Sunny Leon ಪ್ಲೆಕ್ಸ್ ಹಾಕಿ ಜಾತ್ರೆಗೆ ಆಹ್ವಾನಿಸಿದ Sunny Leon Boys

Sunny Leon Plex: ಖ್ಯಾತ ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಕ್ರೇಜ್ ಕೇವಲ ಬಾಲಿವುಡ್ ಗೆ ಮಾತ್ರ ಸೀಮಿತವಾಗಿಲ್ಲ, ಹಳ್ಳಿಯಿಂದ ದಿಲ್ಲಿವರೆಗೂ ಸನ್ನಿ ಅಭಿಮಾನಿ ಬಳಗ ಹೊಂದಿದ್ದಾಳೆ ಎಂಬುವುದಕ್ಕೆ ಈ ಸುದ್ದಿಯೇ ಸಾಕ್ಷಿ.    

Written by - Nitin Tabib | Last Updated : Mar 22, 2022, 12:50 PM IST
  • ಜಾತ್ರಾ ಮಹೋತ್ಸವದಲ್ಲಿ ರಾರಾಜಿಸುತ್ತಿದೆ ಸನ್ನಿ ಲಿಯೋನ್ ಪ್ಲೆಕ್ಸ್
  • ಸನ್ನಿ ಲಿಯೋನ್ ಬಾಯ್ಸ್ ಸಂಘದ ವತಿಯಿದ ಸ್ವಾಗತ
  • ಏನಿದು ವಿಷಯ ಅಂತೀರಾ? ಸುದ್ದಿ ಓದಿ ಗೊತ್ತಾಗುತ್ತೆ
Sunny Leon ಪ್ಲೆಕ್ಸ್ ಹಾಕಿ ಜಾತ್ರೆಗೆ ಆಹ್ವಾನಿಸಿದ Sunny Leon Boys title=
Sunny Leon Plex by Sunny Leon Boys

ಕೊಪ್ಪಳ: Sunny Leon Latest News - ಪಡ್ಡೆ ಹುಡುಗರ ಕನಸಿಗೆ ಕಿಚ್ಚೇರೆಚುವ ಖ್ಯಾತ ಬಾಲಿವುಡ್ (Bollywood) ತಾರೆ ಸನ್ನಿ ಲಿಯೋನ್ (Sunny Leon) ಭಾವಚಿತ್ರಗಳನ್ನು ನೀವು ಇದುವರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಮಾತ್ರ ನೋಡಿರಬಹುದು. ಸನ್ನಿ ಕೂಡ ಅಷ್ಟೇ, ಸಾಮಾಜಿಕ ಮಾಧ್ಯಮಗಳಲ್ಲಿ  ತುಂಬಾ ಸಕ್ರೀಯಳಾಗಿದ್ದು, ಆಗ್ಗಾಗ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ತನ್ನ ಭಾವಚಿತ್ರಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ತನ್ನ ಕುರಿತು ಅಪ್ಡೇಟ್ ನೀಡುತ್ತಲೇ ಇರುತ್ತಾಳೆ. ಆದರೆ, ಕೆಲ ಯುವಕರು ಸನ್ನಿ ಲಿಯೋನ್ ಪ್ಲೆಕ್ಸ್ (Sunny Leon Plex) ಹಾಕಿಕೊಂಡು ಜನರನ್ನು ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಿದ ಸುದ್ದಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸುಳಿದಾಡಲಾರಂಭಿಸಿದೆ. ಅಂದ ಹಾಗೆ ಸನ್ನಿ ಲಿಯೋನ್ ಬಾಯ್ಸ್ ಹೆಸರಿನ ಯುವಕರ ಸಂಘ ಈ ಪ್ಲೆಕ್ಸ್ ಹಾಕಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Valimai: ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ‘ವಲಿಮೈ’ ZEE5 ಒಟಿಟಿಗೆ ಎಂಟ್ರಿ..!

