ದಾಖಲೆ ಬರೆದ 'ದಿ ವಿಲನ್': ಸುದೀಪ್, ಶಿವಣ್ಣನಿಗೆ ವಿಶೇಷ ಧನ್ಯವಾದ ತಿಳಿಸಿದ ಪ್ರೇಮ್

ತನ್ನ ಮೊದಲೇ ದಿನವೇ ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಸೃಷ್ಟಿಸಿದ ದಿ ವಿಲನ್.

Last Updated : Jun 30, 2018, 04:26 PM IST
ದಾಖಲೆ ಬರೆದ 'ದಿ ವಿಲನ್': ಸುದೀಪ್, ಶಿವಣ್ಣನಿಗೆ ವಿಶೇಷ ಧನ್ಯವಾದ ತಿಳಿಸಿದ ಪ್ರೇಮ್ title=

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ಅಭಿನಯದ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ 'ದಿ ವಿಲನ್' ಚಿತ್ರದ ಟೀಸರ್ ಬಿಡುಗಡೆಯಾದ ತನ್ನ ಮೊದಲೇ ದಿನವೇ ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಸೃಷ್ಟಿಸಿದ ದಿ ವಿಲನ್.

ಯ್ಯೂಟ್ಯೂಬ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ 10 ಲಕ್ಷ ವ್ಯೂ ತಲುಪಿದೆ. ಬಿಡುಗಡೆಯಾದ ಎರಡು ಟೀಸರ್ ಗಳಲ್ಲಿ ಒಂದು ಟೀಸರ್ 10 ಲಕ್ಷ ಹಾಗೂ ಇನ್ನೊಂದು ಟೀಸರ್ 15 ಲಕ್ಷ ತಲುಪಿದೆ. ಯ್ಯೂಟ್ಯೂಬ್ ನಲ್ಲಿ ಇದರ ಸ್ಕ್ರೀನ್ ಶಾಟ್ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಿರ್ದೇಶಕ ಪ್ರೇಮ್ ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದಿ ವಿಲನ್ ನ ಮೊದಲ ದಿನವು ಹೊಸ ದಾಖಲೆಯೊಂದಿಗೆ ಪೂರ್ಣಗೊಂಡಿತು. YouTube ಇತಿಹಾಸದಲ್ಲಿ ಮಿಲಿಯನ್ ವೀಕ್ಷಣೆಗಳನ್ನು ತಲುಪಿದೆ. ಡಾರ್ಲಿಂಗ್ ಸುದೀಪ್ ಹಾಗೂ ಶಿವಣ್ಣಗೆ ಧನ್ಯವಾದಗಳು ಹಾಗೂ ಎಲ್ಲ ವೀಕ್ಷಕರಿಗೂ ಧನ್ಯವಾದಗಳು. ನೀವು ನನ್ನ ಈ ದಿನವನ್ನು ವಿಶೇಷ ಮಾಡಿದ್ದೀರಿ. ಆಡಿಯೋ ಅತೀ ಶೀಘ್ರದಲ್ಲೇ ಬರಲಿದೆ ಎಂದು ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Trending News