ʼಕಲ್ಕಿʼಯಲ್ಲಿ ಪ್ರಭಾಸ್‌ ಜೊತೆ ನಟಿಸೋದು ಈ ಸ್ಟಾರ್‌ ಹೀರೋಯಿನ್..! ಯಾರು ಗೊತ್ತಾ?

Kalki 2898 AD : ಇತ್ತೀಚೆಗಷ್ಟೇ ಸಲಾರ್‌ ಸಿನಿಮಾದಿಂದ ಮಿಂಚಿದ್ದ ಪ್ರಭಾಸ್‌ ಸದ್ಯ ʼಕಲ್ಕಿʼ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.. ಈ ಚಿತ್ರದಲ್ಲಿ ಬಹುತೇಕ ಎಲ್ಲಾ ಚಿತ್ರರಂಗದ ಸ್ಟಾರ್ ನಟರು ನಟಿಸುತ್ತಿದ್ದು.. ನಾಯಕಿಯಾಗಿ ಮಲಯಾಳಂ ನಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.. 

Written by - Savita M B | Last Updated : Jan 22, 2024, 02:42 PM IST
  • ಪ್ರಭಾಸ್ ಕಲ್ಕಿ 2898AD ಚಿತ್ರದೊಂದಿಗೆ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
  • ಇತ್ತೀಚೆಗಷ್ಟೇ ಸಲಾರ್ ಚಿತ್ರದ ಮೂಲಕ ಹಿಟ್ ಗಳಿಸಿದ್ದ ಪ್ರಭಾಸ್
  • ಅಭಿಮಾನಿಗಳು ಈ ಚಿತ್ರ ಹಾಲಿವುಡ್ ರೇಂಜ್‌ನಲ್ಲಿ ಇರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ʼಕಲ್ಕಿʼಯಲ್ಲಿ ಪ್ರಭಾಸ್‌ ಜೊತೆ ನಟಿಸೋದು ಈ ಸ್ಟಾರ್‌ ಹೀರೋಯಿನ್..! ಯಾರು ಗೊತ್ತಾ? title=

Prabhas: ಪ್ರಭಾಸ್ ಕಲ್ಕಿ 2898AD ಚಿತ್ರದೊಂದಿಗೆ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ.. ಇತ್ತೀಚೆಗಷ್ಟೇ ಸಲಾರ್ ಚಿತ್ರದ ಮೂಲಕ ಹಿಟ್ ಗಳಿಸಿದ್ದ ಪ್ರಭಾಸ್ ಮೇ 9 ರಂದು ಕಲ್ಕಿ ಸಿನಿಮಾದ ಮೂಲಕ ತೆರೆಗೆ ಬರುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಸುಮಾರು 500 ಕೋಟಿ ಬಜೆಟ್‌ನಲ್ಲಿ ಬಿಡುಗಡೆಯಾಗಲಿದ್ದು... ಈಗಾಗಲೇ ಬಿಡುಗಡೆಯಾಗಿರುವ ಗ್ಲಿಂಪ್ಸಸ್‌ನಿಂದ ಅಭಿಮಾನಿಗಳು ಈ ಚಿತ್ರ ಹಾಲಿವುಡ್ ರೇಂಜ್‌ನಲ್ಲಿ ಇರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಒಟ್ಟಿನಲ್ಲಿ ಕಲ್ಕಿ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ.

ಇದನ್ನೂ ಓದಿ-ಅವರ ಜೊತೆ ಮಾತಾಡುವುದು ನನಗಿಷ್ಟ : ವರ್ತೂರು ಸಂತೋಷ್ ಬಗ್ಗೆ ಮನದ ಮಾತು ಹೇಳಿದ ತನಿಷಾ

ಕಲ್ಕಿ ಚಿತ್ರದಲ್ಲಿ ಬಹುತೇಕ ಎಲ್ಲಾ ಚಿತ್ರರಂಗದ ಸ್ಟಾರ್ ನಟರು ನಟಿಸುತ್ತಿದ್ದು.. ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಇರಲಿದ್ದಾರೆ ಎಂದು ಚಿತ್ರತಂಡ ಈಗಾಗಲೇ ಅಧಿಕೃತವಾಗಿ ಪ್ರಕಟಿಸಿದೆ. ಕಳೆದ ಕೆಲವು ದಿನಗಳಿಂದ ಕಲ್ಕಿ ಚಿತ್ರದಲ್ಲಿ ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್ ಮತ್ತು ರಾಜಮೌಳಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾದಲ್ಲಿ ಮತ್ತೊಬ್ಬ ಮಲಯಾಳಂ ನಟಿ ನಟಿಸಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ.

ಇದನ್ನೂ ಓದಿ-BBK10: ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಪ್ರಶ್ನೆಗಳ ಬಾಣ ಬಿರುಸು!

ಪ್ರಭಾಸ್ ಅಭಿನಯದ ಕಲ್ಕಿ ಚಿತ್ರದಲ್ಲಿ ಮಲಯಾಳಂ ನಾಯಕಿ ಅನ್ನಾ ಬೆನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ಅವರೇ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕುಂಬಳಂಗಿ ನೈಟ್ಸ್ ಚಿತ್ರದ ಮೂಲಕ ಮಲಯಾಳಂನಲ್ಲಿ ಪಾದಾರ್ಪಣೆ ಮಾಡಿ ಹಿಟ್ ಗಳಿಸಿದ ಅನ್ನಾ ಬೆನ್ ಸತತ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದರು. ಸದ್ಯ ಮಲಯಾಳಂನಲ್ಲಿ ಸರಣಿ ಸಿನಿಮಾ ಮಾಡುತ್ತಿದ್ದು.. ಇತ್ತೀಚೆಗಷ್ಟೇ ತಮಿಳಿನಲ್ಲೂ ಚಿತ್ರ ಒಪ್ಪಿಕೊಂಡಿದ್ದಾರೆ.. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News