುವ ಈ ನಟಿ 'ಜವಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.. ಈಗ ಗೊತ್ತಾಯ್ತು ಅನಿಸುತ್ತೆ.. ಯಸ್‌ ಅದು ಬೇರೆ ಯಾರೂ ಅಲ್ಲ... ಲೇಡಿ ಸೂಪರ್‌ ಸ್ಟಾರ್‌ ನಟಿ ನಯನತಾರಾ.. ಜವಾನ್‌, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. 

ಇದನ್ನೂ ಓದಿ:ಕೇವಲ 21ನೇ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ಬಲಿಯಾದ ಖ್ಯಾತ ನಿರ್ಮಾಪಕ, ನಟನ ಪುತ್ರಿ.!

ಸದ್ಯ ನಯನತಾರಾ ದಕ್ಷಿಣದ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿದ್ದು, ಬಾಲಿವುಡ್‌ನಲ್ಲೂ ಅವರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಯನತಾರಾ ಕೇರಳದ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು ಎಂದು ಹಲವರಿಗೆ ತಿಳಿದಿಲ್ಲ.  ನಯನತಾರಾ 2003 ರಲ್ಲಿ ಮಲಯಾಳಂ ಚಿತ್ರ 'ಮನಸ್ಸಿನಕ್ಕರೆ' ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 

ನಯನತಾರಾ ಅವರನ್ನು 'ಲೇಡಿ ಸೂಪರ್‌ಸ್ಟಾರ್' ಎಂದು ಕರೆಯಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ನಟಿ ಈಕೆ. ಒಂದು ಚಿತ್ರಕ್ಕೆ 5-10 ಕೋಟಿ ರೂ. ಪಡೆಯುತ್ತಾರೆ ಎನ್ನಲಾಗುತ್ತದೆ.. ನಯನತಾರಾ ಶಾರುಖ್ ಖಾನ್ ಅವರ 'ಜವಾನ್' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. 

ಇದನ್ನೂ ಓದಿ:ಗಳಗಳನೇ ಅತ್ತು ʼಅವಳು ನನ್ನ ಬಿಟ್ಟು ಹೋದ್ಳುʼ ಅಂತ ಗೋಳಾಡಿದ ನರೇಶ್..! ಲವ್‌ ಬ್ರೇಕ್‌ಅಪ್‌..?

ನಯನತಾರಾ 183 ಕೋಟಿ ರೂಪಾಯಿಗಳ ಅಂದಾಜು ನಿವ್ವಳ ಮೌಲ್ಯದೊಂದಿಗೆ ದಕ್ಷಿಣ ಭಾರತದ ಶ್ರೀಮಂತ ನಟಿ ಕೂಡ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ನಸ್ರಾಣಿ ಕ್ರಿಶ್ಚಿಯನ್ ಆಗಿ ಬೆಳೆದಿದ ನಟಿ, ಆಗಸ್ಟ್ 2011 ರಲ್ಲಿ, ಚೆನ್ನೈನ ಆರ್ಯ ಸಮಾಜ ದೇವಾಲಯದಲ್ಲಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. 

ನಯನತಾರಾ ಹೆಸರು ಒಂದು ಕಾಲದಲ್ಲಿ ಪ್ರಭುದೇವ ಜೊತೆ ತಳುಕು ಹಾಕಿಕೊಂಡಿತ್ತು. ಪ್ರಭುದೇವ ಅವರನ್ನು ಮದುವೆಯಾಗಲು ನಯನತಾರಾ ಹಿಂದೂ ಧರ್ಮವನ್ನು ಸ್ವೀಕರಿಸಿದರು ಎಂದು ಹೇಳಲಾಗಿತ್ತು, ಆದರೆ ನಂತರ ಇಬ್ಬರೂ ಬೇರೆಯಾದರು. ನಂತರ 2022 ರಲ್ಲಿ ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವಮ್ ಅವರನ್ನು ವಿವಾಹವಾದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News