Amitabh Bachchan ಜೊತೆ ಕುಳಿತ ಈ ಮಗು ಈಗ ಸೂಪರ್ ಸ್ಟಾರ್: ಯಾರೆಂದು ಗೆಸ್ ಮಾಡಿ ನೋಡೋಣ!

Actor Childhood Photo: ಈ ಸೂಪರ್ ಸ್ಟಾರ್ ಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಆದರೆ, ಈ ಮಗುವನ್ನು ಗುರುತಿಸುವಲ್ಲಿ ಅನೇಕರು ಸೋತು ಹೋಗಿದ್ದಾರೆ. ನೀವು ಹಿಂದಿ ಚಲನಚಿತ್ರಗಳ ಅಭಿಮಾನಿಯಾಗಿದ್ದರೆ, ಹತ್ತಿರದಲ್ಲಿ ಕುಳಿತಿರುವ ಮಗುವನ್ನು ಗುರುತಿಸಬಹುದು.

Written by - Bhavishya Shetty | Last Updated : Feb 24, 2023, 11:43 PM IST
    • ಬಾಲಿವುಡ್‌ ಚಕ್ರವರ್ತಿ ಅಮಿತಾಬ್ ಬಚ್ಚನ್ ಅವರ ಬ್ಲ್ಯಾಕ್ ಆಂಡ್ ವೈಟ್ ಫೋಟೋ ವೈರಲ್
    • ಅದರಲ್ಲಿ ಅವರು ಒಬ್ಬರೇ ಕಾಣಿಸುತ್ತಿಲ್ಲ. ಇಂದು ಬಾಲಿವುಡ್‌ನ ದೊಡ್ಡ ಸ್ಟಾರ್ ಆಗಿರುವ ವ್ಯಕ್ತಿಯೊಬ್ಬರು ಸಹ ಕುಳಿತಿದ್ದಾರೆ.
    • ಅಂದು ಮುದ್ದು ಕಂದಮ್ಮನಾಗಿದ್ದ ಈ ಸೂಪರ್ಸ್ಟಾರ್ ಯಾರೆಂದು ಗುರುತಿಸಬಲ್ಲಿರಾ?
Amitabh Bachchan ಜೊತೆ ಕುಳಿತ ಈ ಮಗು ಈಗ ಸೂಪರ್ ಸ್ಟಾರ್: ಯಾರೆಂದು ಗೆಸ್ ಮಾಡಿ ನೋಡೋಣ! title=
Hrithik Roshan

Actor Childhood Photo: ಬಾಲಿವುಡ್‌ ಚಕ್ರವರ್ತಿ ಅಮಿತಾಬ್ ಬಚ್ಚನ್ ಅವರ ಬ್ಲ್ಯಾಕ್ ಆಂಡ್ ವೈಟ್ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಒಬ್ಬರೇ ಕಾಣಿಸುತ್ತಿಲ್ಲ. ಇಂದು ಬಾಲಿವುಡ್‌ನ ದೊಡ್ಡ ಸ್ಟಾರ್ ಆಗಿರುವ ವ್ಯಕ್ತಿಯೊಬ್ಬರು ಸಹ ಕುಳಿತಿದ್ದಾರೆ. ಅಂದು ಮುದ್ದು ಕಂದಮ್ಮನಾಗಿದ್ದ ಈ ಸೂಪರ್ಸ್ಟಾರ್ ಯಾರೆಂದು ಗುರುತಿಸಬಲ್ಲಿರಾ?

ಇದನ್ನೂ ಓದಿ: ರಾತ್ರಿ 10 ಪೆಗ್-ಬೆಳಿಗ್ಗೆ ಎದ್ದು ಶತಕ: ಸರಾಸರಿಯಲ್ಲಿ ಸಚಿನ್’ಗಿಂತಲೂ ಮುಂದಿದ್ದ ಈ ಕ್ರಿಕೆಟಿಗನ ವೃತ್ತಿಜೀವನ 23ಕ್ಕೆ ಅಂತ್ಯ!