ಹೌದು, ಜಾತ್ರೆ ಉತ್ಸವಗಳಲ್ಲಿ ಜನರು ತಮ್ಮ ನೆಚ್ಚಿನ ಸಿನಿಮಾ ನಾಯಕರ, ರಾಜಕಾರಣಿಗಳ ಫ್ಲೆಕ್ಸ್ ಹಾಕಿ ಸ್ವಾಗತ ಕೊರುವುದನ್ನು ನೀವು ನೋಡಿರಬಹುದು. ಆದರೆ ಕೊಪ್ಪಳ (Koppala) ಜಿಲ್ಲೆ ಕುಷ್ಟಗಿ (Kushtagi) ತಾಲೂಕಿನ ಗಡಿ ಗ್ರಾಮ ಹಾಬಲಕಟ್ಟಿಯಲ್ಲಿ (Habalakatti) ಬಾಲಿವುಡ್ ನಟಿ, ಮಾದಕ ಚೆಲುವೆ ಸನ್ನಿ ಲೀಯೋನ ಚಿತ್ರ ಹಾಕಿ ಜನರನ್ನು ಜಾತ್ರಾಮಹೋತ್ಸವಕ್ಕೆ ಸ್ವಾಗತ ಕೋರಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರಾಮಹೋತ್ಸವದ (Habalakatti Fare) ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸ್ವಾಗತಿಸಲು ಕೆಲ ಯುವಕರು ತಮ್ಮ ಭಾವಚಿತ್ರದೊಂದಿಗೆ  ಮಾದಕ ಚಲುವೆ ಸನ್ನಿ ಲಿಯೋನ ಚಿತ್ರ ಹಾಕಿ ಜಾತ್ರೋತ್ಸವಕ್ಕೆ ರಂಗು ತುಂಬಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ಈ ಫ್ಲೆಕ್ಸ್ ಜನರನ್ನು ಆಯಸ್ಕಾಂತದಂತೆ ಸೆಳೆಯುತ್ತಿದೆ. ಊರಿನ ಕೆಲ ಪಡ್ಡೆ ಹುಡುಗರ ಕೆಲಸ ಇದಾಗಿರಬಹುದು ಎಂಬುದು ನಿಮ್ಮ ಊಹೆಯಾಗಿದ್ದರೆ, ಅದು ತಪ್ಪು. ಏಕೆಂದರೆ, ಕೊರೊನಾ ಕಾಲದಲ್ಲಿ ಸನ್ನಿ ಲಿಯೋನ್ ಹಲವು ಜನರಿಗೆ ತಮಗೆ ಕೈಲಾದ ಸಹಾಯ ಮಾಡಿದ್ದಾರೆ. ಆಕೆಗೆ ಕೃತಜ್ಞತೆಯನ್ನು ಸಲ್ಲಿಸಲು ಈ ರೀತಿ ಮಾಡಲಾಗಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಎಲ್ಲಿಯ ಬಾಲಿವುಡ್ ಎಲ್ಲಿಯ ಹಾಬಲಕಟ್ಟಿ ಎಲ್ಲೇಲ್ಲಿಯ ಸಂಬಂಧವಯ್ಯ? ಎನ್ನುವಂತಾಗಿದೆ.

ಇದನ್ನೂ ಓದಿ-Salman Khan ಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ರಾಜಸ್ಥಾನ್ ಹೈಕೋರ್ಟ್

ಇನ್ನು ಸನ್ನಿ ಲಿಯೋನ್ ವೃತ್ತಿ ಜೀವನದ ಕುರಿತು ಹೇಳುವುದಾದರೆ, 2012 ರಲ್ಲಿ ತೆರೆಕಂಡ 'ಜಿಸ್ಮ್' ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಿರುವ ಈ ಮಾದಕ ಬೆಡಗಿ, ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುವ ಮೊದಲು ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್, ಬಿಗ್ ಬಾಸ್ ಸೀಸನ್ 5ರಲ್ಲಿ ಕಾಣಿಸಿಕೊಂಡಿದ್ದಳು. ಮಾರ್ಚ್ 10, 2022 ರಂದು Mx Player ಮೇಲೆ ಬಿಡುಗಡೆಯಾದ ಮತ್ತು ಖ್ಯಾತ ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್ ನಿರ್ದೇಶನದ 'ಅನಾಮಿಕಾ' ಹೆಸರಿನ ವೆಬ್ ಸೀರಿಸ್ ನಲ್ಲಿ ಸನ್ನಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾಳೆ. ಆಕೆಯ ಮುಂಬರುವ ಪ್ರಾಜೆಕ್ಟ್ ಗಳಲ್ಲಿ ಮಲಯಾಳಂ ಭಾಷೆಯ 'ಶೆರೋ', ತಮಿಳು ಭಾಷೆಯ ಹಾರರ್ ಸಿನಿಮಾ 'ಓ ಮಾಯ್ ಘೋಷ್ಟ್', ಹಿಂದಿ ಭಾಷೆಯ 'ಪಟ್ಟಾ', 'ದಿ ಬ್ಯಾಟಲ್ ಆಫ್ ಭೀಮಾ ಕೊರೆಗಾಂವ', 'ಕೋಕಾ ಕೋಲಾ' ಇತ್ಯಾದಿಗಳು ಶಾಮೀಲಾಗಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News