Darshan 58th Movie: ಚಂದನವನದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದಂದು ಡೆವೆಲ್ ಚಿತ್ರದ ಪೋಸ್ಟರ್ ರಿಲೀಸ್ ಮಾಡುವುದರ ಜೊತೆಗೆ ತಮ್ಮ 58ನೇ ಚಿತ್ರದ ಅಪ್ಡೇಟ್ ಸಹ ನೀಡಲಿದ್ದಾರಂತೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Sandalwood : ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಎರಡು ದಶಕಗಳ ಬಳಿಕ ಸ್ಯಾಂಡಲ್ವುಡ್ನತ್ತ ಹೆಜ್ಜೆ ಹಾಕುವ ಮನಸ್ಸು ಮಾಡಿದ್ದಾರೆ. ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ʼಕೆಡಿʼ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜೋಗಿ ಪ್ರೇಮ್ ಸಿನಿಮಾಗಳು ಅಂದ್ರೆ ಸೌಂಡ್ ಸ್ವಲ್ಪ ಜಾಸ್ತಿನೇ ಇರುತ್ತೆ. ವಾಟ್ಸಾಪ್, ಫೇಸ್ಬುಕ್ ಬರೋಕು ಮುಂಚೆನೇ ಜೋಗಿ ಮೂಲಕ ನ್ಯಾಷನಲ್ ಲೆವಲ್ ನಲ್ಲಿ ಹವಾ ಎಬ್ಬಸಿದ್ದ ನಿರ್ದೇಶಕ ಜೋಗಿ ಪ್ರೇಮ್. ಹೀಗಿರುವಾಗ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿ ನಡೆಯುವಾಗ, ನೇಷನ್ ವೈಡ್ ಅಬ್ಬರ ಎಬ್ಬಿಸ್ಲಿಲ್ಲ ಅಂದ್ರೆ ಹೆಂಗೆ? ಹೀಗಾಗಿನೇ ಕೆಡಿ ಅಡ್ಡಾದಲ್ಲಿ ದೇಶವಾಸಿಗಳಿಗೆ ಪರಿಚಯ ಇರೋ ಮುಖಗಳಿಗೆ ಹೆಚ್ಚು ಆಧ್ಯತೆ ಕೊಡ್ತಿದ್ದಾರೆ ನಿರ್ದೇಶಕ ಪ್ರೇಮ್.
ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ. ಪಾತ್ರಕ್ಕೆ ಹೊಂದಿಕೆ ಆಗುವುದರಿಂದ ಅವರನ್ನು ಆಯ್ಕೆ ಮಾಡಲಿದ್ದೇವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಅವರೆಲ್ಲ ಯಾರು ಎಂಬುದನ್ನು ಹೇಳಲಿದ್ದೇವೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು.
ಏಕ್ ಲವ್ ಯಾ' ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಟಿ ರಕ್ಷಿತಾ ಸಹೋದರ ರಾಣಾ ಮೊದಲ ಸಿನಿಮಾದಲ್ಲೇ ಭರವಸೆ ಹುಟ್ಟು ಹಾಕಿದ್ದು ಗೊತ್ತೇ ಇದೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದ ಲವ್ ಕಹಾನಿಗೆ ಪ್ರೇಕ್ಷಕರು ಮೆಚ್ಚುಗೆ ಮುದ್ರೆ ಜೊತೆಗೆ ರಾಣಾ ನಟನೆಯನ್ನು ಮೆಚ್ಚಿ ಕೊಂಡಾಡಿದ್ರು. ನಿರ್ದೇಶಕ ಪ್ರೇಮ್ ಕುಲುಮೆಯಲ್ಲಿ ಪಳಗಿರೋ ರಾಣಾ ಚಂದನವನಕ್ಕೆ ಭರವಸೆಯ ನಟನಾಗೋ ಸಕಲ ಲಕ್ಷಣಗಳನ್ನು ಹೊಂದಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಅಷ್ಟಕ್ಕೂ ಪ್ರೇಮ್(Prem) ಸಿನಿಮಾ ಅಂದಮೇಲೆ ಒಂದಷ್ಟು ಸರ್ಪ್ರೈಸ್ ಇದ್ದೇ ಇರುತ್ತೆ. ಅದರಲ್ಲೂ ಪ್ರೇಮ್ ಸಿನಿಮಾಗಳಲ್ಲಿ ಮ್ಯೂಸಿಕ್ ಮೋಡಿ ಮಾಡದೇ ಇದ್ದರೆ ಅದು ಪ್ರೇಮ್ ಸಿನಿಮಾ ಅಲ್ಲ ಅನ್ನಬಹುದು. ಹೀಗೆ 'ಏಕ್ ಲವ್ ಯಾ' ಕೂಡ ಇಂಪಾದ ಸಂಗೀತದ ಜೊತೆಗೆ ಅಭಿಮಾನಿಗಳ ಮನಸ್ಸು ಗೆದ್ದಿದೆ. ಈ ಮೂಲಕ ಪ್ರೇಮ್ ಮತ್ತೆ ಸಕ್ಸಸ್ ಗಿಟ್ಟಿಸಿದ್ದಾರೆ.
ಸಿನಿಮಾ ಹಿಟ್ ಆಗಲು ಸೌಂಡ್ ಕ್ವಾಲಿಟಿ ತುಂಬಾನೆ ಮುಖ್ಯ. ಕೆಲವು ಬಾರಿ ಮ್ಯೂಸಿಕ್ನಿಂದಲೇ ಸಿನಿಮಾ ಹಿಟ್ ಆದ ಉದಾಹರಣೆಗಳಿವೆ. ಅದರಲ್ಲೂ ನಿರ್ದೇಶಕ ಪ್ರೇಮ್ ತಮ್ಮ ಸಿನಿಮಾಗಳಲ್ಲಿ ಸಂಗೀತಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಈಗಲೂ ಕೂಡ ಸಂಗೀತ ಆಧಾರಿತ ಚಿತ್ರವನ್ನು ಕನ್ನಡಿಗರ ಮುಂದಿಡಲು ಮುಂದಾಗಿದ್ದಾರೆ ಪ್ರೇಮ್. ಮ್ಯೂಸಿಕ್ ವಿಚಾರಕ್ಕೆ ಜೋಗಿ ಪ್ರೇಮ್ ಮಲ್ಟಿಪ್ಲೆಕ್ಸ್ಗಳ ವಿರುದ್ಧ ಸದ್ಯ ಗರಂ ಆಗಿದ್ದಾರೆ.
ಕಳೆದ ವಾರವಷ್ಟೇ ಬಿಡುಗಡೆಯಾದ 'ದಿ ವಿಲನ್' ಸಿನಿಮಾ ಥಿಯೇಟರ್ ಯಶಸ್ವೀ ಪ್ರದರ್ಶನ ಕಾಣುತ್ತಿರುವುದು ಒಂದೆಡೆಯಾದರೆ, ಇತ್ತ ಸೋಷಿಯಲ್ ಮೀಡಿಯಾದಲ್ಲಿ ಕೂಡ ಚಾಲ್ತಿಯಲ್ಲಿದೆ. ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.