ಸೂಪರ್ ಸ್ಟಾರ್ ಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಆದರೆ, ಈ ಮಗುವನ್ನು ಗುರುತಿಸುವಲ್ಲಿ ಅನೇಕರು ಸೋತು ಹೋಗಿದ್ದಾರೆ. ನೀವು ಹಿಂದಿ ಚಲನಚಿತ್ರಗಳ ಅಭಿಮಾನಿಯಾಗಿದ್ದರೆ, ಹತ್ತಿರದಲ್ಲಿ ಕುಳಿತಿರುವ ಮಗುವನ್ನು ಗುರುತಿಸಬಹುದು. ಚಿತ್ರದಲ್ಲಿ, ಅಮಿತಾಬ್ ಬಚ್ಚನ್ ಕುರ್ಚಿಯ ಮೇಲೆ ಕುಳಿತುಕೊಂಡು ತಮ್ಮ ಸ್ಕ್ರಿಪ್ಟ್ ಅನ್ನು ಚರ್ಚಿಸುತ್ತಿರುವುದನ್ನು ನೀವು ನೋಡಬಹುದು. ಆದರೆ ಹತ್ತಿರದ ಕುರ್ಚಿಯ ಮೇಲೆ ಕುಳಿತಿರುವ ಚಿಕ್ಕ ಮಗುವು ಅವರನ್ನು ಬಹಳ ಪ್ರೀತಿಯಿಂದ ನೋಡುತ್ತಿದೆ.

ನೀವು ಇನ್ನೂ ಈ ಮಗುವನ್ನು ಗುರುತಿಸದಿದ್ದರೆ, ನಿಮಗೆ ಸುಳಿವು ನೀಡುತ್ತೇವೆ ನೋಡಿ. ಈ ಮಗು ಕೂಡ ಫೇಮಸ್ ಸ್ಟಾರ್ ಕಿಡ್. ನಟನೆ ಮತ್ತು ನೋಟದ ಜೊತೆಗೆ ಇಡೀ ಜಗತ್ತೇ ಇವರ ನೃತ್ಯಕ್ಕೆ ಫಿದಾ ಆಗಿದೆ. ಈ ಫೋಟೋ 1979 ರಲ್ಲಿ ಅಮಿತಾಬ್ ಬಚ್ಚನ್ ಅವರ 'ನಟ್ವರ್ಲಾಲ್' ಚಿತ್ರದ ಚಿತ್ರೀಕರಣದಲ್ಲಿ ಮೆಹಬೂಬ್ ಸ್ಟುಡಿಯೋದಲ್ಲಿದ್ದಾಗ ತೆಗೆದದ್ದಾಗಿದೆ. ಅವರ ಹತ್ತಿರ ಮೇಜಿನ ಮೇಲೆ 3 ಚಿಕ್ಕ ಮಕ್ಕಳು ಕುಳಿತಿದ್ದಾರೆ. ಮೊದಲ ಮಗು ಬೇರೆ ಯಾರೂ ಅಲ್ಲ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್. ಅಮಿತಾಬ್ ಬಚ್ಚನ್ ಅವರ ಜನ್ಮದಿನದಂದು ಹೃತಿಕ್ ರೋಷನ್ ಅವರೇ ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Business Tips: ಈ ಹುಲ್ಲಿನಿಂದ ರಾತ್ರೋರಾತ್ರಿ ಲಕ್ಷಾಧಿಪತಿಯಾಗಬಹುದು: ಈ ಕೃಷಿಗೆ ಬೇಕಾಗಿರುವುದು ಇದು ಮಾತ್ರ!

ಹೃತಿಕ್ ರೋಷನ್ 2000 ರಲ್ಲಿ ತಮ್ಮ ತಂದೆಯ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಿಸಲಾದ 'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅನೇಕ ಹಿಟ್ ಸಿನಿಮಾಗಳು ಹೃತಿಕ್ ಮಡಿಲಿಗೆ ಸೇರಿವೆ. ಆದರೆ, ಹೃತಿಕ್ ರೋಷನ್ ಕೊನೆಯದಾಗಿ ಸೈಫ್ ಅಲಿ ಖಾನ್ ಜೊತೆ ಕಾಣಿಸಿಕೊಂಡಿದ್ದ 'ವಿಕ್ರಮ್ ವೇದ' ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಈ ಚಿತ್ರವು ಅದೇ ಹೆಸರಿನ ದಕ್ಷಿಣದ ಚಲನಚಿತ್ರದ ಅಧಿಕೃತ ಹಿಂದಿ ರಿಮೇಕ್ ಆಗಿತ್ತು. ಇನ್ನು ಮುಂಬರುವ ಸಿನಿಮಾದ ಬಗ್ಗೆ ಮಾತನಾಡುವುದಾದರೆ, ಶೀಘ್ರದಲ್ಲೇ ಅವರು ದೀಪಿಕಾ ಪಡುಕೋಣೆ ಅವರೊಂದಿಗೆ 'ಫೈಟರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News