SSE Side-B : ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ : ಇಂದು ಸಂಜೆ 7.30ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ

Sapta Sagardaache Ello Side-B : ಹೇಮಂತ್ ಎಂ.ರಾವ್ ನಿರ್ದೇಶನದ  ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ ಇಂದು ಸಂಜೆ 7.30ಕ್ಕೆ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 

Written by - Zee Kannada News Desk | Last Updated : Mar 24, 2024, 05:06 PM IST
  • ಇಂದು ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
  • ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ ಚಿತ್ರ ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ ಸಿನಿಮಾದ ಮುಂದುವರಿದ ಭಾಗವಾಗಿದೆ.
  • ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುವ ಕುರಿತು ಜೀ ಕನ್ನಡ ವಾಹಿನಿಯು ತನ್ನ ಇನ್ಸ್ಟಾಗ್ರಾ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ
SSE Side-B : ಸಪ್ತ ಸಾಗರದಾಚೆ ಎಲ್ಲೋ ಸೈಡ್-ಬಿ : ಇಂದು ಸಂಜೆ 7.30ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ  title=

SSE Side-B :  ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ ಚಿತ್ರ ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ ಸಿನಿಮಾದ ಮುಂದುವರಿದ ಭಾಗವಾಗಿದೆ. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರ ಜೆ.ಆಚಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದರೆ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಮತ್ತು ಸುನಿಲ್ ಎಸ್ ಭಾರದ್ವಾಜ್ ಮತ್ತು ಹೇಮಂತ್ ಎಂ ರಾವ್ ಸಂಕಲನವನ್ನು ನಿರ್ವಹಿಸಿದ್ದಾರೆ.

2021 ರಲ್ಲಿ, ಸೈಡ್ A ನ ಘಟನೆಗಳಿಂದ 10 ವರ್ಷಗಳ ನಂತರ ಮತ್ತು COVID-19 ಸಾಂಕ್ರಾಮಿಕ ಸಮಯದಲ್ಲಿ , ಮನು ಜೈಲಿನಿಂದ ಹೊರಬಂದು ಪ್ರಿಯಾಳನ್ನು ಹುಡುಕುತ್ತಿದ್ದಾನೆ. ಅದೇ ಕಥೆಯ  ಸುರಳಿಯನ್ನು ಬಿಡಿಸಿಕೊಳ್ಳುತ್ತಾ ಕಥೆಯು ವಿಭನ್ನ ರೀತಿಯಲ್ಲಿ ವೀಕ್ಷಕರನ್ನು ತನ್ನೆಡೆಗೆ ಸೆಳೆಯಲಿದೆ.

ಇದನ್ನು ಓದಿ : ಫ್ಲಿಪ್‌ಕಾರ್ಟ್‌ನಲ್ಲಿ ದೊಡ್ಡ ರಿಯಾಯಿತಿಯೊಂದಿಗೆ ಐಫೋನ್ 14 ಪ್ಲಸ್ ಲಭ್ಯ : ಎಷ್ಟಿದೆ ಬೆಲೆ ತಿಳಿದುಕೊಳ್ಳಿ

ಸೈಡ್ ಎ ಸಂಗೀತ ಪ್ರಿಯರನ್ನು ಸೆಳೆದ ಹಾಗೆ ಸೈಡ್ ಬಿ ಚಿತ್ರವು ಆ ಒಂದು ವಿಷಯದಲ್ಲಿ ಮತ್ತೆ ಜನರ ಮನವನ್ನು ಗೆದ್ದಿದೆ ಹಾಗೂ ಮತ್ತೆ ಕಿರುತೆರೆಯಲ್ಲಿ ಪ್ರಸಾರವಾಗುವ ಮೂಲಕ ಮತ್ತೆ ಗೆಲ್ಲಲಿದೆ. 

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ ಸೆಪ್ಟೆಂಬರ್ 01 ರಂದು ಥಿಯೇಟರ್ ಗಳಲ್ಲಿ ಬಿಡುಗಡೆಗೊಂಡಿತ್ತು ಅದಾದ ನಂತರ ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಬಿ) , ಮೂಲತಃ ಅಕ್ಟೋಬರ್ 20 2023 ರಂದು ಬಿಡುಗಡೆಗೆ ಸಿದ್ಧವಾಗಿತ್ತು ಆದರೆ ಅದನ್ನು ಮರು ನಿಗದಿಪಡಿಸಲಾಯಿತು. ಚಲನಚಿತ್ರವು 17 ನವೆಂಬರ್ 2023 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಯಿತು. 

ಈ ಚಲನಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ 25 ಜನವರಿ 2024 ರಂದು ಕನ್ನಡದಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಡಬ್ ಆವೃತ್ತಿಗಳೊಂದಿಗೆ ಪ್ರಥಮ ಪ್ರದರ್ಶನಗೊಂಡಿತು .

ಇದನ್ನು ಓದಿ : UPSCಯಿಂದ ಖಾಲಿ ಇರುವ 147 ಹುದ್ದೆಗಳಿಗೆ ಅರ್ಜಿ ಆಹ್ವಾನ 

ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುವ ಕುರಿತು ಜೀ ಕನ್ನಡ ವಾಹಿನಿಯು ತನ್ನ ಇನ್ಸ್ಟಾಗ್ರಾ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ ಮತ್ತು ಸಿನಿಮಾದ ಪ್ರೊಮೋ ಒಂದನ್ನು ಹಂಚಿಕೊಂಡಿತ್ತು. 

ಇದೀಗ ಸಿನಿಮಾ ಇಂದು ಸಂಜೆ 7.30ಕ್ಕೆ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News