ದುಬಾರಿ ಲಿಯೋ ಟಿಕೆಟ್:‌ ಐಮ್ಯಾಕ್‌ ಥಿಯೇಟರ್‌ನಲ್ಲೂ 75%ಟಿಕೆಟ್ ದರ ಹೆಚ್ಚಳ

Leo Ticket Cost: ಸದ್ಯ ಲಿಯೋ ಚಿತ್ರದ ಟಿಕೆಟ್ ಪ್ರೀಬುಕಿಂಗ್‌ ಚೆನ್ನೈನಲ್ಲಿ ಪ್ರಾರಂಭವಾಗುವುದಕ್ಕಿಂತ ಮುಂಚೆ ಬೆಂಗಳೂರಿನಲ್ಲಿ ಓಪನ್‌ ಆಗಿದೆ. ಬೆಂಗಳೂರಿನಲ್ಲಿ ಈಗಾಗಲೇ  900 ಹೆಚ್ಚು ಶೋಗಳು ಈ ಸಿನಿಮಾಗೆ ಸಿಕ್ಕಿದ್ದು, ಅದರಲ್ಲಿ 80% ಶೋಗಳು ಭರ್ತಿಯಾಗಿವೆ.

Written by - Yashaswini V | Last Updated : Oct 17, 2023, 04:03 PM IST
  • ಚೆನ್ನೈನಲ್ಲಿ 'ಲಿಯೋ' ಸಿನಿಮಾದ ಟಿಕೆಟ್ ದರ 190 ರೂ ಇದೆ.
  • ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಿದರೂ, ಟಿಕೆಟ್ ದರ 200 ರೂ. ದಾಟುವುದಿಲ್ಲ.
  • ಆದರೆ ಬೆಂಗಳೂರಿನಲ್ಲಿ ಈ ಚಿತ್ರದ ಟಿಕೆಟ್ ದರ ಕೇಳಿದರೆ ಶಾಕ್‌ ಆಗುತ್ತೆ...
ದುಬಾರಿ ಲಿಯೋ ಟಿಕೆಟ್:‌ ಐಮ್ಯಾಕ್‌ ಥಿಯೇಟರ್‌ನಲ್ಲೂ 75%ಟಿಕೆಟ್ ದರ ಹೆಚ್ಚಳ title=

Leo Ticket Cost: ಲಿಯೋ... ಬಹು ನಿರೀಕ್ಷಿತ ಸಿನಿಮಾ. ಇದೇ ವಾರ ವಿಶ್ವಾದ್ಯಂತ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಸಿನಿಮಾ ಟಿಕೆಟ್ ಬುಕಿಂಗ್‌ ಭಾರತದಲ್ಲಿ ಒಪನ್‌ ಆಗುವುದಗಿಂತ ಮುಂಚೆ ಯುಎಸ್‌ಎ ಹಾಗೂ ಯುಕೆನಲ್ಲಿ ತೆರೆದಿದ್ದು,ಟಿಕೆಟ್‌ಗಳು ಸೇಲ್‌ ಆಗಿದೆ. ಹಾಗೆ ಸದ್ಯ ಚೆನೈಗೂ ಮುಂಚೆ ಬೆಂಗಳೂರಿನಲ್ಲಿ ಟಿಕೆಟ್‌ ಬುಕಿಂಗ್‌ ಒಪನ್‌ ಆಗಿದ್ದು, ಟಿಕೆಟ್‌ ಬೆಲೆ ಕೇಳಿದರೆ ಶಾಕ್‌ ಆಗುವುದು ಖಂಡಿತ. ಹಾಗಾದ್ರೆ ಲಿಯೋ ಟಿಕೆಟ್‌ ಬೆಲೆ ಎಷ್ಟು ಅಂತ ತಿಳಿಯಲು ಕಂಪ್ಲೀಟ್‌ ಡಿಟೇಲ್ಸ್‌ ನೋಡಿ.

'ಲಿಯೋ' ದಳಪತಿ ವಿಜಯ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ, ಇದೇ ಆಕ್ಟೋಬರ್‌ 19ರಂದು ವಿಶ್ವಾದ್ಯಂತ ತೆರೆಕಾಣ್ತಾಯಿದೆ. ಈ ಚಿತ್ರ ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ತೆರೆ ಕಾಣ್ತಾಯಿದೆ. ಈ ಸಿನಿಮಾದ ಪ್ರೀ ಬುಕ್ಕಿಂಗ್ ಟಿಕೆಟ್ಸ್‌ ಯುಎಸ್‌ಎ ಹಾಗೂ ಯುಕೆನಲ್ಲಿ ಮಾರಾಟವಾಗಿದ್ದು, ಸಿನಿಮಾ ಬಿಡುಗಡೆಗಿಂತ ಮುಂಚೆ ಚಿತ್ರತಂಡ ಕೋಟಿ ಕೋಟಿ ಹಣ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದೆ. 

