'ದಿ ಗೋಟ್ ಲೈಫ್' ಸಿನಿಮಾದ 2ನೇ ಪೋಸ್ಟರ್ ರಿಲೀಸ್: ರಗಡ್ ಲುಕ್’ನಲ್ಲಿ ಕಾಣಿಸಿಕೊಂಡ ಸಲಾರ್ ಸ್ಟಾರ್ ಪೃಥ್ವಿರಾಜ್

Prithviraj Sukumaran: ಈ ಚಲನಚಿತ್ರವು ಬೆಂಜಮಿನ್ ಅವರ ಪ್ರಶಸ್ತಿ ವಿಜೇತ ಕಾದಂಬರಿ ‘ಗೋಟ್ ಲೈಫ್'ನ್ನು ಆಧರಿಸಿದೆ. ಇನ್ನು ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನ ಮಾಡುತ್ತಿದ್ದರೆ, ವಿಷುಯಲ್ ರೊಮ್ಯಾನ್ಸ್ ಬ್ಯಾನರ್ ಬಿಗ್ ಬಜೆಟ್’ನೊಂದಿಗೆ ಈ ಸಿನಿಮಾವನ್ನು ನಿರ್ಮಿಸುತ್ತಿದೆ.

Edited by - Bhavishya Shetty | Last Updated : Jan 18, 2024, 10:14 AM IST
    • ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್
    • ಬೆಂಜಮಿನ್ ಅವರ ಪ್ರಶಸ್ತಿ ವಿಜೇತ ಕಾದಂಬರಿ ‘ಗೋಟ್ ಲೈಫ್'ನ್ನು ಆಧರಿಸಿದೆ.
    • ಹಿಂದಿ, ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.
'ದಿ ಗೋಟ್ ಲೈಫ್' ಸಿನಿಮಾದ 2ನೇ ಪೋಸ್ಟರ್ ರಿಲೀಸ್: ರಗಡ್ ಲುಕ್’ನಲ್ಲಿ ಕಾಣಿಸಿಕೊಂಡ ಸಲಾರ್ ಸ್ಟಾರ್ ಪೃಥ್ವಿರಾಜ್  title=
The Goat Life

Prithviraj Sukumaran: ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ 'ದಿ ಗೋಟ್ ಲೈಫ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್, ಅಮಲಾ ಪೌಲ್, ಕೆಆರ್ ಗೋಕುಲ್, ಅರಬ್ ಖ್ಯಾತ ನಟರಾದ ತಾಲಿಬ್ ಅಲ್ ಬಲೂಶಿ, ರಿಕ್ ಔಬೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಧೋನಿಯ ಶ್ರೇಷ್ಠ ದಾಖಲೆ ಬ್ರೇಕ್: ಇನ್ಮುಂದೆ ಭಾರತದ ಅತ್ಯಂತ ಯಶಸ್ವಿ T20 ನಾಯಕ ರೋಹಿತ್ ಶರ್ಮಾ

ಈ ಚಲನಚಿತ್ರವು ಬೆಂಜಮಿನ್ ಅವರ ಪ್ರಶಸ್ತಿ ವಿಜೇತ ಕಾದಂಬರಿ ‘ಗೋಟ್ ಲೈಫ್'ನ್ನು ಆಧರಿಸಿದೆ. ಇನ್ನು ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನ ಮಾಡುತ್ತಿದ್ದರೆ, ವಿಷುಯಲ್ ರೊಮ್ಯಾನ್ಸ್ ಬ್ಯಾನರ್ ಬಿಗ್ ಬಜೆಟ್’ನೊಂದಿಗೆ ಈ ಸಿನಿಮಾವನ್ನು ನಿರ್ಮಿಸುತ್ತಿದೆ.

ಏಪ್ರಿಲ್ 10 ರಂದು, "ದಿ ಗೋಟ್ ಲೈಫ್" ಚಲನಚಿತ್ರವು ಮಲಯಾಳಂ ಸೇರಿ ಹಿಂದಿ, ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

“ಇದು ನೋಡಲೇಬೇಕಾದ ಸಿನಿಮಾ” ಎನ್ನುತ್ತಾ ಬಾಲಿವುಡ್ ಸ್ಟಾರ್ ಹೀರೋ ರಣವೀರ್ ಸಿಂಗ್ "ದಿ ಗೋಟ್ ಲೈಫ್" ಚಿತ್ರದ ಎರಡನೇ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಸೆಕೆಂಡ್ ಲುಕ್ ಪೋಸ್ಟರ್ ಭಾವನಾತ್ಮಕವಾಗಿದೆ. ಅಂದಹಾಗೆ ಪೃಥ್ವಿರಾಜ್ ಸುಕುಮಾರನ್ ನಜೀರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: BBK 10: ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಓಟ್ ಪಡೆಯುತ್ತಿರೋದು ಈ ಸ್ಪರ್ಧಿಯೇ: ಟಾಪ್ 5ರಲ್ಲಿ ಸ್ಥಾನ ಪಕ್ಕಾ! ವಿನ್ನರ್ ಕೂಡ ಇವರೇ..!

90ರ ದಶಕದಲ್ಲಿ ಕೇರಳವನ್ನು ತೊರೆದು ಜೀವನೋಪಾಯ ಅರಸಿ ವಿದೇಶಕ್ಕೆ ವಲಸೆ ಬಂದ ನಜೀಬ್ ಎಂಬ ಯುವಕನ ಬದುಕಿನ ಕಥೆಯನ್ನು ನೈಜ ಘಟನೆಗಳನ್ನಾಧರಿಸಿ “the goat life” ಸಿನಿಮಾ ಮೂಡಿ ಬರುತ್ತಿದೆ. ಇದು ಸಂಪೂರ್ಣವಾಗಿ ಮರುಭೂಮಿಯಲ್ಲಿ ತಯಾರಾದ ಮೊದಲ ಭಾರತೀಯ ಚಿತ್ರ ಎಂಬುದು ಗಮನಾರ್ಹ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News