Kannada New Film: ಸದ್ಯದಲ್ಲೇ ತೆರೆಯ ಮೇಲೆ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್”

RadhaSearching Ramana Missing: ಸ್ಯಾಂಡಲ್ವುಡ್‌ ಸಿನಿ ರಂಗ ದಿನದಿಂದ ದಿನಕ್ಕೆ ಎತ್ತರ ಮಟ್ಟದಲ್ಲಿ ಬೆಳೆಯುತ್ತಿದೆ. ಅದೇ ಸಾಲಿನಲ್ಲಿ ಇದೀಗ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಹೊಸ ಸಿನಿಮಾ ತೆರೆ ಮೇಲೆ ಬರಲು ಸಜ್ಜಾಗಿದೆ.

Written by - Zee Kannada News Desk | Last Updated : May 26, 2023, 10:36 AM IST
  • ಸದ್ಯದಲ್ಲೇ ತೆರೆ ಮೇಲೆ ʼರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ʼ ಹೊಸ ಸಿನಿಮಾ
  • ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ವಸಿಷ್ಠ ಸಿಂಹ
  • ಪ್ರೇಮಕತೆಯುಳ್ಳ ಸಂಜನ ಬುರ್ಲಿ ನಟನೆಯ ಸಿನಿಮಾ
Kannada New Film: ಸದ್ಯದಲ್ಲೇ ತೆರೆಯ ಮೇಲೆ “ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್” title=

ಬೆಂಗಳೂರು: ಸ್ಯಾಂಡಲ್ವುಡ್‌ ಸಿನಿ ರಂಗ ದಿನದಿಂದ ದಿನಕ್ಕೆ ಎತ್ತರ ಮಟ್ಟದಲ್ಲಿ ಬೆಳೆಯುತ್ತಿದೆ. ಹೊಸ ಮುಖಗಳು ಬಣ್ಣ ಹಚ್ಚಿ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಹಳೆ ತಂಡದ ಹೊಸ ಪ್ರತಿಭೆಗಳು ನಾ ಮುಂದು ತಾ ಮುಂದು ಎಂಬಂತೆ ಸಿನಿಮಾ ಮಾಡುವುದರಲ್ಲಿ ಬ್ಯೂಸಿಯಾಗಿದ್ದಾರೆ.

ಅದೇ ಸಾಲಿನಲ್ಲಿ ಇದೀಗ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಹೊಸ ಸಿನಿಮಾ ತೆರೆ ಮೇಲೆ ಬರಲು ಸಜ್ಜಾಗಿದೆ. ಯುವ ನಿರ್ದೇಶಕ ಎಂ. ಎನ್‌ ಶ್ರೀಕಾಂತ್‌ ನಿರ್ದೇಶನದ ಈ ಚಿತ್ರದಲ್ಲಿ ,  ಸಂಜನ ಬುರ್ಲಿ ರಾಧಾ ಪಾತ್ರಧಾರಿಯಾಗಿ,ರಾಘವ್ ರಮಣನಾಗಿ ನಟಿಸಿದ್ದಾರೆ.

ಇದನ್ನೂ ಓದಿ: Sarath Babu Movie: ʼಅಮೃತವರ್ಷಿಣಿʼ ಖ್ಯಾತಿಯ ಶರತ್‌ ಬಾಬು ಹಿಟ್‌ ಸಿನಿಮಾಗಳ ಲಿಸ್ಟ್‌..! ಇಲ್ಲಿದೆ ನೋಡಿ..

ಕೆಲವು ತಿಂಗಳ ಹಿಂದೆ ಈ ಚಿತ್ರದ  ಟ್ರೈಲರ್ ರನ್ನು ವಸಿಷ್ಠ ಸಿಂಹ ಹಾಗೂ ಮಾಜಿ ಪೊಲೀಸ್ ಆಯುಕ್ತರು ಬಿಡುಗಡೆ ಮಾಡಿದ್ದರು. ಸಿನಿಮಾದ ಟ್ರೈಲರ್ ತುಸು ಸದ್ದು ಮಾಡಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ. ಇದೊಂದು ಕುತೂಹಲಕಾರಿ ಪ್ರೇಮಕತೆಯುಳ್ಳ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್ ಹಾಗೂ ಟರ್ನ್​ಗಳಿವೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. 

ಇದನ್ನೂ ಓದಿ: Abhishek Ambareesh-Aviva : ಅಭಿಷೇಕ್ ಅಂಬರೀಶ್-ಅವಿವಾ ಮದುವೆ ಡೇಟ್ ಫಿಕ್ಸ್ ! ಯಾವಾಗ ಗೊತ್ತಾ?

ಸಾನ್ವಿ ಪಿಕ್ಚರ್ಸ್ & ಅನಿಮೇಷನ್ಸ್ ಲಾಂಛನದಲ್ಲಿ ಯಶಸ್ವಿ ಶಂಕರ್ ಹಾಗೂ ಸವಿತಾ ಯಶಸ್ವಿ ನಿರ್ಮಾಣ ಮಾಡಿರುವ   ಈ ಚಿತ್ರದಲ್ಲಿ ,  ನವನೀತ್ ಚರಿ ಸಂಗೀತ ನಿರ್ದೇಶನ ಹಾಗೂ ವಿಶ್ವಜಿತ್ ರಾವ್ ಛಾಯಾಗ್ರಹಣದಲ್ಲಿ ಮೂಡಿದೆ. ಸದ್ಯ ಪ್ರೇಮ ಕಥೆಯುಳ್ಳ ಈ ಚಿತ್ರವು ಜೂನ್ 2 ಕ್ಕೆ ತೆರೆಗೆ ಬರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News