Nora fatehi : ʼನೋರಾ ದಿನಕ್ಕೆ ಹತ್ತು ಬಾರಿ ಮಾಡುತ್ತಿದ್ದಳು..ʼ ಎಂದ ಸುಕೇಶ್..!

Nora Fatehi money laundering case : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೈಲು ಸೇರಿರುವುದು ಗೊತ್ತೇ ಇದೆ. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿಯರನ್ನು ಇಡಿ ತನಿಖೆ ನಡೆಸುತ್ತಿರುವ ವಿಚಾರ ಜಗಜ್ಜಾಹೀರಾಗಿದೆ. ಸುಕೇಶ್ ಮತ್ತು ಜಾಕ್ವೆಲಿನ್ ಅವರ ರೊಮ್ಯಾಂಟಿಕ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆದ್ದು, ವೈರಲ್‌ ಆಗುತ್ತಿವೆ. 

Written by - Krishna N K | Last Updated : Jan 23, 2023, 01:55 PM IST
  • ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೈಲು ಸೇರಿದ್ದಾರೆ.
  • 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್, ನೋರಾ ಫತೇಹಿ ಕೇಳಿ ಬಂದಿತ್ತು.
  • ಇದೀಗ ಸುಕೇಶ್‌ ನೋರಾ ಫತೇಹಿ ದಿನಕ್ಕೆ ಹತ್ತು ಬಾರಿ ಕರೆ ಮಾಡುತ್ತಿದ್ದಳು ಎಂಬ ಹೇಳಿಕೆ ನೀಡಿದ್ದಾರೆ.
Nora fatehi : ʼನೋರಾ ದಿನಕ್ಕೆ ಹತ್ತು ಬಾರಿ ಮಾಡುತ್ತಿದ್ದಳು..ʼ ಎಂದ ಸುಕೇಶ್..! title=

Nora fatehi case : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೈಲು ಸೇರಿರುವುದು ಗೊತ್ತೇ ಇದೆ. 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿಯರನ್ನು ಇಡಿ ತನಿಖೆ ನಡೆಸುತ್ತಿರುವ ವಿಚಾರ ಜಗಜ್ಜಾಹೀರಾಗಿದೆ. ಸುಕೇಶ್ ಮತ್ತು ಜಾಕ್ವೆಲಿನ್ ಅವರ ರೊಮ್ಯಾಂಟಿಕ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆದ್ದು, ವೈರಲ್‌ ಆಗುತ್ತಿವೆ. 

ಇದರಿಂದ ನಟಿ ಜಾಕ್ವೆಲಿನ್ ಕೋಪಗೊಂಡಿದ್ದಾರೆ. ಅಲ್ಲದೆ, ಮಾಧ್ಯಮಗಳು ತಮಗೆ ಇಷ್ಟ ಬಂದಂತೆ ಬರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಕೇಶ್ ಜಾಕ್ವೆಲಿನ್‌ಗೆ ಐಷಾರಾಮಿ ವಿಲ್ಲಾವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಸುದ್ದಿಯು ಸಹ ಹೊರಬಿದ್ದಿತ್ತು. ಸುಕೇಶ್ ಪ್ರಕರಣದಲ್ಲಿ ನೋರಾ ಫತೇಹಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಇಡಿ ಮುಂದೆ ನೋರಾ ಹೇಳಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ಇದನ್ನೂ ಓದಿ: Lakshmana: ಕನ್ನಡದ ಖ್ಯಾತ ನಟ ಲಕ್ಷ್ಮಣ ವಿಧಿವಶ

ನೋರಾ ಫತೇಹಿ ಅವರು ಸುಕೇಶ್ ಅವರೊಂದಿಗೆ ಹೆಚ್ಚು ಪರಿಚಿತರಲ್ಲ ಎಂದು ಹೇಳಿದ್ದರು. ಅಲ್ಲದೆ, ಒಮ್ಮೆ ಅವರ ಪತ್ನಿ ಕರೆ ಮಾಡಿ ಕಾರ್ಯಕ್ರಮವೊಂದಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ನಾನು ಹೋಗಿದ್ದೆ, ಅಲ್ಲಿ ಅವರು ನನಗೆ ಉಡುಗೊರೆ ನೀಡಿದ್ದರು ಅಷ್ಟೇ.. ಅಂತ ನೋರಾ ತಿಳಿಸಿದ್ದರು. ಆದರೆ ಈಗ ಸುಕೇಶ್ ಸದ್ಯ ನೋರಾ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ನೋರಾ ಫತೇಹಿ ದಿನಕ್ಕೆ ಹತ್ತು ಬಾರಿ ಕರೆ ಮಾಡುತ್ತಿದ್ದಳು. ನಾನು ಫೋನ್ ರಿಸಿವ್‌ ಮಾಡಲಿಲ್ಲ ಅಂದ್ರೂ ಪದೇ ಪದೇ ಕರೆ ಮಾಡುತ್ತಿದ್ದಳು ಅಂತ ಸುಕೇಶ್ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೆ, ನೋರಾಗೆ ಜಾಕ್ವೆಲಿನ್ ಬಗ್ಗೆ ಅಸೂಯೆ ಭಾವನೆ ಹೊಂದಿದ್ದಳು, ಜಾಕ್ವೆಲಿನ್ ಬಿಟ್ಟು ತನ್ನೊಂದಿಗೆ ಡೇಟಿಂಗ್ ಮಾಡುವಂತೆ ಕೇಳಿದ್ದಳು. ನೋರಾ ನನ್ನ ಬ್ರೈನ್ ವಾಶ್ ಮಾಡುತ್ತಿದ್ದಳು ಎಂದು ಸುಕೇಶ್ ಹೇಳಿದ್ದಾರೆ. ಸುಕೇಶ್ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News