Tamannaah Dinner Date: ಕಾರಿನಲ್ಲಿ ಪ್ರಿಯಕರನೊಂದಿಗೆ ತಮನ್ನಾ.. ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಲವ್‌ಬರ್ಡ್ಸ್‌!!

Tamannaah Dinner Date: ತಮನ್ನಾ ಪ್ರಸ್ತುತ ಮುಂಬೈನಲ್ಲಿ ತನ್ನ ಗೆಳೆಯನೊಂದಿಗೆ ಸುತ್ತಾಡುತ್ತಿದ್ದಾರೆ. ತಮನ್ನಾ ಅವರು ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿವೆ. ವಿಜಯ್ ವರ್ಮಾ ಅವರೊಂದಿಗೆ ತಮನ್ನಾ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗುತ್ತಿವೆ.  

Written by - Chetana Devarmani | Last Updated : Apr 26, 2023, 05:46 PM IST
  • ಕಾರಿನಲ್ಲಿ ಪ್ರಿಯಕರನೊಂದಿಗೆ ತಮನ್ನಾ
  • ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಲವ್‌ಬರ್ಡ್ಸ್‌!
  • ತಮನ್ನಾ ಡಿನ್ನರ್‌ ಡೇಟ್‌ ಫೋಟೋ ವೈರಲ್‌
Tamannaah Dinner Date: ಕಾರಿನಲ್ಲಿ ಪ್ರಿಯಕರನೊಂದಿಗೆ ತಮನ್ನಾ.. ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಲವ್‌ಬರ್ಡ್ಸ್‌!! title=
Tamannaah Bhatia

Tamannaah Bhatia Dinner Date: ಮಿಲ್ಕಿ ಬ್ಯೂಟಿ ತಮನ್ನಾ ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್ ಬಲು ಜೋರಾಗಿದೆ. ತಮನ್ನಾಳ ಪ್ರೀತಿ ಮತ್ತು ಮದುವೆ ಯಾವಾಗಲೂ ಹಾಟ್ ಟಾಪಿಕ್ ಆಗಿರುತ್ತದೆ. ಆದರೆ ಈ ವರ್ಷ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತಮನ್ನಾ ತನ್ನ ಗೆಳೆಯ ವಿಜಯ್ ವರ್ಮಾ ಜೊತೆ ಕಾಣಿಸಿಕೊಂಡಿದ್ದರು. ಇದೇ ವೇಳೆ ಕಿಸ್‌ ಮಾಡುವ ಫೋಟೋ ಸಹ ಶೇರ್‌ ಮಾಡಿದ್ದರು. ಆ ನಂತರ ತಮನ್ನಾ ಮತ್ತು ವಿಜಯ್ ವರ್ಮಾ ಡೇಟಿಂಗ್ ವಿಚಾರ ಹಾಟ್ ಟಾಪಿಕ್ ಆಯಿತು.

ಇದನ್ನೂ ಓದಿ: ಈ ದೇವರ ಟ್ಯಾಟೂ ಹಾಕಿಸಿದ ಶ್ರುತಿ ಹಾಸನ್, ಇದಕ್ಕಿದೆಯಂತೆ ಒಂದು ಹಿನ್ನೆಲೆ!

ಈಗ ಮತ್ತೊಮ್ಮೆ ವಿಜಯ್ ವರ್ಮಾ ಮತ್ತು ತಮನ್ನಾ ವಿಡಿಯೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಇಬ್ಬರು ನಿನ್ನೆ ರಾತ್ರಿ ಮುಂಬೈನಲ್ಲಿ ಡಿನ್ನರ್ ಡೇಟ್ ಗೆ ಹೋಗಿದ್ದರು ಎಂದು ತೋರುತ್ತದೆ. ರಾತ್ರಿ ಊಟ ಮುಗಿಸಿ ಹೊರಗೆ ಹೋಗುತ್ತಿದ್ದಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಛಾಯಾಗ್ರಾಹಕರು ಚಿತ್ರ ತೆಗೆಯುತ್ತಿದ್ದರೂ ತಮನ್ನಾ ತಲೆಕೆಡಿಸಿಕೊಳ್ಳಲಿಲ್ಲ. ಕಾರು ಹತ್ತುವಾಗ, ಫೋಟೋಗ್ರಾಫರ್‌ಗಳತ್ತ ಕೈ ಬೀಸಿದರು.

ಇತ್ತೀಚೆಗೆ ಟಾಲಿವುಡ್‌ನಲ್ಲಿ ತಮನ್ನಾ ಕ್ರೇಜ್  ಕಡಿಮೆಯಾಗಿದೆ. ಅವರ ಸಿನಿಮಾಗಳೂ ಸರಿಯಾಗಿ ಓಡುತ್ತಿಲ್ಲ.  ತಮನ್ನಾಗೆ ಹಿಂದಿಯಲ್ಲಿ ಹಲವು ಆಫರ್‌ಗಳು ಬರುತ್ತಿವೆ. ತಮನ್ನಾ ಸದ್ಯ ಚಿರಂಜೀವಿ ಜೊತೆ ಭೋಲಾ ಶಂಕರ್ ಸಿನಿಮಾ ಮಾಡುತ್ತಿದ್ದಾರೆ. ವೆಂಕಟೇಶ್ ಅಭಿನಯದ ಅನಿಲ್ ರವಿಪುಡಿ ಕಾಂಬೊ ಎಫ್ 3 ನಲ್ಲಿ ತಮನ್ನಾ ತನ್ನ ಓವರ್ ಆಕ್ಷನ್‌ನಿಂದ ಟ್ರೋಲ್ ಆಗಬೇಕಾಯಿತು.

ಇದನ್ನೂ ಓದಿ: ಈ ಸೂಪರ್‌ಸ್ಟಾರ್ Ok ಅಂದಿದ್ರೆ, ಅಲ್ಲು ಅರ್ಜುನ್‌ಗೆ 'ಪುಷ್ಪ' ಆಫರ್ ಮಿಸ್‌ ಆಗ್ತಿತ್ತು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News