Beggar viral video : ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಶುಭದೀಪ್ ಪಾಲ್ ಒಂದು ದಿನ ಭಿಕ್ಷುಕನಾಗುವ ಪ್ರಯೋಗವನ್ನು ಮಾಡಿದ್ದಾರೆ. ದಿನದ ಕೊನೆಗೆ ಈತ ಗಳಿಸಿದ ಹಣವನ್ನು ನೋಡಿ.. ಏನೂ ಕೆಲಸ ಮಾಡದೆ ಇಷ್ಟು ಹಣವನ್ನು ಸರಳವಾಗಿ ಗಳಿಸಬಹುದುದೇ..? ಅಂತ ನೆಟ್ಟಿಗರು ಶಾಕ್ ಆಗಿದ್ದಾರೆ..
ಹೌದು.. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಲು ಕೆಲ ಯುವಕರು ಏನನ್ನಾದರೂ ಮಾಡ್ತಾರೆ.. ಇತ್ತೀಚೆಗೆ ಒಬ್ಬ ಹುಡುಗ ಅದನ್ನೇ ಮಾಡಿದ್ದಾನೆ. ಒಂದು ದಿನ ಭಿಕ್ಷುಕನಾಗಿ ದಿನವಿಡೀ ಹಣಕ್ಕಾಗಿ ಜನರಲ್ಲಿ ಭಿಕ್ಷೆ ಬೇಡಿದ್ದಾನೆ... ಕೊನೆಗೆ ಈತನ ಸಂಪಾದನೆಯನ್ನು ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ..
ಇದನ್ನೂ ಓದಿ:ನಟಿ ಸಮಂತಾ ಕಿಡ್ನಾಪ್..! ಸ್ಟಾರ್ ನಿರ್ಮಾಪಕರಿಂದ ಹೀರೋಯಿನ್ ಅಪಹರಣ..
ಶುಭದೀಪ್ ಪಾಲ್ (ಮೂಸಾ ಜಿಂದಾ ಹೈ) ಕಂಟೆಂಟ್ ರಚನೆಕಾರ. ಆಗಾಗ ಚಾಲೆಂಜಿಂಗ್ ವಿಡಿಯೋಗಳನ್ನು ಮಾಡುವ ಮೂಲಕ ವೈರಲ್ ಆಗುತ್ತಿರುತ್ತಾನೆ. ಇತ್ತೀಚೆಗೆ ಈ ಯುವಕ ಭಿಕ್ಷುಕನಾಗಿ ಭಿಕ್ಷಾಟನೆ ಮಾಡಿದ್ದಾನೆ. "ಇಂದು ನಾನು ಭಿಕ್ಷೆ ಬೇಡುವ ಮೂಲಕ ದಿನಕ್ಕೆ ಎಷ್ಟು ಹಣವನ್ನು ಸಂಗ್ರಹಿಸಬಹುದು ಎಂಬುದನ್ನು ನೋಡಲಿದ್ದೇನೆ" ಅಂತ ವಿಡಿಯೋ ಸಹ ಹಂಚಿಕೊಂಡಿದ್ದಾನೆ..
ಹರಿದ ಬಟ್ಟೆ ಧರಿಸಿ, ಮೊದಲು ಜನನಿಬಿಡ ರಸ್ತೆಗೆ ಹೋಗಿ ಬೈಕ್ ಸವಾರರಲ್ಲಿ ಹಣ ಕೇಳತೊಡಗಿದರು. ಆದರೆ.. ಏನೂ ಸಿಗಲಿಲ್ಲ. ನಂತರ ಅವರು ರೈಲು ನಿಲ್ದಾಣಕ್ಕೆ ಹೋಗಿ.. ಹಣ ಭೀಕ್ಷೆ ಕೇಳಿದಾಗ.. ಹಣ ಬರಲು ಪ್ರಾರಂಭವಾಗುತ್ತದೆ. ಆದರೆ ಕೆಲವರು ನೀನು ಗಟ್ಟಿಮುಟ್ಟಾಗಿ ಇದ್ದೀಯಾ ದುಡಿದು ತಿನ್ನು ಅಂತ ಬೈಯುತ್ತಾರೆ.. ಕೆಲವು ಹಣ ನೀಡುತ್ತಾರೆ..
ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಭವ್ಯಾಗೌಡ ಔಟ್..!? ಸ್ಟ್ರಾಂಗ್ ಸ್ಪರ್ಧಿ, ಈ ವಾರ ಎಲಿಮಿನೇಟ್ ಆಗಲು ಕಾರಣವೇನು ಗೊತ್ತೆ..?
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಡಿಯೋಗೆ 15 ಲಕ್ಷ ವೀಕ್ಷಣೆ ಬಂದಿವೆ.. ಬಡವರಿಂದ 90 ರೂಪಾಯಿಗಳನ್ನು ಸುಲಿಗೆ ಮಾಡಿದೆ.. ಅಂತ ಕೆಲವು ಈತನ್ನು ಬೈದರೆ.. ಇನ್ನೂ ಕೆಲವರು ಎನೂ ಕೆಲಸ ಮಾಡಡೆ ಭೀಕ್ಷೆ ಭೇಡಿ ಇಷ್ಟು ಹಣ ಬರುತ್ತೆ.. ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ.. ಕೊನೆಗೆ ಶುಭದೀಪ್ ಬಂದ ಹಣವನ್ನು ಅಲ್ಲೇ ಇದ್ದಿ ಭಿಕ್ಷುಕಿಗೆ ನೀಡಿದ್ದಾನೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.