ವಿಜಯ್ ಆಂಟೋನಿ ಮನೆಯಲ್ಲಿ ದುರಂತ.. ಶಾಕ್ ನಲ್ಲಿ ಚಿತ್ರರಂಗ!

Vijay Antony Daughter Suicide:  ಸಂಗೀತ ಸಂಯೋಜಕ ಮತ್ತು ನಟ ವಿಜಯ್ ಆಂಟೋನಿ ಅವರ ಪುತ್ರಿ ಮೀರಾ ಆತ್ಮಹತ್ಯೆ ಮಾಡಿಕೊಂಡಿರುವುದು ಅಭಿಮಾನಿಗಳು ಮತ್ತು ಚಿತ್ರರಂಗದಲ್ಲಿ ದೊಡ್ಡ ಆಘಾತವನ್ನುಂಟು ಮಾಡಿದೆ. 

Written by - Savita M B | Last Updated : Sep 19, 2023, 11:45 AM IST
  • ವಿಜಯ್ ಆಂಟೋನಿ ತಮಿಳು ಚಿತ್ರರಂಗದಲ್ಲಿ ಅದಮ್ಯ ಸಂಗೀತ ಸಂಯೋಜಕರಾಗಿ ಹೊರಹೊಮ್ಮುತ್ತಿದ್ದಾರೆ
  • ವಿಜಯ್ ತಮ್ಮ ನಟನೆಯಿಂದಲೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
  • ಸದ್ಯ ವಿಜಯ್ ಆಂಟನಿ ಪುತ್ರಿ ಮೀರಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲ್ಲರಲ್ಲಿ ಆಘಾತವನ್ನುಂಟು ಮಾಡಿದೆ
ವಿಜಯ್ ಆಂಟೋನಿ ಮನೆಯಲ್ಲಿ ದುರಂತ.. ಶಾಕ್ ನಲ್ಲಿ ಚಿತ್ರರಂಗ! title=

Vijay Antony: ವಿಜಯ್ ಆಂಟೋನಿ ತಮಿಳು ಚಿತ್ರರಂಗದಲ್ಲಿ ಅದಮ್ಯ ಸಂಗೀತ ಸಂಯೋಜಕರಾಗಿ ಹೊರಹೊಮ್ಮುತ್ತಿದ್ದಾರೆ. ಅವರು ತಮ್ಮ ವಿಶಿಷ್ಟ ಸಂಗೀತದಿಂದ ಎಲ್ಲರಿಗೂ ಮೋಡಿ ಮಾಡಿದ್ದಾರೆ. ಸಂಗೀತ ಸಂಯೋಜಕರಾಗಿ ತಮಿಳು ಜನರ ಮನ ಸೆಳೆದಿರುವ ವಿಜಯ್ ತಮ್ಮ ನಟನೆಯಿಂದಲೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

ಸಲೀಂ, ಪಿಚೈಕರನ್ 2, ಕೊಡಿಲ್ ಒರುವನ್, ಪಿಚೈಕರನ್ 2 ಸೇರಿದಂತೆ ಅವರ ಚಲನಚಿತ್ರಗಳು ಜನರ ಗಮನ ಸೆಳೆದವು. ಇವು ಉತ್ತಮ ಕಲೆಕ್ಷನ್‌ ಜೊತೆಗೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಾಗಿವೆ. ಇತ್ತೀಚೆಗೆ ಬಿಡುಗಡೆಯಾದ ಅವರ ಚಿತ್ರ ಪಿಚೈಕಾರನ್ 2 ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. 

ವಿಜಯ್ ಆಂಟೋನಿ ಅವರ ಮೃದು ಮಾತು ಮತ್ತು ಪ್ರೋತ್ಸಾಹಿಸುವ ಸ್ವಭಾವ ಅವರನ್ನು ಎದ್ದು ಕಾಣುವಂತೆ ಮಾಡಿತು. ಇದಲ್ಲದೆ, ಅವರು ನಿಯಮಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ವಿಚಾರಗಳನ್ನು ಮತ್ತು ಯುವಕರ ಬೆಳವಣಿಗೆಗೆ ಸಹಾಯ ಮಾಡುವ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. 

ಅದೇ ರೀತಿ ವಿಜಯ್ ಆಂಟೋನಿ ಕೂಡ ಕೆಲವು ತಿಂಗಳ ಹಿಂದೆ ತಮ್ಮ ಆತ್ಮಹತ್ಯಾ ಆಲೋಚನೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅದರಲ್ಲಿ ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರಬೇಡಿ ಎಂದು ಹೇಳಿದ್ದರು. 

ಇದನ್ನೂ ಓದಿ-ಅನಿರುದ್ಧ್ ರವಿಚಂದರ್ ಜೊತೆಗಿನ ವದಂತಿಯ ಬಗ್ಗೆ ಮೌನ ಮುರಿದ ಕೀರ್ತಿ ಸುರೇಶ್ ಏನು ಹೇಳಿದ್ರು?

ಇನ್ನು ವಿಜಯ್‌ ಅವರು 2006 ರಲ್ಲಿ ಫಾತಿಮಾ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳು ಮೀರಾ 12ನೇ ತರಗತಿ ಓದುತ್ತಿದ್ದಳು.  ಆದರೆ ಇಂದು ಬೆಳಗ್ಗೆ ಚೆನ್ನೈನ ಡಿಡಿಕೆ ರಸ್ತೆಯಲ್ಲಿರುವ ಮನೆಯಲ್ಲಿ ಮೀರಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ವಿಜಯ್ ಆಂಟನಿ ಪುತ್ರಿ ಮೀರಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಭಾರೀ ಆಘಾತವನ್ನುಂಟು ಮಾಡಿದೆ. ಯುವಕರ ಆತ್ಮಹತ್ಯೆ ವಿರುದ್ಧ ಹಲವು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ವಿಜಯ್ ಆಂಟೋನಿ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತ ತಂದಿದೆ. 

ಅಲ್ಲದೇ ಆತ್ಮಹತ್ಯೆಗೆ ಕಾರಣ ಹಾಗೂ ಕೌಟುಂಬಿಕ ಸಮಸ್ಯೆಯಿಂದ ಒತ್ತಡ ಉಂಟಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೆಲ್ಲವನ್ನು ಹೊರತುಪಡಿಸಿ ನಮ್ಮ ಸುತ್ತಮುತ್ತ ಸಾವಿರಾರು ಸಮಸ್ಯೆಗಳಿದ್ದರೂ ಆತ್ಮಹತ್ಯೆಯೊಂದೇ ಎಲ್ಲದಕ್ಕೂ ಪರಿಹಾರವಲ್ಲ. 

ಇದನ್ನೂ ಓದಿ-ಒಂದೇ ಒಂದು ಸಿನಿಮಾದಿಂದ ಈ ಸೌತ್ ನಟಿಗೆ ಬಾಲಿವುಡ್‌ನಲ್ಲಿ ಭಾರೀ ಬೇಡಿಕೆ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News