ತಂದೆಯ ಸಾಧನೆ ಬಗ್ಗೆ ಕೇಳಿದ ಸಣ್ಣ ಪ್ರಶ್ನೆಗೆ ಉತ್ತರಿಸದ ಸುಹಾನಾ ಖಾನ್‌..! ಬಿಗ್‌ ಬಿ ಶಾಕ್‌

Suhana Khan : ಬಾಲಿವುಡ್ ಕಿಂಗ್ ಶಾರುಖ್ ಖಾನ್ ಪುತ್ರಿಯಾಗಿ ಆಗಾಗ ಟ್ರೋಲ್‌ಗೆ ಬಲಿಯಾಗುತ್ತಿರುತ್ತಾರೆ. ಸುಹಾನಾ ಕಿಂಗ್‌ ಖಾನ್‌ ಮಗಳಾಗಿದ್ದಕ್ಕೆ ನಿಜವಾಗ್ಲೂ ಹೆಮ್ಮೆ ಪಡೆಬೇಕು. ಅವರ ಸಾಧನೆಗಳ ಬಗ್ಗೆ ತಿಳಿದಿರಬೇಕು. ಆದರೆ ಬಾದ್‌ ಶಾ ಬಗ್ಗೆ ಸ್ವತಃ ಅವರ ಪುತ್ರಿಗೆ ಹೆಚ್ಚಾಗಿ ತಿಳಿದಿಲ್ಲ ಅಂತ ಟ್ರೋಲ್ ಮಾಡಲಾಗುತ್ತಿದೆ.

Written by - Krishna N K | Last Updated : Dec 16, 2023, 02:35 PM IST
  • ಶಾರುಖ್ ಖಾನ್ ಪುತ್ರಿಯಾಗಿ ಆಗಾಗ ಟ್ರೋಲ್‌ಗೆ ಬಲಿಯಾಗುತ್ತಿರುತ್ತಾರೆ.
  • ಎಸ್‌ಆರ್‌ಕೆ ಉತ್ತರಾಧಿಕಾರಿಯಾಗಿ ಸುಹಾನಾ ಖಾನ್ ಸಿನಿ ಉದ್ಯಮಕ್ಕೆ ಪ್ರವೇಶಿಸಿದ್ದಾರೆ.
  • ತಂದೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸದೇ ಮತ್ತೆ ಟ್ರೋಲ್‌ಗೆ ಗುರಿಯಾಗಿದ್ದಾರೆ.
ತಂದೆಯ ಸಾಧನೆ ಬಗ್ಗೆ ಕೇಳಿದ ಸಣ್ಣ ಪ್ರಶ್ನೆಗೆ ಉತ್ತರಿಸದ ಸುಹಾನಾ ಖಾನ್‌..! ಬಿಗ್‌ ಬಿ ಶಾಕ್‌ title=

Sunahan in kaun banega crorepati : ಶಾರುಖ್‌ ಖಾನ್‌ ಅವರನ್ನು ಬಾಲಿವುಡ್‌ ಕಿಂಗ್‌ ಅಂತ ಕರೆಯಲಾಗುತ್ತದೆ. ಇದೀಗ ಅವರ ಉತ್ತರಾಧಿಕಾರಿಯಾಗಿ ಸುಹಾನಾ ಖಾನ್ ಸಿನಿ ಉದ್ಯಮಕ್ಕೆ ಪ್ರವೇಶಿಸಿದ್ದಾರೆ. ನೆಟ್‌ಫ್ಲಿಕ್ಸ್‌ನ 'ದಿ ಆರ್ಕಿಸ್' ಸಿರೀಸ್‌ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ತನ್ನ ಅಭಿನಯದಿಂದ ಟ್ರೋಲಿಂಗ್ ಎದುರಿಸುತ್ತಿರುವ ಸುಹಾನಾ ತನ್ನ ತಂದೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸದೇ ಮತ್ತೆ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ 'ದಿ ಆರ್ಚೀಸ್' ಚಿತ್ರ ಬಿಡುಗಡೆಯಾಗಿದೆ. ಈ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ 'ಕೌನ್ ಬನೇಗಾ ಕರೋಡ್‌ ಪತಿ' ಕಾರ್ಯಕ್ರಮಕ್ಕೆ ಬಂದಿತ್ತು. ಸುಹಾನಾ ಖಾನ್, ವೇದಾಂಗ್ ರೈನಾ ಮತ್ತು ನಿರ್ದೇಶಕ ಜೋಯಾ ಅಖ್ತರ್ ಕೂಡ ಭಾಗವಹಿಸಿದ್ದರು. 

ಇದನ್ನೂ ಓದಿ:ಸಲ್ಮಾನ್‌ ಖಾನ್‌ ಜೊತೆ ಐಶ್ವರ್ಯ ರೈ ಕ್ಲೋಸ್‌ ಆಗಿದ್ದೇ ಅಭಿಷೇಕ್‌ ಹಾರ್ಟ್‌ ಬ್ರೇಕ್‌ ಮಾಡ್ತಾ? ವಿಚ್ಛೇದನಕ್ಕೆ ಕಾರಣ ಇದೇನಾ!?