ಸದ್ಯ ಲಿಯೋ ಚಿತ್ರದ ಟಿಕೆಟ್ ಪ್ರೀಬುಕಿಂಗ್‌ ಚೆನ್ನೈನಲ್ಲಿ ಪ್ರಾರಂಭವಾಗುವುದಕ್ಕಿಂತ ಮುಂಚೆ ಬೆಂಗಳೂರಿನಲ್ಲಿ ಓಪನ್‌ ಆಗಿದೆ. ಬೆಂಗಳೂರಿನಲ್ಲಿ ಈಗಾಗಲೇ  900 ಹೆಚ್ಚು ಶೋಗಳು ಈ ಸಿನಿಮಾಗೆ ಸಿಕ್ಕಿದ್ದು, ಅದರಲ್ಲಿ 80% ಶೋಗಳು ಭರ್ತಿಯಾಗಿವೆ. ಈ ಸಿನಿಮಾ ಗ್ರಾಂಡ್‌ ಆಗಿ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಬೆಂಗಳೂರಿನಲ್ಲಿ ಚಿತ್ರದ ಟಿಕೇಟ್‌ ಬುಕಿಂಗ್‌ ಸಹ ದೊಡ್ಡ ಪ್ರಮಾಣದಲ್ಲಿ ಆಗುತ್ತಿದ್ದು, ಜೊತೆಗೆ ಟಿಕೆಟ್‌ ದರ ದೊಡ್ಡ ಸಮಸ್ಯೆ ಉಂಟುಮಾಡಿದೆ. ಲಿಯೋ ಚಿತ್ರದ ಟಿಕೇಟ್‌ ದರ ಗಗನಕ್ಕೆ ಏರಿದೆ. ಈ ಪರಿಸ್ಥಿತಿ ಬರಿ ಬೆಂಗಳೂರಿನಲ್ಲಿ ಮಾತ್ರ. 

ಇದನ್ನೂ ಓದಿ- ನಟ ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಭಾವನಾತ್ಮಕ ಪೋಸ್ಟ್!

ಚೆನ್ನೈನಲ್ಲಿ 'ಲಿಯೋ' ಸಿನಿಮಾದ ಟಿಕೆಟ್ ದರ 190 ರೂ ಇದೆ. ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಿದರೂ, ಟಿಕೆಟ್ ದರ 200 ರೂ. ದಾಟುವುದಿಲ್ಲ. ಆದರೆ ಬೆಂಗಳೂರಿನಲ್ಲಿ ಈ ಚಿತ್ರದ ಟಿಕೆಟ್ ದರ ಕೇಳಿದರೆ ಶಾಕ್‌ ಆಗುವುದಂತು ಖಂಡಿತ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್‌ ಹಾಗು ಥೀಯೆಟರ್‌ ಎರಡೂ ಕಡೆನೂ ಟಿಕೆಟ್‌ ದರ ಹೆಚ್ಚಳವಾಗಿದೆ. ಲಿಯೋ ಕನ್ನಡ ಡಬ್ಬಿಂಗ್‌ ವರ್ಷನ್‌ಗೆ ಜಾಸ್ತಿ ಶೋಗಳು ಸಿಕ್ಕಿಲ್ಲ. ಲಿಯೋ ಸಿನಿಮಾ ಐಮ್ಯಾಕ್ಸ್‌ನ ಫಾರ್ಮೆಟ್‌ನ ಟಿಕೇಟ್‌ ದರ ಕೇಳಿದರೆ ಬೆರಗಾಗುತ್ತೀರಾ... 

ಬೆಂಗಳೂರಿನ ಸಿಂಗಲ್ ಸ್ಕ್ರೀನ್‌ನಲ್ಲೂ ಥಿಯೇಟರ್‌ನಲ್ಲಿ ಟಿಕೆಟ್ ದರ 150-200 ರೂ. ಇರುತ್ತದೆ. ಆದರೆ 'ಲಿಯೋ' ರಿಲೀಸ್ ಆಗುತ್ತಿರುವ ಕೆಲವು ಥಿಯೇಟರ್‌ಗಳಲ್ಲಿ ಮಾತ್ರ ಟಿಕೆಟ್ ದರವು 300-400 ರೂ. ತಲುಪಿದೆ.  ಇದು ಥೀಯೆಟರ್‌ನ ಕಥೆಯಾದರೆ, ಇನ್ನು ಮಲ್ಟಿಪ್ಲೆಕ್ಸ್‌ನಲ್ಲಿ 'ಲಿಯೋ' ಸಿನಿಮಾದ ಟಿಕೆಟ್ 2 ಸಾವಿರ ರೂ. ಗಡಿ ದಾಟಿದೆ. ಕೆಲವು ಮಲ್ಟಿಪ್ಲೆಕ್ಸ್‌ನ ಗೋಲ್ಡ್‌ ಕ್ಲಾಸ್‌ ಸ್ಕ್ರೀನ್‌ಗಳ ಟಿಕೆಟ್‌ ದರ 2,400 ರೂ. ಆಗಿದೆ. ಮಾಮೂಲಿಯಾಗಿ ಹಲವು ಮಲ್ಟಿಪ್ಲೆಕ್ಸ್‌ನಲ್ಲಿ 1500-1800 ರೂ. ದರವನ್ನು ಟಿಕೆಟ್‌ಗೆ ನಿಗದಿ ಮಾಡಲಾಗಿದೆ. 

