close

News WrapGet Handpicked Stories from our editors directly to your mailbox

ಜೂನ್ 14ಕ್ಕೆ ಉಪೇಂದ್ರ ಅಭಿನಯದ 'ಐ ಲವ್ ಯೂ' ತೆರೆಗೆ

ಇತ್ತೀಚೆಗಷ್ಟೇ ಚಿತ್ರದ ಸೆನ್ಸಾರ್ ಮುಗಿದಿದ್ದು, ಯು/ಎ ಪ್ರಮಾಣಪತ್ರ ಸಿಕ್ಕ ಬೆನ್ನಲೇ ಚಿತ್ರ ತಂಡ ಬಿಡುಗಡೆ ದಿನಾಂಕ ನಿಗದಿ ಮಾಡಿದೆ. 

Updated: May 9, 2019 , 02:50 PM IST
ಜೂನ್ 14ಕ್ಕೆ ಉಪೇಂದ್ರ ಅಭಿನಯದ 'ಐ ಲವ್ ಯೂ' ತೆರೆಗೆ

ಬೆಂಗಳೂರು: ಇದುವರೆಗೂ ಉತ್ತಮ ಪ್ರಜಾಕಿಯ ಪಕ್ಷದ ಮೂಲಕ ರಾಜಕೀಯದಲ್ಲಿ ಬ್ಯುಸಿ ಆಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯೂ' ಚಿತ್ರ ಇದೇ ಜೂನ್ 14ರಂದು ಬಿಡುಗಡೆಗೆ ಸಿದ್ಧವಾಗಿದೆ. 

ಇತ್ತೀಚೆಗಷ್ಟೇ ಚಿತ್ರದ ಸೆನ್ಸಾರ್ ಮುಗಿದಿದ್ದು, ಯು/ಎ ಪ್ರಮಾಣಪತ್ರ ಸಿಕ್ಕ ಬೆನ್ನಲೇ ಚಿತ್ರ ತಂಡ ಬಿಡುಗಡೆ ದಿನಾಂಕ ನಿಗದಿ ಮಾಡಿದೆ. ಚಿತ್ರದಲ್ಲಿ ಉಪೇಂದ್ರ ಅವರು ಕಾಲೇಜು ಹುಡುಗನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ರಚಿತಾ ರಾಮ್ ಸಖತ್ ಬೋಲ್ಡ್ ಆಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರವನ್ನು ಆರ್.ಚಂದ್ರು ನಿರ್ದೇಶಿಸಿದ್ದಾರೆ. 

ಉಳಿದಂತೆ ಪ್ರದೀಪ್‌ ರಾವತ್‌, ಶಯ್ನಾಜಿ ಶಿಂಧೆ, ರವಿಕಾಳೆ, ರವಿಶಂಕರ್‌ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದು, ನವೀನ್‌ ಕುಮಾರ್‌ ಛಾಯಾಗ್ರಹಣ, ತೋಟಂಬ್ಲೆ ಸಂಗೀತ ಸಂಯೋಜನೆಯಿದ್ದು ಹಿನ್ನಲೆ ಸಂಗೀತವನ್ನು ಗುರುಕಿರಣ್ ನೀಡಿದ್ದಾರೆ.