Watch Video : ಸ್ಟಂಟ್‌ ಶೂಟಿಂಗ್‌ ವೇಳೆ ಕಾಲು ಮುರಿದುಕೊಂಡ ಟೈಗರ್‌ ಶ್ರಾಫ್‌...!

ಬಾಲಿವುಡ್ ನಟ ಟೈಗರ್ ಶ್ರಾಫ್ ಆಕ್ಷನ್ ಮತ್ತು ಸ್ಟಂಟ್ ಸಿನಿಮಾಗಳಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ. ಟೈಗರ್ ಶ್ರಾಫ್ ಅವರ ಸಾಕಷ್ಟು ಸಾಹಸ ಚಿತ್ರಗಳು ಹಿಟ್‌ ಆಗಿವೆ. ತಮ್ಮ ಅಭಿಮಾನಿಗಳಿಗಾಗಿ ಜೀವದ ಹಂಗು ತೊರೆದು ಟೈಗರ್‌ ಅಪಾಯಕಾರಿ ಆಕ್ಷನ್ ಸೀನ್‌ಗಳನ್ನು ಡ್ಯೂಪ್‌ ಇಲ್ಲದೆ ಮಾಡುತ್ತಾರೆ. ಅದಕ್ಕಾಗಿ ಸಾಕಷ್ಟು ಶ್ರಮ ಪಡುತ್ತಾರೆ. ಈ ಬಾರಿ ಅಂತಹದ್ದೇ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಟೈಗರ್ ಶ್ರಾಫ್‌ಗೆ ಅಪಘಾತವಾಗಿದೆ. ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Oct 31, 2022, 10:40 AM IST
  • ಬಾಲಿವುಡ್ ನಟ ಟೈಗರ್ ಶ್ರಾಫ್ ಆಕ್ಷನ್ ಮತ್ತು ಸ್ಟಂಟ್ ಸಿನಿಮಾಗಳಿಂದಲೇ ಫೇಮಸ್‌
  • ಟೈಗರ್‌ ಅಪಾಯಕಾರಿ ಆಕ್ಷನ್ ಸೀನ್‌ಗಳನ್ನು ಡ್ಯೂಪ್‌ ಇಲ್ಲದೆ ಮಾಡುತ್ತಾರೆ
  • ಈ ಬಾರಿ ಅಂತಹದ್ದೇ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಟೈಗರ್ ಶ್ರಾಫ್‌ಗೆ ಅಪಘಾತವಾಗಿದೆ
Watch Video : ಸ್ಟಂಟ್‌ ಶೂಟಿಂಗ್‌ ವೇಳೆ ಕಾಲು ಮುರಿದುಕೊಂಡ ಟೈಗರ್‌ ಶ್ರಾಫ್‌...!  title=

ಬೆಂಗಳೂರು : ಬಾಲಿವುಡ್ ನಟ ಟೈಗರ್ ಶ್ರಾಫ್ ಆಕ್ಷನ್ ಮತ್ತು ಸ್ಟಂಟ್ ಸಿನಿಮಾಗಳಿಂದಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ. ಟೈಗರ್ ಶ್ರಾಫ್ ಅವರ ಸಾಕಷ್ಟು ಸಾಹಸ ಚಿತ್ರಗಳು ಹಿಟ್‌ ಆಗಿವೆ. ತಮ್ಮ ಅಭಿಮಾನಿಗಳಿಗಾಗಿ ಜೀವದ ಹಂಗು ತೊರೆದು ಟೈಗರ್‌ ಅಪಾಯಕಾರಿ ಆಕ್ಷನ್ ಸೀನ್‌ಗಳನ್ನು ಡ್ಯೂಪ್‌ ಇಲ್ಲದೆ ಮಾಡುತ್ತಾರೆ. ಅದಕ್ಕಾಗಿ ಸಾಕಷ್ಟು ಶ್ರಮ ಪಡುತ್ತಾರೆ. ಈ ಬಾರಿ ಅಂತಹದ್ದೇ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಟೈಗರ್ ಶ್ರಾಫ್‌ಗೆ ಅಪಘಾತವಾಗಿದೆ. ಈ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಟೈಗರ್ ಶ್ರಾಫ್, ʼಕಾಂಕ್ರೀಟ್ ವಾಶ್ ಬೇಸಿನ್ ಒಡೆಯುವಾಗ ನನ್ನ ಕಾಲು ಮುರಿದಿದೆ. ನಾನು ಬಲಶಾಲಿಯಾಗಿದ್ದೇನೆ ಅದನ್ನು ಮುರಿಯುತ್ತೇನೆ ಎಂದು ಭಾವಿಸಿದ್ದೆ ಆದ್ರೆ, ಕಾಲು ಮುರಿತು.. ನಾನು ವಾಶ್‌ ಬೇಸಿನ್‌ ಪುಡಿ ಮಾಡದೇ ಬಿಡಲಿಲ್ಲ ಎಂದು ಹೇಳಿದ್ದಾರೆ. ಇನ್ನು ವಿಡಿಯೋದಲ್ಲಿ ಟೈಗರ್ ಆಕ್ಷನ್‌ ಸಿಕ್ವೇನ್ಸ್‌ಗಳನ್ನು ಕಾಣಬಹುದು. 

ಇದನ್ನೂ ಓದಿ: ʼಜೂಮ್ ಕಾಲ್ʼನಲ್ಲಿ ಹಾರರ್‌ ಕಥೆ ಹೇಳಲು ಹೊರಟ ಹೊಸಬರ ಚಿತ್ರತಂಡ...!

ಶೀಘ್ರದಲ್ಲೇ ಟೈಗರ್ ಶ್ರಾಫ್ ಅವರು ʼಬಡೇ ಮಿಯಾನ್ ಚೋಟೆ ಮಿಯಾನ್ʼ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಗಣಪತ್ ಚಿತ್ರದಲ್ಲಿ ಟೈಗರ್ ಜೊತೆಗೆ ಕೃತಿ ಸನೋನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೈಗರ್ ಮತ್ತು ಕೃತಿ ಈ ಹಿಂದೆ ಹೀರೋಪಂತಿ 2 ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದ್ರೆ ಸಿನಿಮಾ ಹಿಟ್‌ ಆಗಿದ್ದಿಲ್ಲ. ಹೀಗಿರುವಾಗ ಗಣಪತ್‌ನಲ್ಲಿ ಈ ಜೋಡಿ ಮತ್ತೆ ಒಂದಾಗಿ ಕುತೂಹಲ ಮೂಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News