ಯು ಟ್ಯೂಬ್ ಮೇಲೆ ಸಕತ್ ವೈರಲ್ ಆಗುತ್ತಿದೆ ಈ ಹಾಡು

ಈ ಹಾಡನ್ನು 'ಏಕ ನಂಬರ್ ಪ್ರೊಡಕ್ಷನ್' ಬ್ಯಾನರ್ ಅಡಿ ನಿರ್ಮಿಸಲಾಗಿದೆ. ಈ ಹಾಡಿನಲ್ಲಿ ಎಜಾಜ್ ಖಾನ್, ಶಹರ್ ಆಫ್ಜಾ ಜೊತೆ ಕಾಣಿಸಿಕೊಂಡಿದ್ದಾರೆ.

Updated: Jan 7, 2020 , 08:53 PM IST
ಯು ಟ್ಯೂಬ್ ಮೇಲೆ ಸಕತ್ ವೈರಲ್ ಆಗುತ್ತಿದೆ ಈ ಹಾಡು

ನವದೆಹಲಿ: ಇತ್ತೀಚೆಗೆ ಇಂಟರ್ನೆಟ್ ಮೇಲೆ 'ಏಕ್ ನಂಬರ್ ಪ್ರೊಡಕ್ಷನ್' ಅಡಿ ನಿರ್ಮಾಣಗೊಂಡ 'ಪಲ್-ಪಲ್' ಹಾಡು ಯುವ ಪೀಳಿಗೆಗೆ ಎಷ್ಟೊಂದು ಇಷ್ಟವಾಗುತ್ತಿದೆ ಎಂದರೆ, ಬಿಡುಗಡೆಯಾದ ಕೇವಲ ಐದೇ ದಿನಗಳಲ್ಲಿ ಸುಮಾರು ಆರು ಲಕ್ಷಕ್ಕೂ ಅಧಿಕ ಜನರು ಈ ಹಾಡನ್ನು ವೀಕ್ಷಿಸಿದ್ದಾರೆ. ಯುವ ಜನರ ಹಾರ್ಟ್ ಬೀಟ್ ಎಂದೇ ಕರೆಯಲಾಗುವ ಎಜಾಜ್ ಖಾನ್ ತಮ್ಮ ಆಪ್ತ ಶಾದಾಬ್ ಸಿದ್ದಿಕಿ ಜತೆಗೂಡಿ ಈ ಹಾಡನ್ನು ನಿರ್ಮಿಸಿದ್ದಾರೆ. ಈ ಇಬ್ಬರ ಮಧ್ಯೆ ಇರುವ ಗೆಳೆತನವನ್ನು ಕೂಡ ನೀವು ಈ ಹಾಡಿನಲ್ಲಿ ನೋಡಬಹುದಾಗಿದೆ. ಈ ಹಾಡಿನಲ್ಲಿ ಶಹರ್ ಆಫ್ಜಾ , ಇಜಾಜ್ ಖಾನ್ ಅವರಿಗೆ ಸಾಥ್ ನೀಡಿದ್ದಾರೆ. ಹಾಡಿನಲ್ಲಿ ಇಬ್ಬರ ಕೆಮಿಸ್ಟ್ರಿಗೆ ಪ್ರೇಕ್ಷಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಹಾಡಿನಲ್ಲಿ ಎಜಾಜ್ ಖಾನ್ ಅವರ ಲುಕ್ ಗೂ ಕೂಡ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊದಲಿನಿಂದಲೂ ಕೂಡ ಎಜಾಜ್ ಖಾನ್ ಹಾಗೂ ಶಾದಾಬ್ ಸಿದ್ಧಿಕಿ ಉತ್ತಮ ಸ್ನೇಹಿತರಾಗಿದ್ದಾರೆ. ಅಷ್ಟೇ ಅಲ್ಲ ಎಜಾಜ್ ಖಾನ್, ಶಾದಾಬ್ ಸಿದ್ಧಿಕಿ ಅವರನ್ನು ತಮ್ಮ ಕಿರಿಯ ಸಹೋದರ ಎಂದು ಭಾವಿಸುತ್ತಾರೆ ಎಂದರೂ ಕೂಡ ತಪ್ಪಾಗಲಾರದು. ಅವರ ಮೇಲಿರುವ ಭರವಸೆಯ ಕಾರಣ ಎಜಾಜ್ ಖಾನ್ ಕೇವಲ ಈ ಹಾಡಿನ ನಿರ್ಮಾತರಾಗಿರದೆ ಹಾಡಿನಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಪ್ರೀತಿ ಮಾಡುವ ಎರಡು ಹೃದಯಗಳಿಗೆ ಈ ಹಾಡು ಜಾಸ್ತಿ ಇಷ್ಟವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯ ಈ ಹಾಡು ಭಾರಿ ವೈರಲ್ ಆಗುತ್ತಿದೆ.

ಈ ಹಾಡಿನ ನಿರ್ದೇಶನ ಹಾಗೂ ಗೀತ ರಚನೆಯ ಜವಾಬ್ದಾರಿ ಶಾದಾಬ್ ಸಿದ್ದಿಕಿ ಹೊತ್ತುಕೊಂಡಿದ್ದಾರೆ, ಚಂದನ್ ಸಕ್ಸೇನಾ ಹಾಡಿಗೆ ಸಂಗೀತ ನೀಡಿದ್ದಾರೆ. ದಾನಿಶ್ ಖಾನ್ ಎಡಿಟಿಂಗ್ ಜವಾಬ್ದಾರಿ ನಿಭಾಯಿಸಿದ್ದಾರೆ, ದಾನಿಶ್ ಖಾನ್ ಕ್ರಿಯೇಟಿವ್ ಡೈರೆಕ್ಟರ್ ಹಾಗೂ ನೂರ್ ಸಿದ್ದಿಕಿ ಕಾಸ್ಟಿಂಗ್ ಜವಾಬ್ದಾರಿ ನಿಭಾಯಿಸಿದ್ದಾರೆ.