ನವದೆಹಲಿ: ಇತ್ತೀಚಿಗೆ ನೀವು ಯಾರಿಗಾದರೂ ಕರೆ ಮಾಡುತ್ತಿರುವಾಗ ಖ್ಯಾತ ಬಾಲಿವುಡ್ ಹಿರಿಯ ನಟ ಅಮಿತಾಭ್ ಅವರ ಧ್ವನಿಯಲ್ಲಿ ಕೇಳಿ ಬರುತ್ತಿದ್ದ ಕೊರೊನಾ ಎಚ್ಚರಿಕೆಯ ಕುರಿತ ಕಾಲರ್ ಟ್ಯೂನ್ ಆಲಿಸಿರಬಹುದು. ಆದರೆ, ವರದಿಗಳ ಪ್ರಕಾರ ಮೊಬೈಲ್ ಕರೆಗಳ ಸಂದರ್ಭದಲ್ಲಿ ಕೇಳಿಬರುತ್ತಿದ್ದ ಈ ಕಾಲರ್ ಟ್ಯೂನ್ ಬದಲಾಗುತ್ತಿದೆ ಎನ್ನಲಾಗಿದೆ. ಸದ್ಯ ಈ ಕಾಲರ್ ಟ್ಯೂನ್ ಅನ್ನು ನೀವು ಅಮಿತಾಭ್ ಅವರ ಧ್ವನಿಯಲ್ಲಿ ಕೇಳುತ್ತಿರುವಿರಿ. ಮೊಲ್ಲಗಳ ಪ್ರಕಾರ ಕೊರೊನಾ ವೈರಸ್ ನಿಂದ ಬಚಾವಾಗಲು ಸಲಹೆ ನೀಡುವ ಈ ಕಾಲರ್ ಟ್ಯೂನ್ ಬದಲಾಗುತ್ತಿದೆ.
ಉದ್ದೇಶ ಏನಿತ್ತು?
ಮೂಲಗಳ ಪ್ರಕಾರ ನಾಳೆ ಅಂದರೆ ಶುಕ್ರವಾರ ಜನವರಿ 15 ರಿಂದ ಅಮಿತಾಭ್ ಬಚ್ಚನ್ ಅವರ ಜಾಗದಲ್ಲಿ ಮಹಿಳೆಯೋರ್ವರ ಧ್ವನಿಯಲ್ಲಿ ನೀವು ಈ ಕಾಲರ್ ಟ್ಯೂನ್ ಕೇಳಿಬರಲಿದೆ. ಕೊರೊನಾ ಕಾಲದಲ್ಲಿ ಕಳೆದ ಹಲವು ದಿನಗಳಿಂದ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಅಮಿತಾಬ್ ಅವರ ಧ್ವನಿಯಲ್ಲಿ ಈ ಸಂದೇಶ ಪ್ರಸಾರ ಮಾಡಲಾಗುತ್ತಿತ್ತು. ಆದರೆ, ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ದೊಡ್ಡ ನಿರ್ಣಯವೊಂದನ್ನು ಕೈಗೊಂಡಿದೆ.
ಇದನ್ನು ಓದಿ-Amitabh Bachchan: ಹೀಗಿತ್ತು ನೋಡಿ ಬಿಗ್ ಬಿ ಲಢಾಖ್ ಡೈರಿ: ರಕ್ಕಸ ಚಳಿಯ ಲಢಾಖ್ ನಲ್ಲಿ ಅಮಿತಾಬ್ ಮಾಡಿದ್ದೇನು..?
ಆಗುತ್ತಿರುವ ಬದಲಾವಣೆ ಏನು?
ಕೊರೊನಾಗೆ ಸಂಬಂಧಿಸಿದಂತೆ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಸರ್ಕಾರದ ಉದ್ದೇಶವಾಗಿದೆ. ಆದರೆ, ಬರುವ ಶನಿವಾರದಿಂದ ದೇಶದಲ್ಲಿ ಕೊರೊನಾ ಲಸಿಕೆ (Corona Vaccine) ಅಭಿಯಾನ ಆರಂಭವಾಗುತ್ತಿದ್ದು, ಕೊರೊನಾ ಲಸಿಕೆಯ ಮೇಲೆ ಕೇಂದ್ರ ಸರ್ಕಾರ ತನ್ನ ಸಂಪೂರ್ಣ ಗಮನ ಕೇಂದ್ರೀಕರಿಸಿದೆ.
ಇದನ್ನುಓದಿ-ಕೊರೊನಾದಿಂದ ಚೇತರಿಸಿಕೊಂಡ ಅಮಿತಾಬ್ ಬಚ್ಚನ್, ಆಸ್ಪತ್ರೆಯಿಂದ ಬಿಡುಗಡೆ
ಎಂದಿನಿಂದ ಆರಂಭಗೊಳ್ಳುತ್ತಿದೆ ಲಸಿಕೆಯ ಮಹಾ ಅಭಿಯಾನ?
ಬರುವ ಜನವರಿ 16 ರಿಂದ ದೇಶಾದ್ಯಂತ ಕೊರೊನಾ ಲಸಿಕೆಯ ಮಹಾ ಅಭಿಯಾನ ಆರಂಭಗೊಳ್ಳುತ್ತಿದೆ. ಈ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಶುಕ್ರವಾರದಿಂದ ಬದಲಾಗಿರುವ ಕಾಲರ್ ಟ್ಯೂನ್ ನಲ್ಲಿ ನಿಮಗೆ ಕೊರೊನಾ ಲಸಿಕಾಕರಣ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕಾಲರ್ ಟ್ಯೂನ್ ಕೇಳಿಬರಲಿದೆ. ಈ ಹೊಸ ಕಾಲರ್ ಟ್ಯೂನ್ ಮೂಲಕ ಕೊರೊನಾ ಲಸಿಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಮಿತಾಬ್ಹ್ ಬಚ್ಚನ್ ಅವರಿಗಿಂತ ಮೊದಲು ಈ ಕಾಲರ್ ಟ್ಯೂನ್ ಜಸಲೀನ್ ಭಲ್ಲಾ ಅವರ ಧ್ವನಿಯಲ್ಲಿ ಕೇಳಿಬರುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನು ಓದಿ-ಕರೋನಾ ಚಿಕಿತ್ಸೆಯ ಮಧ್ಯೆ ಭಾವುಕರಾದ ಅಮಿತಾಬ್ ಬಚ್ಚನ್‍ರಿಂದ ವಿಡಿಯೋ ಬಿಡುಗಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.