Vijay Thalapathy Politics Entry: ನಟ ವಿಜಯ್ ತಮಿಳುನಾಡು ರಾಜಕೀಯ ಪ್ರವೇಶಿಸುವ ಬಗ್ಗೆ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಚುನಾವಣಾ ಆಯೋಗದಲ್ಲಿ ಪಕ್ಷದ ಹೆಸರನ್ನು ತಮಿಳಗ ವೆಟ್ರಿ ಕಳಗಂ ಎಂದು ನೋಂದಾಯಿಸಲು ಅರ್ಜಿ ಸಲ್ಲಿಸಿದ್ದು, ಸಿನಿಮಾ ಕೆಲಸ ಮುಗಿಸಿ ರಾಜಕೀಯ ಕ್ಷೇತ್ರಕ್ಕೆ ಬರುವುದಾಗಿ ಘೋಷಿಸಿದ್ದಾರೆ. ಪೂರ್ಣಾವಧಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ವಿಜಯ್, 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ಘೋಷಿಸಿದ್ದಾರೆ.
ರಾಜಕೀಯ ಪಕ್ಷವೊಂದಕ್ಕೆ ಪಕ್ಷದ ಧ್ವಜ, ನೀತಿ, ಚಿಹ್ನೆ ಸೇರಿದಂತೆ ಎಲ್ಲ ಮೂಲಭೂತ ಹಾಗೂ ಆರಂಭಿಕ ಪೂರ್ವಭಾವಿ ಕೆಲಸಗಳನ್ನು ಲೋಕಸಭಾ ಚುನಾವಣೆಯ ನಂತರ ಒಂದೊಂದಾಗಿ ಮಾಡಲಿದ್ದು, ನೇರವಾಗಿ ಜನರನ್ನು ಭೇಟಿ ಮಾಡಿ ಪೂರ್ಣಾವಧಿ ರಾಜಕೀಯ ಆರಂಭಿಸುವುದಾಗಿ ವಿಜಯ್ ಹೇಳಿದರು. ವಿಜಯ್ ತಮ್ಮ ಹೇಳಿಕೆಯಲ್ಲಿ ತಮ್ಮ ರಾಜಕೀಯ ಪಯಣ ಹೇಗಿರುತ್ತದೆ ಮತ್ತು ಪಕ್ಷದ ರಾಜಕೀಯೀಕರಣದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:Poonam Pandey alive: ಪೂನಂ ಪಾಂಡೆ ಬದುಕಿದ್ದಾರಾ? ಸಾವಿನ ಸುದ್ದಿ ಸುಳ್ಳೇ.!
ಜನರನ್ನು ವಿಭಜಿಸುವ ಜಾತಿ, ಧರ್ಮದ ಒಡಕುಗಳ ವಿರುದ್ಧ ಭ್ರಷ್ಟಾಚಾರ ಮುಕ್ತ ತಮಿಳುನಾಡು ನಿರ್ಮಾಣವೇ ನನ್ನ ರಾಜಕೀಯ ಪಯಣದ ಗುರಿ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆ ನಂತರ ವಿಧಾನಸಭೆ ಚುನಾವಣೆಗೆ 2 ವರ್ಷ ಗ್ಯಾಪ್ ಇರುವುದರಿಂದ ಆ ಸಮಯದಲ್ಲಿ ತಮ್ಮ ಪಕ್ಷ ಕಟ್ಟಲಿದ್ದಾರೆ. ವಿಜಯ್ ಇನ್ನು ಒಂದು ಸಿನಿಮಾ ಬಾಕಿ ಇರುವ ಕಾರಣ ಆ ಕೆಲಸಗಳನ್ನು ಮುಗಿಸಿ ಪೂರ್ಣಾವಧಿ ರಾಜಕೀಯ ಪಯಣ ಆರಂಭಿಸಲಿದ್ದಾರೆ.
ಹೀಗಿರುವಾಗ ವಿಜಯ್ ಅವರ ರಾಜಕೀಯ ಸಲಹೆಗಾರರು ಯಾರು? ಅವರಿಗೆ ಈ ರಾಜಕೀಯ ಸಲಹೆಗಳನ್ನು ನೀಡುತ್ತಿರುವವರು ಯಾರು? ಎಂಬ ಪ್ರಶ್ನೆ ಗಂಭೀರವಾಗಿ ಎದ್ದಿದೆ. ಕೆಲ ವರ್ಷಗಳ ಹಿಂದೆ ವಿಜಯ್ ಅವರು ಚುನಾವಣಾ ರಣತಂತ್ರ ರೂಪಿಸಿದ್ದ ಪ್ರಶಾಂತ್ ಕಿಶೋರ್ ಸೇರಿದಂತೆ ಹಲವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಪ್ರಶಾಂತ್ ಕಿಶೋರ್ ಕೂಡ ವಿಜಯ್ ಭೇಟಿಯ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ, ವಿಜಯ್ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ, ಬಹಿರಂಗಪಡಿಸಿಲ್ಲ. ವಿಜಯ್ ಗುಟ್ಟಾಗಿಟ್ಟಿದ್ದಾರೆ. ಆ ರಾಜಕೀಯ ಬಿಂದು ಯಾರು? ತಂತ್ರಗಾರ ಯಾರು? ಎಂಬ ವಿಚಾರ ಇನ್ನೂ ರಹಸ್ಯವಾಗಿದೆ.
ಇದನ್ನೂ ಓದಿ:ಶ್ರೀದೇವಿ, ರಜನಿ ಜೊತೆ ನಟಿಸಿದ ಈ ಬಾಲಕ ಯಾರೆಂದು ಗುರುತಿಸಿ.. ಸದ್ಯ ಬಾಲಿವುಡ್‌ನ ಸ್ಟಾರ್ ನಟ ಈತ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.