ಈ ಮೂವರು ಅಮಿತಾಬ್ ಬಚ್ಚನ್ ಅವರ ಪ್ರಶ್ನೆಗಳಿಗೆ ಉತ್ತರಿಸಲು ಹಾಟ್ ಸೀಟ್‌ನಲ್ಲಿ ಕುಳಿತರು. ಈ ವೇಳೆ ಶಾರುಖ್ ಖಾನ್‌ಗೆ ಸಂಬಂಧಪಟ್ಟ ಪ್ರಶ್ನೆಯೊಂದನ್ನು ಕೇಳಲಾಯಿತು. "ಈ ಕೆಳಗೆ ನೀಡಿರುವ ಪ್ರಶಸ್ತಿಗಳಲ್ಲಿ ಯಾವ ಪ್ರಶಸ್ತಿಯನ್ನು ಶಾರುಖ್ ಖಾನ್ ಪಡೆದಿಲ್ಲ..? ಎಂದು ಪ್ರಶ್ನೆ ಕೇಳಲಾಯಿತು. "ಪದ್ಮಶ್ರೀ, ಲೀಜನ್ ಆಫ್ ಆನರ್, ಲೆಟೊಯಿಲ್ ದಾರ್, ವಾಲ್ಪಿ ಕಪ್". ಆದರೆ ಸುಹಾನಾ ಅವರ ತಂದೆಗೆ ಸಂಬಂಧಿಸಿದ ಪ್ರಶ್ನೆಗೆ ಸುಲಭವಾಗಿ ಉತ್ತರ ಹೇಳ್ತಾರೆ ಅಂತ ಶಾರುಖ್‌ ಅಭಿಮಾನಿಗಳು ಭಾವಿಸಿದ್ದರು. ಆದರೆ ಅದು ಆಗಲಿಲ್ಲ.

ಮೊದಲು ಉತ್ತರಿಸಿದ ಸುಹಾನಾ ಖಾನ್ ಪದ್ಮಶ್ರೀ ಅಂತ ಉತ್ತರಿಸಿದರು. ಸುಹಾನಾ ಉತ್ತರಕ್ಕೆ ವೇದಾಂಗ್ ಮತ್ತು ಜೋಯಾ ಇದನ್ನು ಒಪ್ಪಿದ್ದರು. ಆದರೆ ಅದು ಸರಿಯಾದ ಉತ್ತರವಾಗಿರಲಿಲ್ಲ.. ಲಭ್ಯವಿರುವ ನಾಲ್ಕು ಆಯ್ಕೆಗಳಲ್ಲಿ ಶಾರುಖ್ ಇನ್ನೂ ವಾಲ್ಪಿ ಕಪ್ ಅನ್ನು ಪಡೆದಿಲ್ಲ. ಪದ್ಮಶ್ರೀ ಪ್ರಶಸ್ತಿಯನ್ನು 2005ರಲ್ಲಿ ಪಡೆದಿದ್ದಾರೆ. ಇದರೊಂದಿಗೆ ಪ್ರೇಕ್ಷಕರು ಶಾರುಖ್ ಅವರ ಮಗಳಿಗೆ ಅವರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ ಅಂತ ಟ್ರೋಲ್ ಮಾಡಲು ಪ್ರಾರಂಭಿಸಿದರು. 

ಇದನ್ನೂ ಓದಿ: ಡಿವೋರ್ಸ್ ಬಳಿಕ ಐಶ್ವರ್ಯಾಗೆ ಅಭಿಷೇಕ್ ಎಷ್ಟು ಜೀವನಾಂಶ ನೀಡಬೇಕು?

ಸುಹಾನಾ ಉತ್ತರ ಕೇಳಿ ಅಮಿತಾಬ್ ಬಚ್ಚನ್ ಕೂಡ ಅಚ್ಚರಿಗೊಂಡರು. ತಂದೆಗೆ ಯಾವ ಪ್ರಶಸ್ತಿ ಸಿಕ್ಕಿದೆ ಅಂತ ಮಗಳಿಗೆ ಗೊತ್ತಿಲ್ಲ. ನಾನು ಸರಳವಾದ ಪ್ರಶ್ನೆಯನ್ನು ಕೇಳಿದರೂ, ನಿಮಗೆ ಸರಿಯಾದ ಉತ್ತರ ತಿಳಿದಿಲ್ಲ ಎಂದು ಅಮಿತಾಬ್ ಹೇಳಿದರು. ಆದರೆ, ಶಾರುಖ್ ಪದ್ಮಶ್ರೀ ಸ್ವೀಕರಿಸಿದಾಗ ಸುಹಾನಾಗೆ ಕೇವಲ ಐದು ವರ್ಷ. ಅವರ ಮನೆಯಲ್ಲಿ ಪ್ರಶಸ್ತಿಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಹಾಗಾಗಿ ಆಕೆಗೆ ಅದರ ಬಗ್ಗೆ ಗೊತ್ತಿರಲಿಕ್ಕಿಲ್ಲ ಎನ್ನುತ್ತಾರೆ ಶಾರುಖ್ ಅಭಿಮಾನಿಗಳು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News