ನವದೆಹಲಿ: ಇತ್ತೀಚಿಗಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ಟೀಕೆಯ ಬಗ್ಗೆ ಟ್ವಿಂಕಲ್ ಖನ್ನಾ "ಪ್ರಧಾನ ಮಂತ್ರಿ ನಾನು ಅಸ್ತಿತ್ವದಲ್ಲಿ ಇರುವುದರ ಬಗ್ಗೆ ತಿಳಿದಿರುವುದಷ್ಟೇ ಅಲ್ಲದೆ ನನ್ನ ವರ್ಕ್ ಗಳನ್ನು ಅವರು ಓದುತ್ತಾರೆ" ಎಂದು ಟ್ವೀಟ್ ಮಾಡಿದ್ದರು.
ಇದಾದ ಬೆನ್ನಲ್ಲೇ ಟ್ವಿಟ್ಟರ್ ನಲ್ಲಿ ಹಲವಾರು ರೀತಿಯ ಟ್ರೋಲ್ ಗಳ ಸುರಿಮಳೆಯೇ ಪ್ರಾರಂಭವಾಯಿತು. ಟ್ರೋಲ್ ಮಾಡಲಾಗಿರುವ ಟ್ವೀಟ್ ವೊಂದರಲ್ಲಿ " ನೀವು ಮತ್ತು ಅಕ್ಷಯ ಮೋದಿಯನ್ನು ಹೋಗಳುತ್ತಿದ್ದಿರಿ, ಅದರಲ್ಲಿ ಮುಚ್ಚಿಡುವಂತದ್ದೇನಿದೆ? ನೀವಿಬ್ಬರು ಬಿಜೆಪಿಗೆ ಸೇರುವ ಯೋಜನೆ ಇದೆ ಆದ್ದರಿಂದ ನೇರವಾಗಿ ವಿಷಯಕ್ಕೆ ಬನ್ನಿ " ಎಂದು ಹೇಳಿದೆ.
ಈಗ ಈ ರೀತಿಯ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿರುವ ಟ್ವಿಂಕಲ್ ಖನ್ನಾ "ಇದರಲ್ಲಿ ಹೆಚ್ಚು ಇಲ್ಲ, ಕಡಿಮೆಯೂ ಇಲ್ಲ, ಇಂತಹ ಎಲ್ಲ ಪ್ರತಿಕ್ರಿಯೆಗಳನ್ನು ನಾನು ಅನುಮೋದನೆ ಭಾಗವಾಗಿ ನೋಡುವುದಿಲ್ಲ. ಈಗ ನಾನು ಉದಾರವಾಗಿ ಭಾಗವಹಿಸುವ ಪಾರ್ಟಿ ಎಂದರೆ ಸ್ವಲ್ಪ ಪ್ರಮಾಣದಲ್ಲಿ ವೋಡ್ಕಾವನ್ನು ಸ್ವೀಕರಿಸಿ ಮುಂದಿನ ದಿನದವರೆಗೆ ಹ್ಯಾಂಗೋವರ್ ನಲ್ಲಿರುವುದು" ಎಂದು ಟ್ವೀಟ್ ಮಾಡಿದ್ದರು.
ಆಗಾಗ ಸಾಮಾಜಿಕ ಮಾಧ್ಯಮಗಳ ಮೂಲಕ ಯಾವಾಗಲೂ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಇತ್ತಿಚಿಗಿನ ಸಂದರ್ಶನದಲ್ಲಿ ಟ್ವಿಂಕಲ್ ಖನ್ನಾ ಟ್ವೀಟ್ ಗಳ ಕುರಿತಾಗಿ ಪ್ರಸ್ತಾಪಿಸಿದ್ದರು.