ಹಲವು ವರ್ಷಗಳ ಹಿಂದೆ ನಿಗದಿತ ಟಿಕೆಟ್‌ ದರದ ಕುರಿತು ಸರ್ಕಾರ ಆದೇಶ ಮಾಡಿತ್ತು. ಆದರೆ ಸ್ವಲ್ಪ ಕಾಲ ಮಾತ್ರ ಜಾರಿಯಲ್ಲಿದ್ದ ಆ ನಿಯಮವನ್ನು ಗಾಳಿಗೆ ತೂರಲಾಗಿದೆ. ಈ ಕುರಿತು ಕರ್ನಾಟಕ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ಕರ್ನಾಟಕದ ಸಿನಿಮಾ ಪ್ರೇಕ್ಷಕರಿಗೆ ಮತ್ತು ಕನ್ನಡ ಸಿನಿಮಾಗಳಿಗೆ ಆಗುತ್ತಿರುವ ತೊಂದರೆಯನ್ನು ಬಗೆಹರಿಸಬೇಕು. ಕನ್ನಡದ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ರಿಲೀಸ್‌ ಆದಾಗ ಟಿಕೆಟ್ ದರ ಮೊದಲನೆಯ ವಾರ 500ರಿಂದ 1000ರೂ ವರೆಗು ಇತ್ತು. ಆದರೆ ನಂತರ ಟಿಕೆಟ್ ದರ ಕಡಿಮೆ ಮಾಡಿದರು. ಲಿಯೋ ಟಿಕೆಟ್ ಬುಕಿಂಗ್‌ ಬರಿ ಮೊದಲನೆಯ ದಿನದ ಬುಕಿಂಗ್‌ನ ಕಥೆ. ಬೇರೆ ದಿನ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆಯೆಂದು ಕಾದು ನೋಡಬೇಕು.

ಇದನ್ನೂ ಓದಿ- Keerthy Suresh: ಒಂದು ಚಿತ್ರಕ್ಕೆ 4 ಕೋಟಿ ಸಂಭಾವನೆ.. ಕೀರ್ತಿ ಸುರೇಶ್ ಒಟ್ಟು ಆಸ್ತಿ ಎಷ್ಟು?

ಲಿಯೋ' ಸಿನಿಮಾವು ಕನ್ನಡಕ್ಕೂ ಡಬ್ ಆಗಿದ್ದರು, ಕನ್ನಡ ಡಬ್ಬಿಂಗ್ ವರ್ಷನ್‌ಗೆ ಜಾಸ್ತಿ ಶೋ ಸಿಕ್ಕಿಲ್ಲ. ಇಲ್ಲಿಯವರೆಗೂ 'ಲಿಯೋ' ಕನ್ನಡ ವರ್ಷನ್‌ಗೆ  ಬೆಂಗಳೂರಿನಲ್ಲಿ ಕೇವಲ 10 ಶೋ ಮಾತ್ರ ಸಿಕ್ಕಿವೆ ಹಾಗೂ ಅದಕ್ಕೆ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಕೂಡ ಪ್ರೇಕ್ಷಕರ ಕಡೆಯಿಂದ ಸಿಕಿಲ್ಲ. ಹಲವು ಭಾಷೆಗೆ ಈ ಸಿನಿಮಾ ಡಬ್ ಆಗಿದ್ದರೂ, ಬೆಂಗಳೂರಿನಲ್ಲಿ ತಮಿಳು ವರ್ಷನ್‌ಗೆ 850+ ಶೋಗಳು ಸಿಕ್ಕಿವೆ.  ಪರ ಭಾಷಾ ಮಂದಿ ಕರ್ನಾಟಕವನ್ನು ತಮ್ಮ ದೊಡ್ಡ ಮಾರುಕಟ್ಟೆ ಕೇಂದ್ರವನ್ನಾಗಿ ಮಾಡಿಕೊಂಡು, ಒಳ್ಳೆಯ ಲಾಭವನ್ನಂತೂ ಪಡೆದು ಕೊಳ್ಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News