ಮತ್ತೆ ಒಂದಾಗಲಿದ್ದಾರೆಯೇ ಹೃತಿಕ್ ರೋಶನ್-ಸುಸೇನ್ ಖಾನ್ ?

ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಶನ್ ಗುರುವಾರದಂದು 46ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

Updated: Jan 10, 2019 , 02:59 PM IST
ಮತ್ತೆ ಒಂದಾಗಲಿದ್ದಾರೆಯೇ ಹೃತಿಕ್ ರೋಶನ್-ಸುಸೇನ್ ಖಾನ್ ?
Photo courtesy: Instagram

ನವದೆಹಲಿ: ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಶನ್ ಗುರುವಾರದಂದು 46ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ವಿಶೇಷವೇನೆಂದರೆ ಹೃತಿಕ ರೋಶನ್ ಅವರಿಗೆ ಡೈವರ್ಸ್ ನೀಡಿದ್ದ ಪತ್ನಿ ಸುಸೇನ್ ಖಾನ್ ಈಗ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಪೋಸ್ಟ್  ನಲ್ಲಿ ಬರೆದುಕೊಳ್ಳುತ್ತಾ "ಈ ಜಗತ್ತಿನಿಂದ ಮತ್ತು ಇತರ ಪ್ರಾಂತ್ಯಗಳಿಂದಲೂ ಹುಟ್ಟುಹಬ್ಬದ ಶುಭಾಶಯಗಳು, ನಿನ್ನ ಜೊತೆ ಶಕ್ತಿ ಯಾವಾಗಲೂ ಇರುತ್ತದೆ ಎಂದು ತಿಳಿಸಿದ್ದಾರೆ.ಈಗ ಹುಟ್ಟುಹಬ್ಬದ ದಿನದಂದು ಹೃತಿಕ್ ರೋಶನ್ ಅವರಿಗೆ ಸುಸೇನ್ ಖಾನ್  ಅವರು  ಶುಭಾಷಯ ಕೋರಿರುವುದನ್ನು ನೋಡಿದರೆ ವಿಚ್ಛೇಧನ ಪಡೆದಿದ್ದ ಜೋಡಿ ಮತ್ತೆ ಒಂದಾಗಲಿದೆಯೇ ಎನ್ನುವುದಕ್ಕೆ ಪುಷ್ಟಿ ನೀಡಿದೆ. 

2000 ರಲ್ಲಿ ವಿವಾಹವಾದ ಹೃತಿಕ್ ಮತ್ತು ಸುಸೇನ್ ಅವರು 2014 ರಲ್ಲಿ ವಿಚ್ಛೇದನವಾಗಿದ್ದರು.ಅವರ ಬೇರ್ಪಡಿಕೆ ಅವರ ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಇದು ನಿಜಕ್ಕೂ ದಿಗ್ಭ್ರಮೆಯಾಯಿತು. ಆದಾಗ್ಯೂ, ಈ ದಂಪತಿಗಳು ಸ್ನೇಹಿತರಾಗಿ ಉಳಿಯಲು ನಿರ್ಧರಿಸಿ ಆಗಾಗ ಸಾರ್ವಜನಿಕ ವೇದಿಕೆಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವುದನ್ನು ಮುಂದುವರೆಸುತ್ತಿದ್ದಾರೆ.

ತಮ್ಮ ಬೇರ್ಪಡುವಿಕೆಯ ನಂತರ ಸಹ, ಜೋಡಿಯು ಭೇಟಿಯಾಗಿ ಮಕ್ಕಳೊಂದಿಗೆ ಹ್ಯಾಂಗ್ ಔಟ್ ಮಾಡುವುದರ ಮೂಲಕ ಸಮಯವನ್ನು ಕಳೆಯುತ್ತಾರೆ.