ಸನ್ನಿ ಡಿಯೋಲ್ ಕಂಡು ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತಾ?

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ನಿ ಡಿಯೋಲ್ ಅವರನ್ನು ಮುಖಾಮುಖಿಯಾದ ನಟಿ ಸನ್ನಿ ಲಿಯೋನ್, ಸನ್ನಿ ಡಿಯೋಲ್ ಗೆ ಕ್ಷಮೆಯಾಚಿಸಿದ್ದಾರೆ. 

Updated: Dec 8, 2019 , 11:33 AM IST
ಸನ್ನಿ ಡಿಯೋಲ್ ಕಂಡು ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತಾ?

ನವದೆಹಲಿ: ಪ್ರಸ್ತುತ ವರ್ಷ ಸಿಂಗಾಪುರದಲ್ಲಿ ಆಯೋಜಿಸಲಾಗಿರುವ ಅಂತರರಾಷ್ಟ್ರೀಯ ಭೋಜ್‌ಪುರಿ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್, ನಟ ಸನ್ನಿ ಡಿಯೋಲ್ ಅವರಿಗೆ ಕ್ಷಮೆಯಾಚಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಹುತೇಕ ಭೋಜ್‌ಪುರಿ ನಟರು ಹಾಜರಾತಿ ನಮೂದಿಸಿದ್ದು, ಬಾಲಿವುಡ್‌ನ ಕೆಲ ಖ್ಯಾತನಾಮರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 

ಈ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಬಾಲಿವುಡ್ ಖ್ಯಾತ ನಟ ಸನ್ನಿ ಡಿಯೋಲ್ ಕೂಡ ತೆರಳಿದ್ದಾರೆ, ಜೊತೆಗೆ ಖ್ಯಾತ ನಟಿ ಸನ್ನಿ ಲಿಯೋನ್ ಕೂಡ ತಮ್ಮ ಹಾಜರಾತಿ ನಮೂದಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ನಿ ಡಿಯೋಲ್ ಅವರನ್ನು ಮುಖಾಮುಖಿಯಾದ ನಟಿ ಸನ್ನಿ ಲಿಯೋನ್, ಸನ್ನಿ ಡಿಯೋಲ್ ಗೆ ಕ್ಷಮೆಯಾಚಿಸಿದ್ದಾರೆ. ಇಷ್ಟಕ್ಕೂ ಸನ್ನಿ ಲಿಯೋನ್ ಹೀಗೆ ಮಾಡಿದ್ದಾದರೂ ಯಾಕೆ ಅಂತ ನೀವು ಯೋಚಿಸುತ್ತಿರಬಹುದು. ಹಾಗಿದ್ರೆ ಕೇಳಿ, ಉಭಯ ಕಲಾವಿದರು ಒಂದೇ ಹೆಸರನ್ನು ಹಂಚಿಕೊಳ್ಳುವುದರಿಂದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರ ಕುರಿತಂತೆ ಅನೇಕ ಹಾಸ್ಯ ಸನ್ನಿವೇಶ ಹಾಗೂ ಮೀಮ್ ಗಳನ್ನು ರಚಿಸಲಾಗಿದೆ. ಸನ್ನಿ ಲಿಯೋನ್ ಕ್ಷಮೆಯಾಚನೆಗೆ ಪ್ರತಿಕ್ರಿಯಿಸಿರುವ ಸನ್ನಿ ಡಿಯೋಲ್ ಮುಗುಳ್ನಕ್ಕು ನಾಚಿ ತಮ್ಮ ತಲೆ ತಗ್ಗಿಸಿಕೊಂಡಿದ್ದಾರೆ.

ಈ ಅಂತರರಾಷ್ಟ್ರೀಯ ಭೋಜ್‌ಪುರಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಭೋಜಪುರಿ ನಟರಾದ  ರವಿ ಕಿಶನ್, ಮನೋಜ್ ತಿವಾರಿ, ಪವನ್ ಸಿಂಗ್, ದಿನೇಶ್ ಲಾಲ್ ಯಾದವ್ ಅಕಾ ನಿರಾಹುವಾ, ಅಮ್ರಾಪಾಲಿ ದುಬೆ, ಅಂಜನಾ ಸಿಂಗ್, ಕಾಜಲ್ ರಘವಾನಿ ಮುಂತಾದವರು ಭಾಗವಹಿಸಿದ್ದಾರೆ. ಈ ಸಮಾರಂಭದಲ್ಲಿ ನಟಿ ಕಾಜೋಲ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದರೆ  'ಮಾ ತುಜೆ ಸಲಾಮ್'  ಚಿತ್ರಕ್ಕಾಗಿ ನಟಪವನ್ ಸಿಂಗ್ ಅತ್ಯುತ್ತಮ ನಟ (ತೀರ್ಪುಗಾರರ) ಪ್ರಶಸ್ತಿಗೆ ಮತ್ತು ದಿನೇಶ್ ಲಾಲ್ ಯಾದವ್ ಅಕಾ ನಿರಾಹುವಾ 'ಬಾರ್ಡರ್' ಚಿತ್ರಕ್ಕಾಗಿ ಅತ್ಯುತ್ತಮ ನಟ (ವಿಮರ್ಶಕರ) ಪ್ರಶಸ್ತಿಗೆ ಭಾಜನರಾಗಿದ್ದಾರೆ.