ಕೃಷ್ಣಮೃಗ ಬೇಟೆ ಪ್ರಕರಣ ಇಂದು ಅಂತಿಮ ತೀರ್ಪು

ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು, ನೀಲಂ, ಸೋನಾಲಿ ಬೆಂದ್ರೆ ಮತ್ತು ಜೋಧ್ಪುರ್ ನಿವಾಸಿ ದುಶ್ಯಾಂತ್ ಸಿಂಗ್ ಅವರು 1998 ರ ಅಕ್ಟೋಬರ್ 1 ರಂದು ಜೋಧ್ಪುರದಲ್ಲಿ ಲುನಿ ಪೊಲೀಸ್ ಠಾಣೆಯ ಕಂಕನಿ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧಿಸಿದ ಶಸ್ತ್ರಾಸ್ತ್ರ ಕಾಯ್ದೆಯಡಿ, ನಟ ಸಲ್ಮಾನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

Last Updated : Apr 5, 2018, 09:10 AM IST
ಕೃಷ್ಣಮೃಗ ಬೇಟೆ ಪ್ರಕರಣ ಇಂದು ಅಂತಿಮ ತೀರ್ಪು title=

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ನಟಿ ಟಬು, ನೀಲಮ್ ಮತ್ತು ಸೋನಾಲಿ ಬೇಂದ್ರೆ 20 ವರ್ಷದ ಕೃಷ್ಣಮೃಗ ಬೇಟೆ ಪ್ರಕರಣದ ಅಂತಿಮ ತೀರ್ಪು ಇಂದು(ಗುರುವಾರ) ಹೊರಬೀಳಲಿದೆ. ಜೋಧಪುರ ಕೋರ್ಟ್ ಈ ಸ್ಟಾರ್ ಗಳ ಭವಿಷ್ಯವನ್ನು ಇಂದು ನಿರ್ಧರಿಸಲಿದೆ. 

'ಹಮ್ ಸಾಥ್ ಸಾಥ್ ಹೈ' ಚಿತ್ರದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಟಬು, ನೀಲಂ, ಸೋನಾಲಿ ಬೆಂದ್ರೆ ಮತ್ತು ಜೋಧ್ಪುರ್ ನಿವಾಸಿ ದುಶ್ಯಾಂತ್ ಸಿಂಗ್ ಅವರು 1998 ರ ಅಕ್ಟೋಬರ್ 1 ರಂದು ಜೋಧ್ಪುರದಲ್ಲಿ ಲುನಿ ಪೊಲೀಸ್ ಠಾಣೆಯ ಕಂಕನಿ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಾಲಿವುಡ್ ಸ್ಟಾರ್ ಗಳು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದೂ ಸಹ ಹೇಳಲಾಗಿದೆ. ಈ ಬಗ್ಗೆ 2017ರ ಸೆಪ್ಟಂಬರ್ 13ರಂದು ಅಂತಿಮ ಹಂತದ ವಿಚಾರಣೆ ನಡೆಸಿದ್ದ ಜೋಧಪುರ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.

Trending News