ಕೇವಲ 21ನೇ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ಬಲಿಯಾದ ಖ್ಯಾತ ನಿರ್ಮಾಪಕ, ನಟನ ಪುತ್ರಿ.!

Tishaa Kumar death : ಟಿ-ಸೀರೀಸ್ ಸಹ ನಿರ್ಮಾಪಕ ಕ್ರಿಶನ್ ಕುಮಾರ್ ಅವರ ಪುತ್ರಿ ದಿಶಾ ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ.. ʼಅನಿಮಲ್‌' ಸಿನಿಮಾ ಸೇರಿದಂತೆ ಹಲವು ಹಿಟ್‌ ಚಿತ್ರಗಳಿಗೆ ಕ್ರಿಶನ್‌ ಸಹ-ನಿರ್ಮಾಪಕರಾಗಿದ್ದರು, ನಟರಾಗಿಯೂ ಸಹ ಗುರುತಿಸಿಕೊಂಡಿದ್ದರು. ಸಧ್ಯ ಅವರ ಪುತ್ರಿ ಕ್ಯಾನ್ಸರ್ ನಿಂದ 21 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ...

Written by - Krishna N K | Last Updated : Jul 19, 2024, 05:09 PM IST
    • ಟಿ-ಸೀರೀಸ್ ಸಹ ನಿರ್ಮಾಪಕ ಕ್ರಿಶನ್ ಕುಮಾರ್
    • ಕ್ರಿಶನ್ ಕುಮಾರ್ ಅವರ ಪುತ್ರಿ ದಿಶಾ ಕ್ಯಾನ್ಸರ್‌ಗೆ ಬಲಿ
    • ಕ್ಯಾನ್ಸರ್ ನಿಂದ 21 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ...
ಕೇವಲ 21ನೇ ವಯಸ್ಸಿನಲ್ಲಿ ಕ್ಯಾನ್ಸರ್‌ಗೆ ಬಲಿಯಾದ ಖ್ಯಾತ ನಿರ್ಮಾಪಕ, ನಟನ ಪುತ್ರಿ.! title=
Tishaa kumar

T Series owner daughter death : ನಿರ್ಮಾಪಕ ಮತ್ತು ನಟ ಕ್ರಿಶನ್ ಕುಮಾರ್ ಅವರು ಪ್ರಮುಖ ನಿರ್ಮಾಣ ಕಂಪನಿ ಟಿ-ಸಿರೀಸ್ ಅಡಿಯಲ್ಲಿ ಅನೇಕ ಬಾಲಿವುಡ್ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಅನಿಮಲ್, ಶ್ರೀಕಾಂತ್, ಪೋರ್, ಆದಿಪುರುಷ, ಸರ್ಕಸ್, ದೃಶ್ಯಂ 2 ಸೇರಿದಂತೆ 70 ಕ್ಕೂ ಹೆಚ್ಚು ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದಾರೆ.

ಕುಶಾಲ್ ಕುಮಾರ್ T Series ಕಂಪನಿಯನ್ನು ಸ್ಥಾಪಿಸಿದರು. ನಂತರ ಅವರ ಕುಟುಂಬ ಸದಸ್ಯರಾದ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಈ ಕಂಪನಿಯ ಮುಖ್ಯ ಭಾಗವಾಗಿದ್ದಾರೆ. ಟಿ-ಸೀರೀಸ್ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಅನೇಕ ಆಲ್ಬಮ್ ಹಾಡುಗಳು ಮತ್ತು ಚಲನಚಿತ್ರ ಹಾಡುಗಳು, ಟ್ರೇಲರ್‌ಗಳು ಇತ್ಯಾದಿಗಳ ಹಕ್ಕುಗಳನ್ನು ಪಡೆದು ಬಿಡುಗಡೆ ಮಾಡಿದೆ.

ಇದನ್ನೂ ಓದಿ:ನಟಿ, ಆಂಕರ್ ಅನುಶ್ರೀ ಲವ್ ಮಾಡ್ತಿದ್ದಾರಂತೆ ನಟ ಜಗ್ಗೇಶ್ ಸಹೋದರ!

ಈ ಜನಪ್ರಿಯ ಕಂಪನಿಯ ಸಹ-ಮಾಲೀಕ ಕ್ರಿಶನ್ ಕುಮಾರ್ ಅವರ ಪುತ್ರಿ ದಿಶಾ ಕುಮಾರ್ ಕಳೆದ ಕೆಲವು ವರ್ಷಗಳಿಂದ ಗಂಭೀರ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಜರ್ಮನಿಯಲ್ಲಿ ದಿಶಾ ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. 

ದಿಶಾ ಕೊನೆಯ ಬಾರಿಗೆ ಅನಿಮಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಯಾವುದೇ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ. ದಿಶಾ ಕುಮಾರ್ ಅವರು 21ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಇದು ಬಾಲಿವುಡ್ ವಲಯವನ್ನು ಬೆಚ್ಚಿಬೀಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News