Huccha movie: ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಸುದೀಪ್ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮಾಸ್ ಹೀರೋ ಮೂಲಕ ಪರದೆಯ ಮೇಲೆ ಮಿಂಚಿದ್ದಾರೆ. ಅಭಿನಯದ ಮೂಲಕ ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸ್ಪರ್ಶ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಹುಚ್ಚ (2001) ಸಿನಿಮಾದಲ್ಲಿನ ಅಭಿನಯದ ಮೂಲಕ ಮನೆಮಾತಾದರು. ವಿಕ್ರಮ್ ಅವರ ಸೇತು ಚಿತ್ರದ ರೀಮೇಕ್ ಆಗಿರುವ ಹುಚ್ಚ ಚಿತ್ರದಲ್ಲಿ ಸುದೀಪ್ ಅಮೋಘ ಅಭಿನಯ ಜನರ ಮನಸೆಳೆಯಿತು.
ಸುದೀಪ್ ಸಿನಿ ಕರಿಯರ್‌ಗೆ ಟರ್ನಿಂಗ್ ಪಾಯಿಂಟ್ ಆದ ʻಹುಚ್ಚʼ ಸಿನಿಮಾ ಮೂಲಕ ಜನಪ್ರಿಯತೆ ಪಡೆದರು. ʻಹುಚ್ಚʼ ಸಿನಿಮಾ ಸುದೀಪ್ ಒಳಗಿದ್ದ ಆ ಅಭಿನಯ ಚಕ್ರವರ್ತಿ ಜನರ ಮುಂದೆ ಬಂದರು. 2001 ರ ಜುಲೈ 6 ರಂದು ಬಿಡುಗಡೆಯಾದ ʻಹುಚ್ಚʼ ಸಿನಿಮಾ ಸುದೀಪ್ ಅವರಿಗೆ, ಮಾಸ್ ಇಮೇಜ್ ಜೊತೆಗೆ ʻಕಿಚ್ಚʼ ಎಂಬ ಬಿರುದನ್ನು ತಂದುಕೊಟ್ಟಿತು.
ಇದನ್ನೂ ಓದಿ: Kiccha Sudeep: ʻಕಿಚ್ಚʼನಿಗೆ ʻಜುಲೈ 6ʼ ಸಖತ್ ಸ್ಪೆಷಲ್.. ʻಐರನ್ ಲೆಗ್ʼ ಎಂದವರಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟ ದಿನ!
ಇಂದಿಗೆ ʻಹುಚ್ಚʼ ಸಿನಿಮಾ ರಿಲೀಸ್ ಆಗಿ 22 ವರ್ಷವಾಯಿತು. ಅಚ್ಚರಿಯ ಸಂಗತಿ ಎಂದರೆ, ಹುಚ್ಚ ಸಿನಿಮಾಗೆ ನಾಯಕನಾಗಿ ಸುದೀಪ್ ಮೊದಲ ಆಯ್ಕೆಯಾಗಿರಲಿಲ್ಲ. ವರದಿಯ ಪ್ರಕಾರ, ಈ ಚಿತ್ರದ ಆಫರ್‌ನ್ನು ಶಿವರಾಜಕುಮಾರ್ ಮತ್ತು ಉಪೇಂದ್ರ ಅವರಿಗೆ ನೀಡಲಾಗಿತ್ತು. ಅವರು ಚಿತ್ರದ ದ್ವಿತೀಯಾರ್ಧದಲ್ಲಿ ನಾಯಕ ಮಾನಸಿಕ ಅಸ್ವಸ್ಥನಾಗುತ್ತಾನೆ ಎಂಬ ಕಾರಣಕ್ಕೆ ಈ ಸಿನಿಮಾದಲ್ಲಿ ನಟಿಸಲು ತಿರಸ್ಕರಿಸಿದರು. ಆ ಬಳಿಕ ಈ ಸಿನಿಮಾದ ನಾಯಕನಾಗಿ ಸುದೀಪ್ ಆಯ್ಕೆಯಾದರು. ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ ಸಿನಿಮಾದಲ್ಲಿ ಅವಿನಾಶ್, ಪವಿತ್ರಾ ಲೋಕೇಶ್ ಮತ್ತು ರೇಖಾ ಸೇರಿದಂತೆ ಪ್ರಬಲ ತಾರಾಗಣವಿದೆ.
Today #Huccha Movie Completed 22 Years Celebration 🎉🎊❤️#22YearsOfBBHuccha @KicchaSudeep #Kiccha46 pic.twitter.com/ZvApsra4DZ
— Sapthami_Gowda (@gowdasaptami) July 6, 2023
ಕೆ. ಮುಸ್ತಾಫಾ, ಮೆಹರುನ್ನೀಸಾ ರೆಹಮಾನ್ ಹುಚ್ಚ ಸಿನಿಮಾ ನಿರ್ಮಿಸಿದ್ದಾರೆ. ಓಂ ಪ್ರಕಾಶ್ ರಾವ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಒಂದೆಡೆ ಆ್ಯಂಗ್ರಿ ಯಂಗ್‌ಮ್ಯಾನ್ ಆಗಿ ಎಲ್ಲರ ಮನಗೆಲ್ಲುವ ಪಾತ್ರ, ಮತ್ತೊಂಡೆ ಪ್ರೀತಿಯಲ್ಲಿ ಸೋತು ಮಾನಸಿಕ ಅಸ್ವಸ್ಥನಾಗಿ ಜನರ ಕಣ್ಣಾಲೆಯನ್ನು ಒದ್ದೆಯಾಗಿಸುವ ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ಸುದೀಪ್ ತಮ್ಮ ನಟನೆಯನ್ನು ಸಾಬೀತು ಮಾಡಿದ್ದಾರೆ. ಈ ಸಿನಿಮಾದಿಂದ ಸುದೀಪ್ ಅನೇಕ ಜನರ ನೆಚ್ಚಿನ ನಾಯಕರಾದರು. ಅಲ್ಲದೇ ʻಕಿಚ್ಚʼ ಎಂಬ ಹೆಸರು ಪಡೆದು ಖ್ಯಾತರಾದರು.
ಇದನ್ನೂ ಓದಿ: 'Genie Film: ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ರವರ ಜೀನಿ' ಸಿನಿಮಾ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.