ಹಾಲಿವುಡ್ ನ Avengers: Endgame ಮೀರಿಸಿದ ಸುಶಾಂತ್ ಸಿಂಗ್ ರಜಪೂತ್ ಅವರ Dil Bechara' trailer...!

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ 'ದಿಲ್ ಬೆಚರಾ' ಜುಲೈ 24, 2020 ರಂದು ಡಿಸ್ನಿಪ್ಲಸ್ ಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಇದಕ್ಕೂ ಮೊದಲು ಬಿಡುಗಡೆಯಾಗಿರುವ ಸುಶಾಂತ್ ಸಿಂಗ್ ರಾಜಪೂತ್ ರ 'ದಿಲ್ ಬೆಚರಾ  ಯೂಟ್ಯೂಬ್‌ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ.

Last Updated : Jul 7, 2020, 04:13 PM IST
ಹಾಲಿವುಡ್ ನ Avengers: Endgame ಮೀರಿಸಿದ ಸುಶಾಂತ್ ಸಿಂಗ್ ರಜಪೂತ್ ಅವರ Dil Bechara' trailer...! title=

ನವದೆಹಲಿ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ 'ದಿಲ್ ಬೆಚರಾ' ಜುಲೈ 24, 2020 ರಂದು ಡಿಸ್ನಿಪ್ಲಸ್ ಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಇದಕ್ಕೂ ಮೊದಲು ಬಿಡುಗಡೆಯಾಗಿರುವ ಸುಶಾಂತ್ ಸಿಂಗ್ ರಾಜಪೂತ್ ರ 'ದಿಲ್ ಬೆಚರಾ  ಯೂಟ್ಯೂಬ್‌ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಬಿಡುಗಡೆಯಾದ 24 ಗಂಟೆಗಳಲ್ಲಿ ಹಾಲಿವುಡ್‌ನ ಅವೆಂಜರ್ಸ್: ಎಂಡ್‌ಗೇಮ್ ಅನ್ನು ಕೂಡ ಮೀರಿಸಿ ಅತಿ ಹೆಚ್ಚು ಲೈಕ್ ಪಡೆದ ಟ್ರೈಲರ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ಇದನ್ನೂ ಓದಿ: ನನ್ನ ಹೃದಯದ ಒಂದು ಭಾಗವು ನಿಮ್ಮೊಂದಿಗೆ ಹೋಗಿದೆ ಸುಶಾಂತ್'- ಮನಕಲಕುವ ಕೃತಿ ಸನೋನ್ ಪೋಸ್ಟ್

'ದಿಲ್ ಬೆಚರಾ' ಟ್ರೈಲರ್‌ ಗೆ 5.4 ಮಿಲಿಯನ್ ಲೈಕ್‌ಗಳು ಬಂದಿದ್ದರೇ ಮಾರ್ವೆಲ್ ಸ್ಟುಡಿಯೋಸ್ '' ಅವೆಂಜರ್ಸ್: ಎಂಡ್‌ಗೇಮ್ 'ಅಧಿಕೃತ ಟ್ರೈಲರ್‌ಗೆ ಈಗಿನಂತೆ 2.9 ಎಂ ಲೈಕ್‌ಗಳಿವೆ.ಸುಶಾಂತ್ ಅವರ ಕೊನೆಯ ಚಿತ್ರವು 24 ಗಂಟೆಗಳಲ್ಲಿ ಇದುವರೆಗೆ 24,428,315 ವೀಕ್ಷಣೆಗಳನ್ನು ಪಡೆದಿದೆ.

ಈ ಚಿತ್ರವು ಜಾನ್ ಗ್ರೀನ್ ಅವರ 2012 ರ ಕಾದಂಬರಿ 'ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್' ಅನ್ನು ಆಧರಿಸಿದೆ. ಇದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಮತ್ತು ಸಂಜನಾ ಸಂಘಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ಮುಖೇಶ್ ಛಬ್ರಾ ನಿರ್ದೇಶಿಸಿದ್ದಾರೆ.

2020 ರ ಜೂನ್ 14 ರಂದು ಸುಶಾಂತ್ ಅವರ ಅಕಾಲಿಕ ನಿಧನವು ಅವರ ಕುಟುಂಬ, ಸ್ನೇಹಿತರು ಮತ್ತು ಶೋಕಕ್ಕೆ ತಳ್ಳಿದೆ.ಅನೇಕ ಚಲನಚಿತ್ರ ವ್ಯಕ್ತಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ 'ದಿಲ್ ಬೆಚರಾ' ಟ್ರೈಲರ್ ಅನ್ನು ಹಂಚಿಕೊಂಡರು, ದಿವಂಗತ ನಟನ ನೆನಪಿಗಾಗಿ ಅದನ್ನು ಪ್ರಚಾರ ಮಾಡಿದರು.

Trending News